Dilshan Madushanka injured: ACC Asia Cup 2023: ಏಷ್ಯಾಕಪ್ 2023 ಆರಂಭಕ್ಕೆ ಕೇವಲ 1 ದಿನ ಮಾತ್ರ ಉಳಿದಿದೆ. ಪಾಕಿಸ್ತಾನ ಆತಿಥ್ಯ ವಹಿಸಲಿರುವ ಈ ಟೂರ್ನಿ ಆಗಸ್ಟ್ 30ರಿಂದ ಆರಂಭವಾಗಲಿದೆ. ಆದರೆ ಈ ಟೂರ್ನಿಗೂ ಮುನ್ನ ತಂಡವೊಂದರ ಉದ್ವೇಗ ಹೆಚ್ಚಿದೆ. ಇದಕ್ಕೆ ಕಾರಣ ಈ ತಂಡದ ಸ್ಟಾರ್ ವೇಗದ ಬೌಲರ್ 2023ರ ಏಷ್ಯಾ ಕಪ್‌’ನಿಂದ ಹೊರಗುಳಿದಿದ್ದಾರೆ.


COMMERCIAL BREAK
SCROLL TO CONTINUE READING

ಸಹ-ಆತಿಥೇಯ ಶ್ರೀಲಂಕಾದ ಏಷ್ಯಾ ಕಪ್ ತಯಾರಿಗೆ ಮತ್ತೊಂದು ಹಿನ್ನಡೆಯಾಗಿದೆ. ಶ್ರೀಲಂಕಾದ ವೇಗದ ಬೌಲರ್ ದಿಲ್ಶಾನ್ ಮದುಶಂಕ ಗಾಯಗೊಂಡಿರುವ ತಂಡದ ಬೌಲರ್‌’ಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ಇದರಲ್ಲಿ ಲಹಿರು ಕುಮಾರ, ದುಷ್ಮಂತ ಚಮೀರಾ ಮತ್ತು ವನಿಂದು ಹಸರಂಗ ಕೂಡ ಇದ್ದಾರೆ.


ಇದನ್ನೂ ಓದಿ: ಧ್ವಜವಿಲ್ಲದೆ ನಿಂತಿದ್ದ ಬೆಳ್ಳಿ ಗೆದ್ದ ಪಾಕ್ ಆಟಗಾರನಿಗೆ ತಿರಂಗಾ ಬಳಿ ನಿಲ್ಲುವಂತೆ ಹೇಳಿದ ನೀರಜ್ ಚೋಪ್ರಾ! ಮುಂದಾಗಿದ್ದೇನು?


ಶ್ರೀಲಂಕಾ ಕ್ರಿಕೆಟ್‌’ನ ವೈದ್ಯಕೀಯ ಸಮಿತಿಯ ಅಧ್ಯಕ್ಷ ಅರ್ಜುನ್ ಡಿ ಸಿಲ್ವಾ ಇಎಸ್‌ಪಿಎನ್‌ ಕ್ರಿಕ್‌ ಇನ್‌ಫೋಗೆ ಮಾಹಿತಿ ನೀಡಿದ್ದು, ಶುಕ್ರವಾರದ ಅಭ್ಯಾಸ ಪಂದ್ಯದ ವೇಳೆ ಮಧುಶನಕ ಗಾಯಗೊಂಡಿದ್ದಾರೆ. ವಿಶ್ವಕಪ್‌’ಗೆ ಮುಂಚಿತವಾಗಿ ಫಿಟ್‌ನೆಸ್ ಮರಳಿ ಪಡೆಯಲು ಸಾಧ್ಯವಾಗದಿರಬಹುದು ಎಂದು ಹೇಳಿದ್ದಾರೆ.


ವಿಶ್ವಕಪ್‌’ನಿಂದ ಹೊರಗುಳಿಯುವ ಅಪಾಯ!


ವರದಿಯ ಪ್ರಕಾರ, ಚಮೀರಾ ಅವರು ಗಾಯದ ಕಾರಣ ಏಷ್ಯಾಕಪ್‌’ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ವಿಶ್ವಕಪ್‌’ನ ಆರಂಭಿಕ ಆಟದಲ್ಲೂ ಆಡುವುದು ಅನುಮಾನಾಸ್ಪದವಾಗಿದೆ. ಲೆಗ್ ಸ್ಪಿನ್ನರ್ ಹಸರಂಗ ಕೂಡ ತೊಡೆಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈ ಸುದ್ದಿಯ ಪ್ರಕಾರ, ಅವರು ಕೂಡ ಏಷ್ಯಾ ಕಪ್‌’ನ ಕೆಲವು ಆಟವನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಕುಮಾರ, ಚಮೀರ ಮತ್ತು ಮದುಶಂಕ ಮೂವರ ತಂಡ ಜೂನ್ ಮತ್ತು ಜುಲೈನಲ್ಲಿ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅನುಪಸ್ಥಿತಿಯಲ್ಲಿ, ಶ್ರೀಲಂಕಾವು ಕಸುನ್ ರಜಿತಾ, ಪ್ರಮೋದ್ ಮಧುಶನ್ ಮತ್ತು ಮತಿಶ ಪತಿರಾನ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.


ಆದರೆ ಹಸರಂಗ ಬದಲಿಗೆ ದುನಿತ್ ವೆಲಾಲಗೆ ಅಥವಾ ದುಶನ್ ಹೇಮಂತ ಅವರ ಆಯ್ಕೆಗಳಿವೆ. ಏಷ್ಯಾಕಪ್‌’ನಲ್ಲಿ ಗುರುವಾರ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಅಭಿಯಾನ ಆರಂಭಿಸಲಿದೆ.


ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲಿ Team India ಪರ ಅತೀ ಹೆಚ್ಚು ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಪಡೆದ ಆಟಗಾರ ಯಾರು?


ಈ ಇಬ್ಬರು ಆಟಗಾರರಿಗೆ ಕೋವಿಡ್ ಪಾಸಿಟಿವ್!


ಶ್ರೀಲಂಕಾದ ಆರಂಭಿಕ ಬ್ಯಾಟ್ಸ್‌ಮನ್ ಅವಿಷ್ಕಾ ಫೆರ್ನಾಂಡೋ ಮತ್ತು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕುಸಾಲ್ ಪೆರೆರಾಗೆ ಕೋವಿಡ್ -19 ಪಾಸಿಟಿವ್ ವಕ್ಕರಿಸಿಕೊಂಡಿದೆ. ಇಬ್ಬರನ್ನೂ ಕ್ವಾರೆಂಟೈನ್’ನಲ್ಲಿ ಇರಿಸಲಾಗಿದೆ. ಎಲ್‌ ಪಿ ಎಲ್ 2023 ರ ಅಂತಿಮ ಹಂತದಲ್ಲಿ ಇಬ್ಬರಿಗೂ ಕೋವಿಡ್-19 ಸೋಂಕು ತಗುಲಿದೆ ಎಂದು ಶ್ರೀಲಂಕಾ ತಂಡದ ಆಡಳಿತ ತಿಳಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.