SRH vs LSG, IPL 2022: ಹೈದರಾಬಾದ್ ವಿರುದ್ಧ ಲಕ್ನೋಗೆ ರೋಚಕ ಗೆಲುವು
15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 12ನೇ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಪಡೆ 12 ರನ್‍ಗಳ ಗೆಲುವು ದಾಖಲಿಸಿತು.
ನವದೆಹಲಿ: ಕೊನೆವರೆಗೂ ನಡೆದ ಹೋರಾಟದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ರೋಚಕ ಗೆಲುವು ಸಾಧಿಸಿದೆ. ಮುಂಬೈನ ಡಾ.ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 12ನೇ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಪಡೆ 12 ರನ್‍ಗಳ ಗೆಲುವು ದಾಖಲಿಸಿತು.
ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ169 ರನ್ ಗಳಿಸಿತು. ಲಕ್ನೋ ಪರ ನಾಯಕನಾಟವಾಡಿದ ಕೆ.ಎಲ್.ರಾಹುಲ್(68) ಭರ್ಜರಿ ಅರ್ಧಶತಕ ಸಿಡಿಸಿದರು. ದೀಪರ್ ಹೂಡಾ(51) ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ತಂಡ ಮೊತ್ತ 150ರ ಗಡಿ ದಾಟಲು ನೆರವಾದರು. ಆಯುಷ್ ಬದೋನಿ(19) ಮತ್ತು ಮನೀಶ್ ಪಾಂಡೆ(11) ಕೂಡ ತಂಡದ ಗೆಲುವಿಗೆ ಕೊಂಚ ಕಾಣಿಕೆ ನೀಡಿದರು. ಹೈದರಾಬಾದ್ ಪರ ಬೌಲಿಂಗ್ ನಲ್ಲಿ ವಾಷಿಂಗ್ಟನ್ ಸುಂದರ್, ರೊಮಾರಿಯೋ ಶೆಫರ್ಡ್ ಮತ್ತು ಟಿ.ನಟರಾಜನ್ ತಲಾ ಎರಡೆರಡು ವಿಕೆಟ್ ಕಬಳಿಸಿದರು.
ಇದನ್ನೂ ಓದಿ: IPL 2022: ಕ್ರಿಕೆಟ್ ಅಭಿಮಾನಿಗಳಿಗೆ ಯುಗಾದಿ ಉಡುಗೊರೆ
ಕೊನೆವರೆಗೂ ಹೋರಾಟ ನಡೆಸಿದ ಹೈದರಾಬಾದ್
ಮೊದಲ ಪಂದ್ಯದಲ್ಲಿಯೇ ರಾಜಸ್ಥಾನ್ ರಾಯಲ್ಸ್ ವಿರುದ್ಧ 61 ರನ್ ಗಳಿಂದ ಸೋಲು ಕಂಡಿದ್ದ ಕೇನ್ ವಿಲಿಯಮ್ಸನ್ ಪಡೆ ಇಂದಿನ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು. ಲಕ್ನೋ ನೀಡಿದ 170 ರನ್ ಗಳ ಗೆಲುವಿನ ಗುರಿ ಬೆನ್ನತ್ತಿ ಕೊನೆಯ ಓವರ್ ವರೆಗೂ ಹೋರಾಟ ನಡೆಸಿದರು ಪ್ರಯೋಜನವಾಗಲಿಲ್ಲ. ರಾಹುಲ್ ಪಡೆಯ ಬೌಲಿಂಗ್ ದಾಳಿಗೆ ಸಿಲುಕಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್ ಪರ ರಾಹುಲ್ ತ್ರಿಪಾಠಿ(44), ನಿಕೋಲಸ್ ಪೂರನ್(34), ವಾಷಿಂಗ್ಟನ್ ಸುಂದರ್(18), ನಾಯಕ ಕೇನ್ ವಿಲಿಯಮ್ಸನ್ (16) ರನ್ ಗಳಿಸಿದರು. ಲಕ್ನೋ ಪರ ಬೌಲಿಂಗ್ ನಲ್ಲಿ ಅವೇಶ್ ಖಾನ್ 4, ಜೇಸನ್ ಹೋಲ್ಡರ್ 3 ಮತ್ತು ಕೃನಾಲ್ ಪಾಂಡ್ಯ 2 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ: IPL 2022: ಸತತ 2 ಸೋಲುಗಳಿಂದ ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ ಮಾಡಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.