PV Sindhu: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್: ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಪಿವಿ ಸಿಂಧು
ಪಿವಿ ಸಿಂಧು ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. ಹೈದರಾಬಾದ್‌ನ 27 ವರ್ಷದ ಪಿವಿ ಸಿಂಧು ಈ ವರ್ಷವೂ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಚೀನಾದ ಆಟಗಾರ್ತಿ ವಾಂಗ್ ಝಿ ಯಿ ವಿರುದ್ಧ 21-9 11-21 21-15 ಗೆಲುವು ದಾಖಲಿಸಿದರು. ಇದು ಪಿವಿ ಸಿಂಧುಗೆ ಮೊದಲ ಸಿಂಗಾಪುರ ಓಪನ್ ಪ್ರಶಸ್ತಿಯಾಗಿದೆ.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. ಫೈನಲ್‌ನಲ್ಲಿ ಚೀನಾದ ವಾಂಗ್ ಝಿ ಯಿ ಅವರನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸಿಂಧು ಇಡೀ ಪಂದ್ಯದ ಮೇಲೆ ತನ್ನ ಹಿಡಿತವನ್ನು ಹಿಡಿದಿಟ್ಟುಕೊಂಡಿದ್ದರಿಂದ ಈ ಗೆಲುವನ್ನು ಪಡೆದಿದ್ದಾರೆ.
ಪಿವಿ ಸಿಂಧು ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದಿದ್ದಾರೆ. ಹೈದರಾಬಾದ್‌ನ 27 ವರ್ಷದ ಪಿವಿ ಸಿಂಧು ಈ ವರ್ಷವೂ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಚೀನಾದ ಆಟಗಾರ್ತಿ ವಾಂಗ್ ಝಿ ಯಿ ವಿರುದ್ಧ 21-9 11-21 21-15 ಗೆಲುವು ದಾಖಲಿಸಿದರು. ಇದು ಪಿವಿ ಸಿಂಧುಗೆ ಮೊದಲ ಸಿಂಗಾಪುರ ಓಪನ್ ಪ್ರಶಸ್ತಿಯಾಗಿದೆ.
ಇದನ್ನೂ ಓದಿ: Diabetes: ಮಧುಮೇಹ ಕಾಯಿಲೆಗೆ ನಿಮ್ಮ ಅಡುಗೆಮನೆಯ ಈ ಮಸಾಲೆ ರಾಮಬಾಣ
ವರ್ಷದ ಮೂರನೇ ಪ್ರಶಸ್ತಿ:
ಎರಡು ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತೆಯಾಗಿರುವ ಸಿಂಧು ಜುಲೈ 28 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಪ್ರಾರಂಭವಾಗುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಸಿಂಧು ಈ ವರ್ಷ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸ್ವಿಸ್ ಓಪನ್‌ನಲ್ಲಿ ಎರಡು ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಿಂಗಾಪುರ ಓಪನ್ ಈ ವರ್ಷದ ಮೂರನೇ ಪ್ರಶಸ್ತಿಯಾಗಿದೆ.
ವಾಂಗ್ ಝಿ ಯಿ ಅವರನ್ನು ಸೋಲಿಸುವುದು ಪಿವಿ ಸಿಂಧು ಅವರಿಗೆ ಸುಲಭವಾಗಿರಲಿಲ್ಲ. ಮೂರು ಸೆಟ್‌ಗಳಲ್ಲಿ ನಡೆದ ಪಂದ್ಯದಲ್ಲಿ ಪಿವಿ ಸಿಂಧು ಗೆಲುವಿನೊಂದಿಗೆ ಶುಭಾರಂಭ ಮಾಡಿದರೂ ಸಹ ಅದ್ಭುತ ಪೈಪೋಟಿ ನಡೆದಿತ್ತು. ಆ ಬಳಿಕ ಎರಡನೇ ಸೆಟ್‌ನಲ್ಲಿ 11-21ರಿಂದ ಸೋಲು ಕಂಡರು. ಆದರೆ ಮೂರನೇ ಸೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಿಂಧು, ಚೀನಾದ ಆಟಗಾರ್ತಿಯನ್ನು 21-15 ಸೆಟ್ ಅಂತರದಿಂದ ಬಗ್ಗುಬಡೆದಿದ್ದಾರೆ.
ನಿರ್ಣಾಯಕ ಕ್ಷಣಗಳಲ್ಲಿ ತಾಳ್ಮೆಯನ್ನು ಕಾಯ್ದುಕೊಂಡ ಸಿಂಧು, ಏಷ್ಯನ್ ಚಾಂಪಿಯನ್‌ಶಿಪ್‌ನ ಹಾಲಿ ಚಾಂಪಿಯನ್ ಚೀನಾದ ವಾಂಗ್ ಕ್ಸಿ ಯಿ ಅವರನ್ನು ಕಠಿಣ ಪೈಪೋಟಿ ನೀಡುವ ಮೂಲಕ ಸೋಲಿಸಿದ್ದಾರೆ.
ಇದನ್ನೂ ಓದಿ: Social Mediaದಲ್ಲಿ ʻಹಿಂದೂ ವಿರೋಧಿʼ ಅಭಿಯಾನ.. ಆಘಾತಕಾರಿ ಸಂಗತಿ ಬಯಲು
ಇನ್ನು ಪಿವಿ ಸಿಂಧು ಸಾಧನೆಗೆ ಮೆಚ್ಚುಗೆ ಸೂಚಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, "ನಮ್ಮ ಬ್ಯಾಡ್ಮಿಂಟನ್ ಸಾಧಕಿಗೆ ಅಭಿನಂದನೆಗಳು. ವಾಂಗ್ ಝಿ ಯಿ ಅವರನ್ನು ಸೋಲಿಸುವ ಮೂಲಕ ತನ್ನ ಚೊಚ್ಚಲ ಸಿಂಗಾಪುರ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಮತ್ತು 2022ರಲ್ಲಿ ಅವರ ಮೂರನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಕ್ಕಾಗಿ ಅಭಿನಂದನೆಗಳು. ನಿಮ್ಮ ಧೈರ್ಯ ಮತ್ತು ದೃಢಸಂಕಲ್ಪದಿಂದ ನೀವು ಕ್ರೀಡಾಪಟುಗಳ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತೀರಿ. ಭಾರತವನ್ನು ಹೆಮ್ಮೆ ಪಡುವಂತೆ ಮಾಡುತ್ತಿರಿ" ಎಂದು ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.