ನವದೆಹಲಿ: ಸ್ಮೃತಿ ಮಂಧಾನಾ ಟ್ವೆಂಟಿ ಕ್ರಿಕೆಟ್ ನಲ್ಲಿ ಭಾರತದ ಪರ ಅತಿ ವೇಗವಾಗಿ ಅರ್ಧ ಶತಕ ಗಳಿಸಿದ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ


COMMERCIAL BREAK
SCROLL TO CONTINUE READING

ವೆಲ್ಲಿಂಗ್ಟನ್ ನಲ್ಲಿನ ವೆಸ್ಟ್ಪ್ಯಾಕ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ -20 ಪಂದ್ಯದಲ್ಲಿ ಕೇವಲ 24 ಎಸೆತಗಳಲ್ಲಿ 50ರನ್ ಗಳನ್ನು ಮಂಧಾನಾ ಗಳಿಸಿದರು.ಇನ್ನೊಂದು ವಿಶೇಷವೇನೆಂದರೆ ಸದ್ಯ ಅವರು ಜಂಟಿಯಾಗಿ ಟ್ವೆಂಟಿ ಕ್ರಿಕೆಟ್ ನಲ್ಲಿ 50ಕ್ಕೂ ಅಧಿಕ ರನ್ ಗಳಿಸಿರುವವರಲ್ಲಿ ಜಂಟಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಮೊದಲ ಸ್ಥಾನವನ್ನು ಮಿಥಾಲಿ ರಾಜ್ ಅವರು ಪಡೆದಿದ್ದಾರೆ.17 ಅರ್ಧ ಶತಕದ ದಾಖಲೆ ಅವರ ಹೆಸರಿನಲ್ಲಿದೆ. ಹರ್ಮನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನಾ ತಲಾ 7 ಅರ್ಧ ಶತಕದ ದಾಖಲೆಯನ್ನು ಹೊಂದಿದ್ದಾರೆ.


ಫೆಬ್ರವರಿ 2 ರಂದು ಬಿಡುಗಡೆಯಾದ ಐಸಿಸಿ ಮಹಿಳಾ ಏಕದಿನ ಶ್ರೇಯಾಂಕದಲ್ಲಿ ಸ್ಮೃತಿ ಅಗ್ರಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಮೂರು ಪಂದ್ಯಗಳ ಭಾರತ-ನ್ಯೂಜಿಲೆಂಡ್ ಏಕದಿನ ಅಂತಾರಾಷ್ಟ್ರೀಯ ಸರಣಿಯಲ್ಲಿ ಅವರು 196ರನ್ ಗಳನ್ನು ಗಳಿಸಿದ್ದರು.


2018 ರ ವರ್ಷದ ಮಹಿಳಾ ಕ್ರಿಕೆಟಿಗ ಹಾಗೂ ಐಸಿಸಿ ವರ್ಷದ ಮಹಿಳಾ ಏಕದಿನ ಆಟಗಾರ್ತಿ ಎನ್ನುವ ಶ್ರೆಯವನ್ನು ಪಡೆದಿದ್ದಾರೆ. 2018 ರಲ್ಲಿ 25 ಟ್ವೆಂಟಿ 20 ಪಂದ್ಯಗಳಲ್ಲಿ 622 ರನ್ ಗಳು ಹಾಗೂ 12 ಏಕದಿನ ಪಂದ್ಯಗಳಲ್ಲಿ 669 ರನ್ ಗಳಿಸಿದ ನಂತರ ಪ್ರತಿಷ್ಠಿತ ರಾಚೆಲ್ ಹೆಹೋಯ್ ಫ್ಲಿಂಟ್ ಪ್ರಶಸ್ತಿಯನ್ನು ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿಗಾಗಿ ಪಡೆದಿದ್ದಾರೆ.