Ind vs NZ: ಶ್ರೇಯಸ್ ಅಯ್ಯರ್ ತಂದೆ 4 ವರ್ಷಗಳಿಂದ ವಾಟ್ಸಾಪ್ ಡಿಪಿ ಬದಲಾಯಿಸಿಲ್ಲ, ಕಾರಣ ತಿಳಿದರೆ ಅಚ್ಚರಿ ಆಗುತ್ತೆ
IND vs NZ: ಟೀಂ ಇಂಡಿಯಾ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದ ಮೊದಲ ದಿನ ಶ್ರೇಯಸ್ ಅಯ್ಯರ್ 75 ರನ್ ಗಳಿಸಿ ಅಜೇಯರಾಗಿ ಮರಳಿದರು. ಅಯ್ಯರ್ ಅವರ ಈ ಇನ್ನಿಂಗ್ಸ್ ಅಭಿಮಾನಿಗಳ ಮನ ಗೆದ್ದಿತ್ತು.
ನವದೆಹಲಿ: ಟೀಂ ಇಂಡಿಯಾ ಸದ್ಯ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನಾಡುತ್ತಿದೆ. ಈ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದೆ. ಈ ಪಂದ್ಯದಲ್ಲಿ ದೊಡ್ಡ ಬ್ಯಾಟ್ಸ್‌ಮನ್‌ಗಳು ವಿಫಲರಾದರೆ, ಮೊದಲ ಪಂದ್ಯವನ್ನಾಡಿದ ಶ್ರೇಯಸ್ ಅಯ್ಯರ್ 75 ರನ್ ಗಳಿಸಿ ಅಜೇಯರಾಗಿ ಮರಳಿದರು. ಈ ಮಧ್ಯೆ, ಶ್ರೇಯಸ್ ಅಯ್ಯರ್ ತಂದೆಯ ಬಗ್ಗೆ ಅಚ್ಚರಿಯ ವಿಷಯವೊಂದು ಬಹಿರಂಗವಾಗಿದೆ.
ನಾಲ್ಕು ವರ್ಷಗಳಿಂದ ಬದಲಾಗಿಲ್ಲ ಇವರ ವಾಟ್ಸಾಪ್ ಡಿಪಿ:
2017ರ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಮಗ ಕೈಯಲ್ಲಿ ಹಿಡಿದಿರುವ ಫೋಟೋವನ್ನು ಶ್ರೇಯಸ್ ಅಯ್ಯರ್ ತಂದೆ (Shreyas Iyer Father) ಸಂತೋಷ್ ಅವರ ವಾಟ್ಸಾಪ್ ಡಿಪಿಯಲ್ಲಿ ಹಾಕಿದ್ದಾರೆ. ವಿಶೇಷವೆಂದರೆ ಕಳೆದ ನಾಲ್ಕು ವರ್ಷಗಳಿಂದ ಅವರ ಈ ಡಿಪಿ ಬದಲಾಗಿಲ್ಲ. ಇದಕ್ಕೆ ಕಾರಣ ಅವರು ಯಾವಾಗಲೂ ತಮ್ಮ ಮಗ ಟೆಸ್ಟ್ ಕ್ರಿಕೆಟ್ ಆಡುವುದನ್ನು ನೋಡಲು ಬಯಸಿದ್ದರು. ಗುರುವಾರ ನ್ಯೂಜಿಲೆಂಡ್ ವಿರುದ್ಧ ಶ್ರೇಯಸ್ ಟೆಸ್ಟ್‌ಗೆ ಪದಾರ್ಪಣೆ ಮಾಡಿದಾಗ ಅವರ ಕನಸು ನನಸಾಯಿತು. ಅಯ್ಯರ್ ಅವರು ಅಜೇಯ ಅರ್ಧಶತಕವನ್ನು ಗಳಿಸುವ ಮೂಲಕ ತಮ್ಮ ಮೊದಲ ಟೆಸ್ಟ್ ಅನ್ನು ಸ್ಮರಣೀಯವಾಗಿಸಿದರು. ಈ ಸಂದರ್ಭದಲ್ಲಿ ಸುದ್ದಿ ಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ ಶ್ರೇಯಸ್ ಅಯ್ಯರ್ ಅವರ ತಂದೆ, ಈ ಡಿಪಿ ನನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ- ಕೊಹ್ಲಿಗೆ ಡಾನ್ಸ್ ಕಲಿಸಿಕೊಟ್ಟ ಚಹಲ್ ಪತ್ನಿ, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ ವಿಡಿಯೋ
ಮಗ ಟೆಸ್ಟ್ ಕ್ರಿಕೆಟ್ ಆಡುವುದನ್ನು ನೋಡುವ ಕನಸು:
ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವಾಗ ವಿರಾಟ್ ಕೊಹ್ಲಿಗೆ ಸ್ಟ್ಯಾಂಡ್‌ಬೈ ಆಗಿ ತಂಡದಲ್ಲಿದ್ದರು. 'ಆ ಸಮಯದಲ್ಲಿ ಪಂದ್ಯವನ್ನು ಗೆದ್ದ ನಂತರ, ಅವರಿಗೆ ಟ್ರೋಫಿ ನೀಡಿದರು. ಅವರು ಆ ಟ್ರೋಫಿಯನ್ನು ಹೊಂದಿದ್ದಾರೆ ಮತ್ತು ಆ ಕ್ಷಣ ನನಗೆ ಅಮೂಲ್ಯವಾಗಿದೆ. ಶ್ರೇಯಸ್ (Shreyas Iyer) ಭಾರತ ಪರ ಟೆಸ್ಟ್ ಆಡಲಿ ಎಂದು ಕಾಯುತ್ತಿದ್ದೆ. ಅಜಿಂಕ್ಯ ರಹಾನೆ ಅವರು ಆಡುತ್ತಿದ್ದಾರೆ ಎಂದು ಹೇಳಿದಾಗ ಅದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿತ್ತು. ಟೆಸ್ಟ್ ಕ್ರಿಕೆಟ್ ನನಗೆ ಐಪಿಎಲ್, ಒಡಿಐ ಅಥವಾ ಇನ್ನಾವುದೇ ಸ್ವರೂಪಕ್ಕಿಂತ ಹೆಚ್ಚು ಎಂದು ಅಯ್ಯರ್ ಅವರ ತಂದೆ ಹೇಳಿದರು.
ಇದನ್ನೂ ಓದಿ- IND vs NZ : ಮೊದಲ ಟೆಸ್ಟ್ ಮ್ಯಾಚ್ ನಲ್ಲಿ ಶಕ್ತಿ ಪ್ರದರ್ಶಿಸಿದ ಅಯ್ಯರ್-ಜಡೇಜಾ!
ಟೆಸ್ಟ್ ಕ್ಯಾಪ್ ನೀಡಿದ ಗವಾಸ್ಕರ್ :
ಶ್ರೇಯಸ್ ಸುನಿಲ್ ಗವಾಸ್ಕರ್ ಅವರಿಂದ ಟೆಸ್ಟ್ ಕ್ಯಾಪ್ ಪಡೆದರು, ಇದು ನನಗೆ ಹೆಮ್ಮೆಯ ಕ್ಷಣವಾಗಿದೆ. ಸುನಿಲ್ ಗವಾಸ್ಕರ್ ನನ್ನ ನೆಚ್ಚಿನ ಕ್ರಿಕೆಟಿಗರಲ್ಲಿ ಒಬ್ಬರು. ಹಾಗಾಗಿ ಇದು ಹೆಮ್ಮೆಯ ಕ್ಷಣ. ನನ್ನ ಮಗ ಸುನೀಲ್ ಗವಾಸ್ಕರ್ ಅವರಿಂದ ಟೆಸ್ಟ್ ಕ್ಯಾಪ್ ಪಡೆದ ಆ ಸಂತೋಷದ ಕ್ಷಣವನ್ನು ಬಣ್ಣಿಸಲು ಪದಗಳೇ ಇಲ್ಲ ಎಂದವರು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.