Dwayne Pretorius announced retirement: ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್ ರೌಂಡರ್ ಡ್ವೇನ್ ಪ್ರಿಟೋರಿಯಸ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಿಟೋರಿಯಸ್ ತನ್ನ ಸ್ವಂತ ಬಲದಿಂದ ದಕ್ಷಿಣ ಆಫ್ರಿಕಾದ ಅನೇಕ ಪಂದ್ಯಗಳನ್ನು ಗೆದ್ದಿದ್ದಾರೆ. ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್‌ನಲ್ಲಿ ಪರಿಣಿತ ಆಟಗಾರ ಇಂದು ನಿವೃತ್ತರಾಗಿದ್ದು, ಅಭಿಮಾನಿಗಳಿಗೆ ಶಾಕ್ ನೀಡಿದಂತಾಗಿದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: Team India Challenges: ‘ಮಿಷನ್ ವರ್ಲ್ಡ್ ಕಪ್’ ತಯಾರಿಯಲ್ಲಿರುವ ರೋಹಿತ್-ದ್ರಾವಿಡ್ ಮುಂದಿದೆ ಈ ದೊಡ್ಡ ಸವಾಲುಗಳು


ಸ್ಟಾರ್ ಆಲ್ ರೌಂಡರ್ ಡ್ವೇನ್ ಪ್ರಿಟೋರಿಯಸ್ ದಕ್ಷಿಣ ಆಫ್ರಿಕಾ ಪರ ಎಲ್ಲಾ ಮೂರು ಮಾದರಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. 2016 ರಲ್ಲಿ ದ. ಆಫ್ರಿಕಾಕ್ಕೆ ಪಾದಾರ್ಪಣೆ ಮಾಡಿದ ನಂತರ 30 T20 ಪಂದ್ಯಗಳು, 27 ODIಗಳು ಮತ್ತು ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಎರಡು ವಿಶ್ವಕಪ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ಭಾಗವಾಗಿದ್ದರು.


Kohli Bat Price : ವಿರಾಟ್ ಕೊಹ್ಲಿ ಬಳಸುವ ಬ್ಯಾಟ್‌ ಬೆಲೆ ಎಷ್ಟು ಸಾವಿರ ಗೊತ್ತಾ?


ನಿವೃತ್ತಿ ಘೋಷಿಸಿದ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಡ್ವೇನ್ ಪ್ರಿಟೋರಿಯಸ್ ಅವರು ತಮ್ಮ ವೃತ್ತಿಜೀವನದ ಉಳಿದ T20 ಮತ್ತು ಇತರ ಸಣ್ಣ ಸ್ವರೂಪಗಳ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ ಎಂದು ಹೇಳಿದ್ದಾರೆ. 33 ವರ್ಷ ವಯಸ್ಸಿನ ಡ್ವೇನ್ ಪ್ರಿಟೋರಿಯಸ್ ತಮ್ಮ ಕೋಚ್‌ಗಳು, ತಂಡದ ಸಹ ಆಟಗಾರರು ಮತ್ತು ಕುಟುಂಬಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಜೊತೆಗೆ ಫಾಫ್ ಡು ಪ್ಲೆಸಿಸ್‌ಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.