ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ಚೆನ್ನೈ ಸೂಪರ್ ಕಿಂಗ್ಸ್ ನ ಆಟಗಾರ ಶೇನ್ ವಾಟ್ಸನ್!
ಸ್ಟಾರ್ ಆಸ್ಟ್ರೇಲಿಯಾದ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಮಂಗಳವಾರದಂದು ಸುಮಾರು ಎರಡು ದಶಕಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.39 ರ ಹರೆಯದ ಶೇನ್ ವಾಟ್ಸನ್ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಪರ ಕೊನೆಯ ಕ್ರಿಕೆಟ್ ಪಂದ್ಯವನ್ನು ಆಡಿದ್ದಾರೆ.
ನವದೆಹಲಿ: ಸ್ಟಾರ್ ಆಸ್ಟ್ರೇಲಿಯಾದ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಮಂಗಳವಾರದಂದು ಸುಮಾರು ಎರಡು ದಶಕಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.39 ರ ಹರೆಯದ ಶೇನ್ ವಾಟ್ಸನ್ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಪರ ಕೊನೆಯ ಕ್ರಿಕೆಟ್ ಪಂದ್ಯವನ್ನು ಆಡಿದ್ದಾರೆ.
'ನೀನು ಚೆನ್ನೈ ತಂಡದ ಹೃದಯ ಬಡಿತವಿದ್ದಂತೆ'-ಸುರೇಶ್ ರೈನಾಗೆ ಶೇನ್ ವ್ಯಾಟ್ಸನ್ ಹೃದಯಸ್ಪರ್ಶಿ ಸಂದೇಶ
ವ್ಯಾಟ್ಸನ್ ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಚೆನ್ನೈ ತಂಡವು ಐಪಿಎಲ್ 2020ಯಲ್ಲಿ ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯಲು ವಿಫಲವಾದ ಬೆನ್ನಲ್ಲೇ ಅವರು ಅವರು ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.'ಈ ಮುಕ್ತಾಯ ಅಧ್ಯಾಯವು ಮೇಲಕ್ಕೆ ಹೋಗುವುದು ತುಂಬಾ ಕಷ್ಟಕರವಾಗಿದೆ, ಆದರೆ ನಾನು ಪ್ರಯತ್ನಿಸಲಿದ್ದೇನೆ. ಈ ಅದ್ಭುತ ಕನಸನ್ನು ಬದುಕಿದ್ದಕ್ಕಾಗಿ ನಾನು ಎಂದೆಂದಿಗೂ ಕೃತಜ್ಞನಾಗಿದ್ದೇನೆ. ಈಗ ಮುಂದಿನ ರೋಚಕತೆಗೆ' ಎಂದು ವ್ಯಾಟ್ಸನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಶೇನ್ ವಾಟ್ಸನ್ ಹೆಸರಿಸಿದ ಸಾರ್ವಕಾಲಿಕ ಟಾಪ್ 5 ಟಿ-20 ಬೌಲರ್‌ಗಳಲ್ಲಿ ಸ್ಥಾನ ಪಡೆದ ಭಾರತೀಯ ಬೌಲರ್ !
ಶೇನ್ ವಾಟ್ಸನ್ ಆರ್ಭಟಕ್ಕೆ ತತ್ತರಿಸಿದ ರಾಜಸ್ತಾನ್
ಶೇನ್ ವ್ಯಾಟ್ಸನ್ 2016 ರಲ್ಲಿಯೇ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರು 2002 ರಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು.ಅದಾದ ನಂತರ 2005 ರಲ್ಲಿ ಟೆಸ್ಟ್ ಗೆ ಪಾದರ್ಪಣೆ ಮಾಡಿದ್ದರು.ಅವರು 190 ಏಕದಿನ ಪಂದ್ಯಗಳಲ್ಲಿ 5757 ರನ್ ಹಾಗೂ 168 ವಿಕೆಟ್ ಗಳಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ, 3731 ರನ್ ಗಳಿಸಿರುವುದಲ್ಲದೆ 75 ವಿಕೆಟ್ ಪಡೆದಿದ್ದಾರೆ.