130 ರನ್ ಗಳಿಗೆ ದಕ್ಷಿಣ ಆಫ್ರಿಕಾ ಆಲೌಟ್ ,ಭಾರತಕ್ಕೆ 208 ರನ್ ಗಳ ಗೆಲುವಿನ ಗುರಿ
ನವದೆಹಲಿ: ಭಾರತ ತಂಡವು ತನ್ನ ಪರಿಣಾಮಕಾರಿ ಬೌಲಿಂಗ್ ನಿಂದಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಎರಡನೇ ಇನಿಂಗ್ಸ್ ನಲ್ಲಿ 130 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಗೆಲುವಿನ ನೀರಿಕ್ಷೆಯನ್ನು ಹುಟ್ಟುಹಾಕಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಸಾಧಾರಣ ಮೊತ್ತ 286 ರನ್ ಗಳಿಗೆ ತನ್ನ ಇನ್ನಿಂಗ್ಸ್ ಪೂರೈಸಿದ್ದ ಆಫ್ರಿಕಾ ತಂಡ ಭಾರತ ತಂಡವನ್ನು 209 ರನ್ಗಳಿಗೆ ಕಟ್ಟಿಹಾಕುವುದರ ಮೂಲಕ ಮೊದಲ ಇನಿಂಗ್ಸ್ ನ ಮುನ್ನಡೆ ಸಾಧಿಸಿತ್ತು. ನಂತರ ಎರಡನೇ ಇನಿಂಗ್ಸ್ ನ ಬ್ಯಾಟಿಂಗ ಪ್ರಾರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ಕೇವಲ 130 ಕ್ಕೆ ಆಲೌಟ್ ಆಯಿತು. ಭಾರತದ ಪರ ಬುಮ್ರಾ, ಮೊಹಮ್ಮದ್ ಶಮಿ, ಹಾರ್ದಿಕ ಪಾಂಡ್ಯರವರ ಬೌಲಿಂಗ್ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಬೆನ್ನೆಲಬು ಮುರಿದರು.