ಬ್ರೇಕಪ್ ಬಳಿಕ ಮತ್ತೆ ಒಂದಾದ ಸ್ಟಾರ್ ಜೋಡಿ.. ಮೂರು ವರ್ಷದ ಪ್ರೀತಿಗೆ ಮತ್ತೆ ಮುನ್ನುಡಿ ಬರೆದ ಶುಭ್ಮನ್-ಸಾರಾ!
Shubman Gill and Sara Tendulkar Dating: ಬ್ರೇಕಪ್ ವದಂತಿಗಳ ಹೊರತಾಗಿಯೂ, ಶುಭ್ಮನ್ ಮತ್ತು ಸಾರಾ ತೆಂಡೂಲ್ಕರ್ ಅವರ ಹೆಸರುಗಳು ಆಗಾಗ್ಗೆ ಒಟ್ಟಿಗೆ ಕೇಳಿಬರುತ್ತಿತ್ತು. ಇದೀಗ ಪ್ರಮುಖ ಸಾಕ್ಷಿ ದೊರೆತಿದೆ.
Shubman Gill and Sara Tendulkar Dating: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ಶುಭ್ಮನ್ ಗಿಲ್ ಪ್ರಸ್ತುತ ಏಷ್ಯಾ ಕಪ್ 2023ರ ಭಾಗವಾಗಿದ್ದಾರೆ, ಜೊತೆಗೆ ಉತ್ತಮ ಫಾರ್ಮ್’ನಲ್ಲಿ ಆಡುತ್ತಿದ್ದಾರೆ. ಆದರೆ ಇವೆಲ್ಲದರ ಮಧ್ಯೆ, ಇದೀಗ ಶುಭ್ಮನ್ ಗಿಲ್ ಸುದ್ದಿಯಲ್ಲಿರುವುದು ಸಾರಾ ಜೊತೆಗಿನ ವದಂತಿಯಿಂದಾಗಿ. ಈ ಜೋಡಿ ಹಿಂದೊಮ್ಮೆ ಬ್ರೇಕಪ್ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತಾದರೂ ಇದೀಗ ಮತ್ತೆ ಡೇಟಿಂಗ್ ಮಾಡುತ್ತಿರುವ ಊಹಾಪೋಹಗಳು ಮುನ್ನೆಲೆಗೆ ಬಂದಿವೆ.
ಇದನ್ನೂ ಓದಿ: ತನ್ನದೇ ತಂಡದ ಆಟಗಾರರಗೆ ಬಾಯಿಗೆ ಬಂದಂತೆ ಬೈದ ಬಾಬರ್ ಅಜಂ! ಮೈದಾನದಲ್ಲೇ ಕಣ್ಣೀರಿಟ್ಟ ಪ್ಲೇಯರ್ಸ್
ಬ್ರೇಕಪ್ ವದಂತಿಗಳ ಹೊರತಾಗಿಯೂ, ಶುಭ್ಮನ್ ಮತ್ತು ಸಾರಾ ತೆಂಡೂಲ್ಕರ್ ಅವರ ಹೆಸರುಗಳು ಆಗಾಗ್ಗೆ ಒಟ್ಟಿಗೆ ಕೇಳಿಬರುತ್ತಿತ್ತು. ಇದೀಗ ಪ್ರಮುಖ ಸಾಕ್ಷಿ ದೊರೆತಿದೆ. 'ಫಿಲ್ಮ್ಫೇರ್' ವರದಿಯ ಪ್ರಕಾರ, ಶುಭ್ಮನ್ ಮತ್ತು ಸಾರಾ ತೆಂಡೂಲ್ಕರ್ ಮತ್ತೆ ಡೇಟಿಂಗ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಸಾರಾ ಕೂಡ ಶುಭ್ಮನ್ ಸಹೋದರಿ ಶಹನೀಲ್ ಗಿಲ್ ಅವರನ್ನು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ.
ಸಾರಾ ತೆಂಡೂಲ್ಕರ್ ಮತ್ತು ಶುಭ್ಮನ್ ಗಿಲ್ ಅವರ ಡೇಟಿಂಗ್ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ, ಅವರ ಹಳೆಯ ಸೋಶಿಯಲ್ ಮೀಡಿಯಾ ಪೋಸ್ಟ್’ಗಳ ಕೆಲವು ಸ್ಕ್ರೀನ್’ಶಾಟ್’ಗಳು ಇಂಟರ್ನೆಟ್’ನಲ್ಲಿ ವೈರಲ್ ಆಗಿವೆ.
ಇನ್ನು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಶುಭ್ಮನ್ ಗಿಲ್ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 2020ರಿಂದ ಈ ವದಂತಿ ಕೇಳಿಬಂದಿದ್ದು, ಒಂದೊಮ್ಮೆ ಸಾರಾ ಶುಭ್ಮನ್ ಅವರನ್ನು ತನ್ನ ನೆಚ್ಚಿನ ಆಟಗಾರ ಎಂದು ಹೇಳಿದ್ದರು.
ಇದನ್ನೂ ಓದಿ: ಕರಣ್ ಜೋಹರ್ ಮುಂದಿನ ಸಿನಿಮಾದಲ್ಲಿ ಸಲ್ಲು ಜತೆ ರೊಮ್ಯಾನ್ಸ್ ಮಾಡೋ ಆ ಸೌತ್ ನಟಿ ಯಾರು?
ಆದರೆ ಕೆಲ ಸಮಯದ ಬಳಿಕ ಇವರಿಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡತೊಡಗಿತು. ಈ ಸುದ್ದಿ ಅನೇಕ ಅಭಿಮಾನಿಗಳಿಗೆ ನೋವು ತಂದಿದ್ದು ಸುಳ್ಳಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.