ಕೊರಿಯಾದ ಓಪನ್ ಸೀರಿಸ್ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯೇ ಸಿಂಧು
ಖ್ಯಾತ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಓಪನ್ ಸೀರೀಸ್ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ ಆಟಗಾರ್ತಿ.
ಬೆಂಗಳೂರು: ಕೊರಿಯಾ ಸೂಪರ್ ಸೀರೀಸ್ ನಲ್ಲಿ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡ ಖ್ಯಾತ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಓಪನ್ ಸೀರೀಸ್ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ ಆಟಗಾರ್ತಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.
ಭಾನುವಾರ ನಡೆಯ ಉತ್ತರ ಕೊರಿಯಾದ ಓಪನ್ ಸೀರೀಸ್ ನಲ್ಲಿ ಸಿಂಧು ಜಪಾನ್ ನ ನೊಜೊಮಿ ಓಕುಹಾರ ಅವರನ್ನು 22-20, 11-21, 21-18 ಸೆಟ್ ಅಂತರದಲ್ಲಿ ಸೋಲಿಸಿ ವಿಜೇತೆ ಆಗಿದ್ದರು.
ಸ್ಪರ್ಧೆಯ ಆರಂಭದಿಂದಲೂ ಇಬ್ಬರ ನಡುವೆ ಬಹಳ ಪೈಪೋಟಿ ಏರ್ಪಟ್ಟಿತ್ತು. ಕೊನೆಯ ಸುತ್ತಿನಲ್ಲಿ ಜಪಾನ್ ನ ನೊಜೊಮಿ ಅವರನ್ನು ಸೋಲಿಸುವ ಮೂಲಕ ಕೊರಿಯಾ ಓಪನ್ ಸೀರೀಸ್ ಅನ್ನು ಗೆದ್ದರು.
ರಿಯೋ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ ಪಡೆದ ಸಿಂಧುಗೆ ಇದು ಮೂರನೇ ಸೂಪರ್ ಸೀರೀಸ್ ಪ್ರಶಸ್ತಿಯಾಗಿದೆ. ಅಲ್ಲದೆ ಸೂಪರ್ ಸೀರೀಸ್ ಗೆದ್ದ ಪ್ರಥಮ ಭಾರತೀಯ ಎಂಬ ಕೀರ್ತಿಗೆ ಪಿ.ವಿ.ಸಿಂಧು ಭಾಜನರಾದರು.