ನವದೆಹಲಿ: ರಾಹುಲ್ ದ್ರಾವಿಡ್ ಗೆ ಬಿಸಿಸಿಐ ಸ್ವಹಿತಾಸಕ್ತಿ ಸಂಘರ್ಷ ನೋಟಿಸ್ ಕಳಿಸಿದ್ದಕ್ಕೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ದ್ರಾವಿಡ್ ಅವರು ಇಂಡಿಯಾ ಸಿಮೆಂಟ್ ನ ಉಪಾಧ್ಯಕ್ಷರಾಗಿ ಮತ್ತು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ನಿರ್ದೇಶಕರಾಗಿ ಸ್ವಹಿತಾಸಕ್ತಿ ಸಂಘರ್ಷವನ್ನು ಒಳಗೊಂಡ ಆರೋಪವನ್ನು ಹೊತ್ತಿದ್ದಾರೆ.ಈ ಹಿನ್ನಲೆಯಲ್ಲಿ ಬಿಸಿಸಿ ಅಧಿಕಾರಿಗಳು ಅವರಿಗೆ ನೋಟಿಸ್ ನ್ನು ಜಾರಿ ಮಾಡಿದ್ದಾರೆ. ಈಗ ಈ ಕ್ರಮಕ್ಕೆ ಸೌರವ್ ಗಂಗೂಲಿ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.



 "ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಫ್ಯಾಷನ್.....ಸ್ವಹಿತಾಸಕ್ತಿಯ ಸಂಘರ್ಷ....ಸುದ್ದಿಯಲ್ಲಿ ಉಳಿಯಲು ಉತ್ತಮ ಮಾರ್ಗವೆಂದರೆ ದೇವರು ಭಾರತೀಯ ಕ್ರಿಕೆಟ್ ಗೆ ಸಹಾಯ ಮಾಡಬೇಕು ...... ದ್ರಾವಿಡ್‌ಗೆ ಬಿಸಿಸಿಐ ನೀತಿ ಸಂಹಿತೆ ಅಧಿಕಾರಿಯಿಂದ ಸ್ವಹಿತಾಸಕ್ತಿ ಸಂಘರ್ಷ ನೋಟಿಸ್ ಬಂದಿದೆ ," ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ. ಗಂಗೂಲಿ ಟ್ವೀಟ್ ಗೆ ಸಹಮತ ವ್ಯಕ್ತಪಡಿಸಿರುವ ಹರ್ಭಜನ ಸಿಂಗ್ ಅವರು ಹಿರಿಯ ಆಟಗಾರರನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಟ್ವೀಟ್ ಮಾಡಿದ್ದಾರೆ.



ನಿಜವಾಗಿಯೂ? ಇದೆಲ್ಲಿಗೆ ತಲುಪುತ್ತದೆ ಎನ್ನುವುದು ಗೊತ್ತಿಲ್ಲ..ಭಾರತೀಯ ಕ್ರಿಕೆಟ್ ಗೆ ಅವರಿಗಿಂತ ಉತ್ತಮ ವ್ಯಕ್ತಿ ಸಿಗಲು ಸಾಧ್ಯವಿಲ್ಲ. ಅವರಿಗೆ ನೋಟಿಸ್ ಕಲಿಸುವ ಮೂಲಕ ಅವಮಾನ ಮಾಡಲಾಗಿದೆ..ಕ್ರಿಕೆಟ್ ಗೆ ಅವರ ಸೇವೆ ಅಗತ್ಯವಿದೆ...ದೇವರೇ ಭಾರತ ಕ್ರಿಕೆಟ್ ನ್ನು ಕಾಪಾಡಬೇಕು ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.