ನವದೆಹಲಿ: ಭಾರತ ತಂಡವು ಸೂಪರ್‌ ಸ್ಪೋರ್ಟ್ಸ್‌ ಪಾರ್ಕ್‌ ಅಂಗಳದಲ್ಲಿ ಬುಧವಾರದಂದು ನಡೆದ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ದ ಸೋಲನ್ನನುಭವಿಸಿದೆ.



COMMERCIAL BREAK
SCROLL TO CONTINUE READING

ಮೊದಲು ಟಾಸ್ ಗೆದ್ದು  ಬೌಲಿಂಗ್‌ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ, ಭಾರತ ತಂಡವನ್ನು 20 ಓವರ್‌ಗಳಲ್ಲಿ 188ರನ್‌ ಗಳಿಗೆ ಕಟ್ಟಿಹಾಕಿತು.  


ಭಾರತದ ಪರ ಮನೀಷ್‌ ಪಾಂಡೆ (79) ಮಹೇಂದ್ರ ಸಿಂಗ್‌ ದೋನಿ ( 52 ) ಗಳ ನೆರವಿನಿಂದ ಉತ್ತಮ ಮೊತ್ತ ಕಲೆ ಹಾಕಿದರೂ, ಸಹಿತ  ದಕ್ಷಿಣ ಆಫ್ರಿಕಾದ ಪರ ಜೆಪಿ ಡುಮ್ನಿ 64 ಮತ್ತು ಹೆನ್ರಿಚ್  69 ರನ್ ಗಳ ನೆರವಿನಿಂದ 18.4 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ  189 ರನ್ ಗಳಿಸಿ ಸುಲಭ ಗೆಲವು ದಾಖಲಿಸಿತು.