Chaminda Vaas: ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಅಪಾಯಕಾರಿ ವೇಗದ ಬೌಲರ್‌ʼಗಳಿದ್ದಾರೆ. ವೆಸ್ಟ್ ಇಂಡೀಸ್‌ʼನ ಮಾಲ್ಕಮ್ ಮಾರ್ಷಲ್‌ʼನಿಂದ ಹಿಡಿದು ಆಸ್ಟ್ರೇಲಿಯಾದ ಡೆನ್ನಿಸ್ ಲಿಲ್ಲಿ, ಪಾಕಿಸ್ತಾನದ ವಾಸಿಂ ಅಕ್ರಮ್, ಇಂಗ್ಲೆಂಡ್‌ʼನ ಜೇಮ್ಸ್ ಆಂಡರ್ಸನ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ತಮ್ಮ ಬಿರುಸಿನ ಬೌಲಿಂಗ್‌ʼನಿಂದ ವಿಶ್ವದ ಬ್ಯಾಟ್ಸ್‌ಮನ್‌ʼಗಳ ನಿದ್ದೆಗೆಡಿಸಿದ್ದು ಸುಳ್ಳಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಟೀಂ ಇಂಡಿಯಾದ ಸ್ಟಾರ್‌ ಪ್ಲೇಯರ್‌ ರುತುರಾಜ್ ಗಾಯಕ್ವಾಡ್ ಪತ್ನಿ ಯಾರು ಗೊತ್ತಾ? ಇವರೂ ಸಹ ಕ್ರಿಕೆಟರ್… ಭಾರತ ಮಹಿಳಾ ತಂಡದ ಆಟಗಾರ್ತಿ!


ಈ ವಿಚಾರದಲ್ಲಿ ಶ್ರೀಲಂಕಾ ಬೌಲರ್‌ʼಗಳೂ ಕಡಿಮೆಯೇನಲ್ಲ. ವಿಶ್ವದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಇದಕ್ಕೆ ಉದಾಹರಣೆ. ಲಂಕಾ ತಂಡ ಕೇವಲ ಮುರಳೀಧರನ್ ಅವರನ್ನು ನೆಚ್ಚಿಕೊಂಡು ಯಶಸ್ಸು ಸಾಧಿಸಿಲ್ಲ. ಅವರ ಹೊರತಾಗಿಯೂ ಚಮಿಂದಾ ವಾಸ್ ಮತ್ತು ಲಸಿತ್ ಮಾಲಿಂಗ ಅವರಂತಹ ವೇಗದ ಬೌಲರ್‌ʼಗಳನ್ನು ಸಹ ಈ ತಂಡ ಹೊಂದಿದೆ.


ಚಮಿಂದಾ ವಾಸ್ ಕ್ರಿಕೆಟ್ ಇತಿಹಾಸದಲ್ಲಿ ಅಗ್ರ ವೇಗದ ಬೌಲರ್‌ʼಗಳಲ್ಲಿ ಸ್ಥಾನ ಪಡೆದಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಶ್ರೀಲಂಕಾ ಪರ 761 ವಿಕೆಟ್ ಪಡೆದಿದ್ದಾರೆ. ವಾಸ್ ಏಕದಿನ ಮಾದರಿಯೊಂದರಲ್ಲೇ 400 ವಿಕೆಟ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿ 355 ಮತ್ತು ಟಿ20ಯಲ್ಲಿ 6 ವಿಕೆಟ್‌ಗಳನ್ನು ಪಡೆದಿದ್ದಾರೆ.


ವಾಸ್ 8 ಡಿಸೆಂಬರ್ 2001 ರಂದು ಕೊಲಂಬೊದಲ್ಲಿನ ತವರು ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧ 8 ಓವರ್‌ʼಗಳಲ್ಲಿ 8 ವಿಕೆಟ್‌ʼಗಳನ್ನು ಪಡೆದು ಮಿಂಚಿದ್ದರು. ಈ ಅವಧಿಯಲ್ಲಿ ಈ ಅಪಾಯಕಾರಿ ಬೌಲರ್ 3 ಓವರ್ʼಗಳಲ್ಲಿ ಯಾವುದೇ ರನ್ ನೀಡಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.


ಅಂದಹಾಗೆ ವಾಸ್‌ ಅವರು, ಬಾಲ್ಯದಲ್ಲಿ ಪಾದ್ರಿಯಾಗುವ ಕನಸು ಕಂಡಿದ್ದರಂತೆ. ಆದರೆ ಇಂದು ಶ್ರೀಲಂಕಾದ ಅತ್ಯುತ್ತಮ ಬೌಲರ್‌ʼಗಳಲ್ಲಿ ಒಬ್ಬರಾಗಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಅವರ ಪೂರ್ಣ ಹೆಸರು ಕ್ರಿಕೆಟ್ ಜಗತ್ತಿನಲ್ಲಿಯೇ ಅತ್ಯಂತ ಉದ್ದವಾದ ಹೆಸರಾಗಿದೆ. ಅದೇನೆಂದರೆ 'ವರ್ಣಕುಲಸೂರ್ಯ ಪಟಬೆಂಡಿಗೆ ಉಶಾಂತ ಜೋಸೆಫ್ ಚಾಮಿಂದಾ ವಾಸ್' (Warnakulasuriya Patabendige Ushantha Joseph Chaminda Vaas).


ಇದನ್ನೂ ಓದಿ: ಹಾವು ಹಕ್ಕಿಯಂತೆ ಹಾರಾಡುವುದನ್ನು ನೋಡಿದ್ದೀರಾ? ಇಲ್ಲವಾದರೆ ಚಾಲಾಕಿ ಸರ್ಪದ ಈ ವಿಡಿಯೋ ನೋಡಿ


"ಪಾದ್ರಿಯಾಗುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೆ, ಇದಕ್ಕಾಗಿ 12 ರಿಂದ 14 ವರ್ಷಗಳವರೆಗೆ ಅಧ್ಯಯನ ಮಾಡಬೇಕು. ಅಷ್ಟರಲ್ಲಿ ಕ್ರಿಕೆಟ್ ಎಂಬ ಮಾಯಾಜಾಲದಲ್ಲಿ ಬಿದ್ದು ಅರ್ಚಕನಾಗುವ ಕನಸನ್ನು ಬಿಟ್ಟುಕೊಟ್ಟೆ" ಎಂದು ವಾಸ್ ಸಂದರ್ಶನವೊಂದರಲ್ಲಿ ಹೇಳಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ