Shubman Gill Helmet : `ವಿಚಿತ್ರ ಹೆಲ್ಮೆಟ್` ಧರಿಸಿ ವೈರಲ್ ಆದ ಶುಭಮನ್ ಗಿಲ್..!
Ahmedabad Test : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಉಭಯ ತಂಡಗಳ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಶುಭಮನ್ ಗಿಲ್ ಆರಂಭಿಕರಾಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆದ್ರೆ, ಇಲ್ಲೇ ಶುಭಮನ್ ಧರಿಸಿದ್ದ ವಿಚಿತ್ರ ಹೆಲ್ಮೆಟ್ ಬಗ್ಗೆ ಭಾರಿ ಸುದ್ದಿ ಹರಿದಾಡುತ್ತಿದೆ.
Shubman Gill Helmet, Ahmedabad Test : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಉಭಯ ತಂಡಗಳ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಶುಭಮನ್ ಗಿಲ್ ಆರಂಭಿಕರಾಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆದ್ರೆ, ಇಲ್ಲೇ ಶುಭಮನ್ ಧರಿಸಿದ್ದ ವಿಚಿತ್ರ ಹೆಲ್ಮೆಟ್ ಬಗ್ಗೆ ಭಾರಿ ಸುದ್ದಿ ಹರಿದಾಡುತ್ತಿದೆ.
ಮೊದಲ ದಿನವೇ ಶತಕ ಸಿಡಿಸಿದ ಖವಾಜಾ
ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಆರಂಭಿಕ ದಿನವೇ ಶತಕ ಸಿಡಿಸಿದ್ದರು. 104 ರನ್ ಗಳಿಸಿ ಅಜೇಯರಾಗಿ ಮರಳಿದರು. ಇದುವರೆಗೆ 251 ಎಸೆತಗಳನ್ನು ಎದುರಿಸಿರುವ ಅವರು 15 ಬೌಂಡರಿಗಳನ್ನು ಬಾರಿಸಿದ್ದಾರೆ. ಭಾರತದ ಪರ ವೇಗಿ ಮೊಹಮ್ಮದ್ ಶಮಿ 2 ವಿಕೆಟ್ ಪಡೆದರೆ, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ 1-1 ವಿಕೆಟ್ ಪಡೆದರು.
ಇದನ್ನೂ ಓದಿ : Video : ಮೈದಾನದಲ್ಲೇ ಬ್ಯಾಟ್ಸ್‌ಮನ್‌ಗೆ ಕಿಸ್ ಕೊಟ್ಟ ಬೌಲರ್.. ವಿಡಿಯೋ ವೈರಲ್
ವಿಚಿತ್ರ ಹೆಲ್ಮೆಟ್ ಧರಿಸಿದ ಗಿಲ್
ಸೋಶಿಯಲ್ ಮೀಡಿಯಾದಲ್ಲಿ ಶುಭಮನ್ ಗಿಲ್ ಧರಿಸಿದ ಹೆಲ್ಮೆಟ್ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಫೀಲ್ಡಿಂಗ್ ಮಾಡುವಾಗ ಗಿಲ್
ವಿಚಿತ್ರ ಹೆಲ್ಮೆಟ್ ಧರಿಸಿದ್ದರು. ಅವರು ಧರಿಸಿದ್ದ ಫೋಟೋಗಳು ಈಗ ವೈರಲ್ ಆಗುತ್ತಿವೆ. ವಾಸ್ತವವಾಗಿ, ಗಿಲ್ ದರಿಸಿದ್ದ ಹೆಲ್ಮೆಟ್‌ನಲ್ಲಿ ಗ್ರಿಲ್ ಇದೆ, ಇದನ್ನು ನೋಡಿದ ಅಭಿಮಾನಿಗಳು ಅನುಭವಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಅವರನ್ನು ನೆನಪಿಸಿಕೊಂಡರು. ಆಸ್ಟ್ರೇಲಿಯಾದ ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ಶುಭ್‌ಮನ್ ಗಿಲ್ ವಿಶೇಷ ಹೆಲ್ಮೆಟ್ ಧರಿಸಿ ಫೀಲ್ಡಿಂಗ್ ಮಾಡುತ್ತಿದ್ದ ದೃಶ್ಯ ಕಂಡುಬಂತು.
ಹೆಲ್ಮೆಟ್ ಅನ್ನು ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಧರಿಸಿದ್ದರು, ಅದರ ಗ್ರಿಲ್ ಕೆಳಗೆ ಬಾಗುವ ಬದಲು ಮುಂದಕ್ಕೆ ಹರಡಿತ್ತು. ಇದರೊಂದಿಗೆ ಮೊದಲು ಖಾಲಿಯಿದ್ದ ಕಣ್ಣುಗಳ ಭಾಗಕ್ಕೂ ಗ್ರಿಲ್ ಅಳವಡಿಸಲಾಗಿದೆ. ಈ ಹೆಲ್ಮೆಟ್ ಫೀಲ್ಡರ್‌ನ ಕುತ್ತಿಗೆಯ ಮೇಲೆ ಭಾರಿ ಮಟ್ಟದ ಗಾಯಗಳಿಂದ ತಡೆಯುತ್ತದೆ. ಇದಕ್ಕೂ ಮುನ್ನ ದಿನೇಶ್ ಕಾರ್ತಿಕ್ ಕೂಡ ವಿಕೆಟ್ ಕೀಪಿಂಗ್ ವೇಳೆ ವಿಚಿತ್ರ ಹೆಲ್ಮೆಟ್ ಧರಿಸಿ ಸುದ್ದಿಯಾಗಿದ್ದರು. ಅವರು ಬೇಸ್‌ಬಾಲ್‌ನಲ್ಲಿ ಬಳಸುವ ಹೆಲ್ಮೆಟ್ ಅನ್ನು ಬಳಸಿದ್ದ.
ಇದನ್ನೂ ಓದಿ : IND vs AUS: ಹೊಸ ದಾಖಲೆಯ ಹೊಸ್ತಿಲಲ್ಲಿ ಆರ್ ಅಶ್ವಿನ್ ! ಸರಿಗಟ್ಟಲಿದ್ದಾರೆ ಅನಿಲ್ ಕುಂಬ್ಳೆ ದಾಖಲೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.