Asian teams to win Test series in South Africa: ಡಿಸೆಂಬರ್ 26 ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ದಕ್ಷಿಣ ಆಫ್ರಿಕಾದಲ್ಲಿ ಭಾರತದ ಟೆಸ್ಟ್ ಪಂದ್ಯದ ಅಂಕಿಅಂಶಗಳು ತುಂಬಾ ಕಳಪೆಯಾಗಿದೆ. ಅಂದಹಾಗೆ ಭಾರತ ತಂಡ ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ಈ ಬಾರಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಕೆಟ್ಟ ದಾಖಲೆಯನ್ನು ಬದಲಿಸಿ ಇತಿಹಾಸ ಸೃಷ್ಟಿಸಲು ಸಿದ್ಧತೆ ನಡೆಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಪೂಜಿಸುವ 'ಕಲ್ಲಿನ ಚೆಂಡುಗಳು' ಪಳೆಯುಳಿಕೆಗೊಂಡ ಡೈನೋಸಾರ್ ಮೊಟ್ಟೆಗಳಾಗಿವೆ


ದಕ್ಷಿಣ ಆಫ್ರಿಕಾವನ್ನು ತನ್ನ ತವರಿನಲ್ಲೇ ಟೆಸ್ಟ್ ಸರಣಿಯಲ್ಲಿ ಸೋಲಿಸುವ ಮೂಲಕ ಇತಿಹಾಸ ಬರೆದ ಏಷ್ಯಾದ ಏಕೈಕ ತಂಡ ಯಾವುದೆಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಸದ್ಯ ಈ ತಂಡ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಏಳನೇ ಸ್ಥಾನದಲ್ಲಿದೆ.


ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಸ್ವದೇಶದಲ್ಲಿ ಸೋಲಿಸಿದ ಏಕೈಕ ಏಷ್ಯಾದ ತಂಡ ಶ್ರೀಲಂಕಾ. ಫೆಬ್ರವರಿ 2019 ರಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಆ ಪ್ರವಾಸದಲ್ಲಿ ದಿಮುತ್ ಕರುಣರತ್ನೆ ಶ್ರೀಲಂಕಾದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ, ಶ್ರೀಲಂಕಾ ಡರ್ಬನ್‌’ನ ಕಿಂಗ್ಸ್‌ಮೀಡ್‌’ನಲ್ಲಿ ನಡೆದ ಮೊದಲ ಟೆಸ್ಟ್‌’ನಲ್ಲಿ ಆತಿಥೇಯ ತಂಡವನ್ನು ಒಂದು ವಿಕೆಟ್‌’ನಿಂದ ಸೋಲಿಸಿತು. ನಂತರ ಸೇಂಟ್ ಜಾರ್ಜ್ ಪಾರ್ಕ್, ಗ್ಕೆಬರ್ಹಾದಲ್ಲಿ ನಡೆದ ಎರಡನೇ ಪಂದ್ಯವನ್ನು ಎಂಟು ವಿಕೆಟ್‌’ಗಳಿಂದ ಗೆದ್ದಿತು. ಆ ಸರಣಿಯಲ್ಲಿ ಶ್ರೀಲಂಕಾ ಪರ ಕುಸಾಲ್ ಪೆರೆರಾ (224 ರನ್) ಗರಿಷ್ಠ ರನ್ ಗಳಿಸಿದ್ದರು. ಫರ್ನಾಂಡೋ ಗರಿಷ್ಠ 12 ವಿಕೆಟ್ ಪಡೆದರು. ಇವರಲ್ಲದೆ ಕಸುನ್ ರಜಿತಾ ಕೂಡ 9 ಬ್ಯಾಟ್ಸ್‌ಮನ್‌’ಗಳನ್ನು ಔಟ್ ಮಾಡಿದ್ದರು.


ಭಾರತ ತಂಡದ ಬಗ್ಗೆ ಮಾತನಾಡುವುದಾದರೆ, ಭಾರತವು ಟೆಸ್ಟ್ ಸರಣಿಯನ್ನು ಆಡಲು 9 ನೇ ಬಾರಿಗೆ ದಕ್ಷಿಣ ಆಫ್ರಿಕಾಗೆ ತೆರಳಿದೆ. ವಿಶ್ವದ ನಂಬರ್ 1 ಟೆಸ್ಟ್ ತಂಡವು ಈ ಹಿಂದೆ 8 ಬಾರಿ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ್ದು, ಅದರಲ್ಲಿ ಭಾರತ 7 ಬಾರಿ ಸೋಲನ್ನು ಎದುರಿಸಿದೆ. ಒಮ್ಮೆ ಡ್ರಾ ಆಗಿದೆ. 2010-11ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ 1-1 ಡ್ರಾ ಸಾಧಿಸಿತ್ತು. ಆದರೆ, 2021 ರ ಪ್ರವಾಸದಲ್ಲಿ ಭಾರತವು ಸೆಂಚುರಿಯನ್ ಟೆಸ್ಟ್‌;ನಲ್ಲಿ ಆತಿಥೇಯ ತಂಡವನ್ನು 113 ರನ್‌;ಗಳಿಂದ ಸೋಲಿಸಿತ್ತು.


ಬಾಕ್ಸಿಂಗ್ ಡೇ ಟೆಸ್ಟ್‌’ನಲ್ಲಿ IND-SA ಮುಖಾಮುಖಿ:


  • 1992 - ದಕ್ಷಿಣ ಆಫ್ರಿಕಾ ವಿರುದ್ಧ ಭಾರತ (ಪೋರ್ಟ್ ಎಲಿಜಬೆತ್) - SA 9 ವಿಕೆಟ್‌’ಗಳಿಂದ ಗೆಲುವು

  • 1996 - ದಕ್ಷಿಣ ಆಫ್ರಿಕಾ ವಿರುದ್ಧ ಭಾರತ (ಡರ್ಬನ್) - SA 328 ರನ್‌’ಗಳಿಂದ ಗೆಲುವು

  • 2006 - ದಕ್ಷಿಣ ಆಫ್ರಿಕಾ ವಿರುದ್ಧ ಭಾರತ (ಡರ್ಬನ್) - SA 174 ರನ್‌’ಗಳಿಂದ ಗೆಲುವು

  • 2010 - ದಕ್ಷಿಣ ಆಫ್ರಿಕಾ ವಿರುದ್ಧ ಭಾರತ (ಡರ್ಬನ್) - IND 87 ರನ್‌’ಗಳಿಂದ ಗೆಲುವು

  • 2013 - ದಕ್ಷಿಣ ಆಫ್ರಿಕಾ ವಿರುದ್ಧ ಭಾರತ (ಡರ್ಬನ್) - SA 10 ವಿಕೆಟ್‌’ಗಳಿಂದ ಗೆಲುವು

  • 2021 - ದಕ್ಷಿಣ ಆಫ್ರಿಕಾ vs ಭಾರತ (ಸೆಂಚುರಿಯನ್) - IND 113 ರನ್‌’ಗಳಿಂದ ಗೆಲುವು


ಭಾರತದ ಟೆಸ್ಟ್ ತಂಡ


ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ ಪ್ರಸಿದ್ಧ್ ಕೃಷ್ಣ ಮತ್ತು ಕೆಎಸ್ ಭರತ್ (ವಿಕೆಟ್ ಕೀಪರ್).


ಇದನ್ನೂ ಓದಿ: ಬಾಕ್ಸ್ ಆಫೀಸ್ ಧೂಳಿಪಟ: ಮೂರೇ ದಿನಕ್ಕೆ 400 ಕೋಟಿ ರೂ. ಬಾಚಿದ ‘ಸಲಾರ್’!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.