Shubman Gill New Record: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಬಿರುಸಿನ ಶತಕ ಸಿಡಿಸಿದ್ದಾರೆ. 63 ಎಸೆತಗಳಲ್ಲಿ 126 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ. ಇನ್ನು ಗಿಲ್ 54 ಎಸೆತಗಳಲ್ಲಿ ಅದಾಗಲೇ ಶತಕ ಪೂರೈಸಿದ್ದರು. ಶತಕದೊಂದಿಗೆ ಶುಭಮನ್ ಗಿಲ್ ಎಲ್ಲಾ ಮೂರು ಮಾದರಿಗಳಲ್ಲಿ ಶತಕ ಸಿಡಿಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ ಮತ್ತು ಕೆಎಲ್ ರಾಹುಲ್ ಅವರ ಎಲೈಟ್ ಪಟ್ಟಿಗೆ ಇದೀಗ ಸೇರಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Shubman Gill: ಮತ್ತೆ ‘ದಿಲ್ ಗೆದ್ದ ಗಿಲ್’: ಅಬ್ಬರದ ಬ್ಯಾಟಿಂಗ್-T20Iನಲ್ಲಿ ಮೊದಲ ಶತಕ ಬಾರಿಸಿದ ಶುಭ್ಮನ್


ಶುಭ್ಮನ್ ಗಿಲ್ ಟಿ20ಯಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಭಾರತೀಯ, ಜೊತೆಗೆ ಸುರೇಶ್ ರೈನಾ ದಾಖಲೆಯನ್ನು ಮುರಿದಿದ್ದಾರೆ. ಗಿಲ್ 23 ವರ್ಷ 146 ದಿನಗಳ ವಯಸ್ಸಿನಲ್ಲಿರುವಾಗ ಈ ದಾಖಲೆ ಬರೆದಿದ್ದರೆ, ರೈನಾ 23 ವರ್ಷ ಮತ್ತು 156 ದಿನಗಳ ವಯಸ್ಸಿನಲ್ಲಿ ಈ ಸಾಧನೆಯನ್ನು ಮಾಡಿದ್ದರು. ಸುರೇಶ್ ರೈನಾ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 101 ರನ್‌ಗಳ ಇನಿಂಗ್ಸ್‌ ಆಡಿದ್ದರು.


T20 ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕ:


ಭಾರತ ತಂಡದ ಸೂಪರ್ ಸ್ಟಾರ್ ಓಪನರ್ ಶುಭಮನ್ ಗಿಲ್ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಬ್ಬರಿಸಿದ್ದಾರೆ. ಪ್ರವಾಸಿ ತಂಡದ ಬೌಲರ್ ಗಳಿಗೆ ಬಿರುಸಿನ ಕ್ಲಾಸ್ ತೆಗೆದುಕೊಂಡು ಭರ್ಜರಿ ಶತಕ ಬಾರಿಸಿದ್ದಾರೆ. ಶುಭಮನ್ ಗಿಲ್ 54 ಎಸೆತಗಳಲ್ಲಿ ಶತಕ ಪೂರೈಸಿದ್ದು ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕಲು ಸಹಾಯ ಮಾಡಿದೆ. ಇನ್ನು ಗಿಲ್ ತಮ್ಮ T20 ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಬೌಂಡರಿಗಳೊಂದಿಗೆ ಪೂರ್ಣಗೊಳಿಸಿದರು.


ಇದನ್ನೂ ಓದಿ: Team India: ಕೀವೀಸ್ ಕಿವಿ ಹಿಂಡಿದ ಟೀಂ ಇಂಡಿಯಾ: ಬೃಹತ್ ಮೊತ್ತ ಕಲೆಹಾಕಿ ಸರಣಿ ಗೆದ್ದ ಹಾರ್ದಿಕ್ ಪಡೆ


ಟೀಂ ಇಂಡಿಯಾಗೆ ಭರ್ಜರಿ ಗೆಲುವು:


ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಮತ್ತು ಕೊನೆಯ ಟಿ20 ಪಂದ್ಯಾಟದಲ್ಲಿ ಕೀವೀಸ್ ತಂಡಕ್ಕೆ ಸೋಲುಣಿಸಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. 169 ರನ್ ಗಳ ಭರ್ಜರಿ ಜಯ ಗಳಿಸಿದ ಟೀಂ ಇಂಡಿಯಾ ನಾಲ್ಕು ವಿಕೆಟ್ ನಷ್ಟಕ್ಕೆ 234 ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನತಿದ ಕೀವೀಸ್, 12 ಓವರ್ ಆಗುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 66 ರನ್ ಗೆ ಸೋಲೊಪ್ಪಿಕೊಂಡಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.