women`s world cup 2022 : 25ನೇ ಅರ್ಧಶತಕ ಸಿಡಿಸಿದ ಸ್ಮ್ರತಿ ಮಂದನಾ!
ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯ(ICC Women`s World Cup 2022)ದಲ್ಲಿ ಸ್ಮೃತಿ ಈ ಸಾಧನೆ ಮಾಡಿದ್ದಾರೆ. 52ರನ್ ಗಳಿಸಿ ಆಡುತ್ತಿದ್ದ ಭರವಸೆಯ ಆಟಗಾರ್ತಿ ಇದೀಗ ಪೆವಿಲಿಯನ್ ಸೇರಿದ್ದಾರೆ.
ಭಾರತ ಕ್ರಿಕೆಟ ತಂಡದ ಬ್ಯೂಟಿ ಕ್ವೀನ್ ಎಂದೇ ಹೆಸರಾಗಿರುವ ಸ್ಮೃತಿ ಮಂದನಾ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 25ನೇ ಅರ್ಧ ಶತಕವನ್ನು ಪೂರ್ತಿಗೊಳಿಸಿದರು.
ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯ(ICC Women's World Cup 2022)ದಲ್ಲಿ ಸ್ಮೃತಿ ಈ ಸಾಧನೆ ಮಾಡಿದ್ದಾರೆ. 52ರನ್ ಗಳಿಸಿ ಆಡುತ್ತಿದ್ದ ಭರವಸೆಯ ಆಟಗಾರ್ತಿ ಇದೀಗ ಪೆವಿಲಿಯನ್ ಸೇರಿದ್ದಾರೆ.
ಇದನ್ನೂ ಓದಿ : Team India : ರೋಹಿತ್-ದ್ರಾವಿಡ್ ನಿಂದ ಹಾಳಾಗುತ್ತಿದೆ ಈ ಆಟಗಾರನ ವೃತ್ತಿಜೀವನ!
2013ರಲ್ಲಿ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ಗೆ ಕಾಲಿರಿಸಿದ್ದ ಮಂದನಾ(Smriti Mandhana) 2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೂ ಕಾಲಿರಿಸಿದ್ದರು. ಇದಾದ ಬಳಿಕ ಕೆಲವೇ ವರ್ಷಗಳಲ್ಲಿ ಮೈದಾನದ ಒಳಗೂ ಹೊರಗೂ ಅತಿ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು.
2018ರಲ್ಲಿ ಟಿ-20 ಕ್ರಿಕೆಟ್(T20 Match) ನಲ್ಲಿ 5ಪಂದ್ಯಗಳಲ್ಲಿ 178ರನ್ ಗಳಿಸಿದ್ದ ಮಂದನಾ ಎಲ್ಲರಿಗೂ ಚಿರಪರಿಚಿತವಾಗಿದ್ದರು. 2019ರಲ್ಲಿ ಭಾರತ ಟಿ20 ತಂಡಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲಿ ನಾಯಕತ್ವ ವಹಿಸಿಕೊಂಡ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದರು.
ಇದನ್ನೂ ಓದಿ : India vs Sri Lanka 1st Test: 35 ವರ್ಷಗಳ ಕಪಿಲ್ ದೇವ್ ದಾಖಲೆ ಮುರಿದ ರವೀಂದ್ರ ಜಡೇಜಾ..!
ಇವರ ಸಾಧನೆಯನ್ನು ಗುರುತಿಸಿ ಇತ್ತೀಚೆಗೆ ಐಸಿಸಿ(ICC) 2021-22ನೇ ಸಾಲಿನ ವರ್ಷದ ಮಹಿಳಾ ಆಟಗಾರ್ತಿ ಎಂಬ ಗೌರವ ನೀಡಿತ್ತು. ಈಗ ಮಂದಾನ 25ಅರ್ಧ ಶತಕಗಳನ್ನು ಪೂರೈಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಂದು ಸಾಧನೆಯ ಗುರುತು ಮೂಡಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.