Virat Kohli Silver Bat Gift: ಸದ್ಯ ಭಾರತ ತಂಡ ಕೊಲಂಬೊದಲ್ಲಿದೆ. ಏಷ್ಯಾ ಕಪ್ 2023 ರ ಸೂಪರ್ 4ನ ಮೂರನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿದಿದೆ. ಆದರೆ ಮಳೆಯಿಂದಾಗಿ ಪಂದ್ಯ ಮೀಸಲು ದಿನಕ್ಕೆ ಅಂದರೆ ಇಂದು ನಡೆಯಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 1524 ದಿನಗಳ ನಂತರ ಟೀಂ ಇಂಡಿಯಾಗೆ ಎದುರಾಯ್ತು ಆ ಒಂದು ಸನ್ನಿವೇಶ…!


ಇನ್ನು ಈ ಪಂದ್ಯಕ್ಕೂ ಮುನ್ನ ಭಾರತ ತಂಡದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರಿಗೆ, ಶ್ರೀಲಂಕಾದ ಯುವ ಆಟಗಾರ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಅಂತಿಂಥ ಬ್ಯಾಟ್ ಅಲ್ಲ… ಬದಲಾಗಿ ಬೆಳ್ಳಿ ಲೇಪಿತ ಬ್ಯಾಟ್ ಆಗಿದೆ. ಇನ್ನು ಕೊಹ್ಲಿಗೆ ಬ್ಯಾಟನ್ನು ಉಡುಗೊರೆಯಾಗಿ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಸೆಪ್ಟೆಂಬರ್ 10 ರಂದು ಪಾಕಿಸ್ತಾನ ವಿರುದ್ಧ ಭಾರತ ತಂಡ ಭರ್ಜರಿ ಪಂದ್ಯವನ್ನಾಡಿತ್ತು.  ಆದರೆ ಮಳೆಯ ಕಾರಣದಿಂದ ಪಂದ್ಯವನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು.


ಈ ಪಂದ್ಯಕ್ಕೂ ಮುನ್ನ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಈ ವಿಡಿಯೋದ ಆರಂಭದಲ್ಲಿ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶ್ರೀಲಂಕಾದ ಯುವ ಆಟಗಾರರೊಂದಿಗೆ ಮಾತನಾಡುತ್ತಾ ಅವರಿಗೆ ಬ್ಯಾಟಿಂಗ್ ಸಲಹೆಗಳನ್ನು ನೀಡುತ್ತಿರುವುದನ್ನು ಕಾಣಬಹುದು. ಇನ್ನು ವಿಡಿಯೋದ ಕೊನೆಯಲ್ಲಿ ವಿರಾಟ್ ಕೊಹ್ಲಿಗೆ ಈ ಯುವ ಆಟಗಾರರು ವಿಶೇಷ ಬೆಳ್ಳಿಯ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಬ್ಯಾಟ್‌’ನಲ್ಲಿ ಕೊಹ್ಲಿಯ ಎಲ್ಲಾ ಶತಕಗಳನ್ನು ಸಹ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: ಭಾರತ vs ಪಾಕ್ ಮೀಸಲು ಪಂದ್ಯ ರದ್ದಾದರೆ ಮುಂದೇನು? ಫೈನಲ್’ಗೆ ಎಂಟ್ರಿ ಕೊಡೋದು ಯಾರು?


ಇಂಡೋ-ಪಾಕ್ ಹೈಲೈಟ್ಸ್…


ಕಳೆದ ದಿನ ನಡೆದ ಪಾಕಿಸ್ತಾನ ವಿರುದ್ಧ ಭಾರತ ಪಂದ್ಯದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದರು. ಆರಂಭಿಕ ಆಟಗಾರು ಮೊದಲ ವಿಕೆಟ್‌’ಗೆ 121 ರನ್‌’ಗಳ ಜೊತೆಯಾಟ ಆಡಿದ್ದು, ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದ್ದರು. ಇನ್ನು ರೋಹಿತ್ ಶರ್ಮಾ 49 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌’ಗಳ ನೆರವಿನಿಂದ 56 ರನ್ ಗಳಿಸಿದರೆ, ಶುಭ್ಮನ್ ಗಿಲ್ ತಮ್ಮ ODI ವೃತ್ತಿಜೀವನದ ಎಂಟನೇ ಅರ್ಧಶತಕವನ್ನು ಬಾರಿಸಿದರು. ಅಂದರೆ ಈ ಪಂದ್ಯದಲ್ಲಿ 52 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 58 ರನ್ ಗಳಿಸಿ ಔಟಾದರು. ಸದ್ಯ ಕೆಎಲ್ ರಾಹುಲ್ (28 ಎಸೆತಗಳಲ್ಲಿ 17 ರನ್) ಹಾಗೂ ವಿರಾಟ್ ಕೊಹ್ಲಿ (16 ಎಸೆತಗಳಲ್ಲಿ ಎಂಟು ರನ್) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರೂ ಆಟಗಾರರು ಮೀಸಲು ದಿನದಂದು ಅಂದರೆ ಇಂದು ಭಾರತದ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ಯಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ