Special Person Welcomed Hardik Pandya: ಟಿ20 ವಿಶ್ವಕಪ್ ಗೆದ್ದ ನಂತರ ಇಡೀ ಟೀಂ ಇಂಡಿಯಾ ಭಾರತಕ್ಕೆ ಮರಳಿದೆ. ಭಾರತ ಕ್ರಿಕೆಟ್ ತಂಡವನ್ನು ಸ್ವಾಗತಿಸುವ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇದೆಲ್ಲದರ ನಡುವೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಸರ್ಬಿಯಾದ ಮಾಡೆಲ್ ಹಾಗೂ ನಟಿ ನತಾಶಾ ಸ್ಟಾಂಕೋವಿಕ್ ನಡುವಿನ ವಿಚ್ಛೇದನದ ವದಂತಿಗಳು ಮತ್ತೆ ಮುನ್ನೆಲೆಗೆ ಬಂದಿವೆ. 


COMMERCIAL BREAK
SCROLL TO CONTINUE READING

ಒಂದೆಡೆ ಹಾರ್ದಿಕ್ ಪಾಂಡ್ಯ ಭಾರತಕ್ಕೆ ಮರಳಿದ ನಂತರ ನತಾಶಾ ಸ್ಟಾಂಕೋವಿಕ್ ಬ್ಯಾಕ್ ಟು ಬ್ಯಾಕ್ ಕ್ರಿಪ್ಟಿಕ್ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಹಾರ್ದಿಕ್‌ಗೆ ಮನೆಯಲ್ಲಿ ಆತ್ಮೀಯ ಸ್ವಾಗತ ಸಿಕ್ಕಿದೆ.


ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಅತ್ತಿಗೆ, ಕೃನಾಲ್ ಪಾಂಡ್ಯ ಪತ್ನಿ ಪಂಖೂರಿ ಶರ್ಮಾ ಅವರು ನಿನ್ನೆ ತಡರಾತ್ರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿ ವಿಭಾಗದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಹಾರ್ದಿಕ್ ಪಾಂಡ್ಯ, ಕಪ್ಪು ಟಿ-ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾರೆ. 


ಇದನ್ನೂ ಓದಿ : ಬ್ಲಡ್ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್, ಕೋಚ್ ಇವರು! 


ಹಾರ್ದಿಕ್ ಹಿಂದೆ ನೀಲಿ ಮತ್ತು ಬಿಳಿ ಬಲೂನ್‌ಗಳಿಂದ ಅಲಂಕರಿಸಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅಭಿನಂದನೆಗಳು HP  ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ. ಮನೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಅದ್ಧೂರಿ ಸ್ವಾಗತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 


T20 ವಿಶ್ವಕಪ್‌ನಲ್ಲಿ ಭಾರತ ಜಯಗಳಿಸಿದ ನಂತರ ನತಾಶಾ ಸ್ಟಾಂಕೋವಿಕ್ ತನ್ನ ಮೊದಲ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ.


ನತಾಶಾ ಸ್ಟಾಂಕೋವಿಕ್ ಅವರು ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದೇವರೇ, ನಾನು ಸಮಸ್ಯೆಯಲ್ಲಿದ್ದಾಗ ನನಗೆ ಸಹಾಯ ಮಾಡಿ ಮತ್ತು ನನ್ನನ್ನು ರಕ್ಷಿಸು ಎಂದು ಬರೆದಿದ್ದಾರೆ. ನತಾಶಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.


ಇದನ್ನೂ ಓದಿ : ನಂ.1 ಆಲ್ ರೌಂಡರ್ ಆಗಿ ಟೀಂ ಇಂಡಿಯಾ ಸ್ಟಾರ್ ಆಟಗಾರ!!! ಯಾರು? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.