Smriti Mandanna: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ, ಜೂನ್‌ 16 ರಂದು ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ ಗೆದ್ದು ಬೀಗಿದೆ. ಇನ್ನೂ ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಸ್ಮೃತಿ ಮಂಧಾನ ಹೊಸ ಮೈಲಿಗಲ್ಲಿ ಸಾಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾರತ ತಂಡದ ಉಪನಾಯಕಿ ಆಗಿರುವ ಸ್ಮೃತಿ ಮಂದಣ್ಣ ಶತಕ ಭಾರಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈವರೆಗೂ ಸ್ಮೃತಿ ಆಡಿರುವ ಎಲ್ಲಾ ಸ್ವರೂಪದ ಪಂದ್ಯಗಳಲ್ಲಿಯೂ 7000 ಕ್ಕೂ ಹೆಚ್ಚು ರನ್‌ ಕಲೆಹಾಕಿರುವ ಮಹತ್ವದ ಮೈಲಿಗಲ್ಲನ್ನು ತುಪಿದ್ದಾರೆ.


ಇದನ್ನೂ ಓದಿ:  IND W vs SA W: ಭಾರತದ ದಾಳಿಗೆ ಬೆಚ್ಚಿಬಿದ್ದ ಸೌತ್‌ ಆಫ್ರಿಕಾ..!


ಈ ಸಾಧನೆಯ ಮೂಲಕ ಸ್ಮೃತಿ ಮಂಧಾನ ಗಣ್ಯ ಮಹಿಳಾ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಾರೆ.  ಅಂತರಾಷ್ಟೀಯ ಕ್ರಿಕೆಟ್‌ನಲ್ಲಿ ಭಾರತ ತಂಡದ ಅತೀ ಹೆಚ್ಚು ರನ್‌ ಗಳಿಸಿದವರ ಸಾಲಿನಲ್ಲಿ ಮಂಧನಾ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. 


ಈ ಮುಂಚೆ 10868 ರನ್‌ ಗಳಿಸುವ ಮೂಲಕ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ಮೊದಲ ಪಡೆದಿದ್ದರು. ಇದೀಗ 7000 ರನ್‌ ಕಲೆಹಾಕುವ ಮೂಲಕ ಸ್ಮೃತಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂ 6880 ರನ್‌ ಕಲೆಹಾಕಿರುವ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ರೆಕಾರ್ಡ್‌ ಬ್ರೇಕ್‌ ಮಾಡುವ ಗಡಿಯಲ್ಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.