Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 17ನೇ ಸೀಸನ್ ನಲ್ಲಿ ಕೊನೆಗೂ ಮತ್ತೊಂದು ಗೆಲುವು ದಾಖಲಿಸಿದೆ. ಸತತ ಆರು ಪಂದ್ಯಗಳಲ್ಲಿ ಸೋತಿದ್ದ ಆರ್‌ಸಿಬಿ ಗುರುವಾರ ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ವಿರುದ್ಧ 35 ರನ್‌ಗಳ ಜಯ ಸಾಧಿಸಿತು. ಇದರಿಂದ ಆರ್‌ಸಿಬಿ ಅಭಿಮಾನಿಗಳು ಹಾಗೂ ಆಟಗಾರರ ಸಂತಸಕ್ಕೆ ಮಿತಿಯೇ ಇರದಂತಾಗಿತ್ತು.. ಅಲ್ಲದೇ ಹಲವು ವರ್ಷಗಳಿಂದ ಕಾಯುತ್ತಿದ್ದ ಗೆಲುವು ಸಿಕ್ಕಿದ್ದರಿಂದ ಆಟಗಾರರೂ ಕೊಂಚ ಭಾವುಕರಾದದ್ದು ಕಂಡು ಬಂತು.


COMMERCIAL BREAK
SCROLL TO CONTINUE READING

ಅದರಲ್ಲೂ ರನ್ ಮಷಿನ್, ದಾಖಲೆಗಳ ಕಿಂಗ್, ರಾಯಲ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸ್ವಲ್ಪ ಹೊತ್ತು ಮಗುವಾಗಿಬಿಟ್ಟರು. ಪ್ರತಿ ಬಾರಿ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು ವಿಕೆಟ್ ಪಡೆದಾಗ ಕುಗ್ಗವಂತೆ ಕಾಣುತ್ತಿದ್ದ ಅವರು ತಮ್ಮ ತಂಡದ ಗೆಲುವಿನ ನಂತರ ಸಂಭ್ರಮಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಾಲ್ಕು ವರ್ಷಗಳ ನಂತರ ಕೊಹ್ಲಿ ಮನಸಾರೆ ನಗುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ಅಭಿಮಾನಿಗಳು ಸಂಭ್ರಮಿಸಿದ್ದಾರೆ. 


SRH CEO: RCB ಯ ಅಬ್ಬರದ ಆಟಕ್ಕೆ ಕಾವ್ಯಾ ಮಾರನ್ ಫುಲ್ ಸೈಲೆಂಟ್!


ಸನ್‌ರೈಸರ್ಸ್ ಹೈದರಾಬಾದ್ ತವರು ಮೈದಾನದಲ್ಲಿ ಈ ಪಂದ್ಯ ನಡೆದರೂ ಆರ್‌ಸಿಬಿಗೆ ಭಾರಿ ಬೆಂಬಲ ಸಿಕ್ಕಿತ್ತು. ಪಂದ್ಯ ಮುಗಿದ ಬಳಿಕ ಮೈದಾನದಲ್ಲಿದ್ದ ಪ್ರೇಕ್ಷಕರಿಗೆ ಕೈಮುಗಿದು ಧನ್ಯವಾದ ಹೇಳಿದರು.. 


ಇನ್ನು ಪಂದ್ಯದ ವಿಷಯಕ್ಕೆ ಬರುವುದಾದರೆ... ವಿರಾಟ್ ಕೊಹ್ಲಿ (43 ಎಸೆತಗಳಲ್ಲಿ 51) ಮತ್ತು ರಜತ್ ಪಾಟಿದಾರ್ (20 ಎಸೆತಗಳಲ್ಲಿ 50) ಅರ್ಧ ಶತಕ ಸಿಡಿಸಿದ್ದು, ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಏಳು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಬಳಿಕ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 171 ರನ್ ಗಳಿಕೆಗೆ ಮಾತ್ರ ಸೀಮಿತವಾಯಿತು..


ಇದನ್ನೂ ಓದಿ-RCB vs SRH:‌ ಆರ್‌ಸಿಬಿ ಭರ್ಜರಿ ಬ್ಯಾಟಿಂಗ್‌ಗೆ ಮುಗ್ಗರಿಸಿದ ಹೈದರಾಬಾದ್!! ಕೊನೆಗೂ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.