ಪಂಜಾಬ್ ವಿರುದ್ದ ಹೈದರಾಬಾದ್ ಗೆ 13 ರನ್ ಗಳ ರೋಚಕ ಜಯ
ಹೈದರಾಬಾದ್: ಪಂಜಾಬ್ ತಂಡವು ಮೊದಲು ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡಿತು, ಅಂಕಿತ್ ರಾಜಪೂತ್ ರವರ ಭರ್ಜರಿ ಬೌಲಿಂಗ್ ನಿಂದಾಗಿ ಹೈದರಾಬಾದ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು.
ಅಂಕಿತ್ ಅವರು ನಾಲ್ಕು ಓವರ್ ಗಳಲ್ಲಿ 14 ರನ್ ನೀಡಿ 5 ವಿಕೆಟ್ ಪಡೆಯುವುದರ ಮೂಲಕ ಹೈದರಾಬಾದ್ ನ ಬ್ಯಾಟಿಂಗ್ ಬೆನ್ನೆಲುಬು ಮುರಿದರು.ಆದರೆ ಈ ಸಾಧಾರಣ ಮೊತ್ತ ಬೆನ್ನತ್ತಿದ ಪಂಜಾಬ್ ತಂಡವು ಹೈದರಾಬಾದ್ ನ ಬೌಲಿಂಗ್ ದಾಳಿಗೆ ವಿಕೆಟ್ ಗಳು ಬೇಗನೆ ಉರುಳಿದವು. ಕೊನೆಗೆ ಅದು 19.2 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 119 ರನ್ ಗಳನ್ನು ಗಳಿಸಿತು, ಆ ಮೂಲಕ 13 ರನ್ ಗಳ ಸೋಲನ್ನು ಅನುಭವಿಸಿತು.