Trent Boult: ಟಿ20 ವಿಶ್ವಕಪ್‌ 2024ರ ಸಿ ಗುಂಪಿನ ಪಂದ್ಯದಲ್ಲಿ ಸೋಮವಾರ, ಜೂನ್‌ 17ರಂದು ಪಪುವಾ ನ್ಯೂ ಗಿನಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಕಣಕ್ಕಳಿಯಲಿವೆ. 
ಈ ಪಂದ್ಯದಲ್ಲಿ ಬೌಲ್ಟ್‌ ಆಡಲಿದ್ದಾರೆ. ಆದರೆ ಇದುವೇ ಅವರ ಕೊನೆಯ ಟಿ20 ವಿಶ್ವಕಪ್‌ ಪಂದ್ಯ ಎಂದು ಟ್ರೆಂಟ್‌ ಬೌಲ್ಟ್‌ ಖಚಿತ ಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಟಿ20 ವಿಶ್ವಕಪ್‌ನ ಸಿ ಗುಂಪಿನ ಪಂದ್ಯದಲ್ಲಿ ಸೂಪರ್‌ 8ಕ್ಕೆ ಈಗಾಗಲೇ ವೆಸ್ಟ್‌ ಇಂಡೀಸ್‌ ಹಾಗೂ ಅಫ್ಘಾನಿಸ್ತಾನ ತಂಡಗಳು ಮುನ್ನಡೆ ಕಾಯ್ದುಕೊಂಡಿವೆ. ಆದ ಕಾರಣ ನ್ಯೂಜಿಲೆಂಡ್‌ ತಂಡ ಸೂಪರ್‌ 8ಕ್ಕೆ ಎಂಟ್ರಿ ಕೊಡುವ ಚ್ಯಾನ್ಸ್‌ ಕಳೆದುಕೊಂಡಿದೆ. 


ಶನಿವಾರ, ಜೂನ್‌ 15ರಂದು ಉಗಾಂಡ ವಿರುದ್ಧದ ಪಂದ್ಯದಲ್ಲಿ ಬೌಲ್ಟ್‌ ನಾಲ್ಕು ಓವರ್‌ಗಳ ಬೌಲಿಂಗ್‌ ಮಾಡಿದ್ದರು. ಈ ಕೋಟಾದಲ್ಲಿ 7 ರನ್‌ ಅಷ್ಟೇ ನೀಡಿ 2 ವಿಕೆಟ್‌ ಪಡೆದುಕೊಂಡಿದ್ದರು.


ಇದನ್ನೂ ಓದಿ: T20 World Cup 2024: ಸೌತ್‌ ಆಫ್ರಿಕಾ ವಿರುದ್ಧ ಮಂಡಿಯೂರಿದ ನೇಪಾಳ


ಟ್ರೆಂಟ್‌ ಬೌಲ್ಟ್‌ ವಿದಾಯ:
ಇನ್ನೂ ಉಗಾಂಡಾ ವಿರುದ್ಧ ಪಂದ್ಯದ ನಂತರ ಮಾತನಾದಡಿದ ಬೌಲ್ಟ್‌ " ಇದು ನನ್ನ ಕೊನೆಯ ಟಿ20 ವಿಶ್ವಕಪ್ ಪಂದ್ಯವಾಗಿರಲಿದೆ" ಎಂದು ಹೇಳಿಕೊಂಡಿದ್ದಾರೆ.


ನ್ಯೂಜಿಲೆಂಡ್‌ ತಂಡದ ಸೀನಿಯರ್‌ ಪ್ಲೇಯರ್ಸ್‌ ಹಿಂದೆ ಸರಿದು ಯುವ ಆಟಗಾರರಿಗೆ ಅವಕಾಶ ಮಾಡಿಕೊಡುತ್ತಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದರೂ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.


ಇನ್ನೂ ಟ್ರೆಂಟ್‌ ಬೌಲ್ಟ್‌ ತಮ್ಮ ಹನ್ನೊಂದು ವರ್ಷಗಳ ಟಿ20 ವಿಶ್ವಕಪ್‌ ವೃತ್ತಿ ಜೀವನದಲ್ಲಿ 60 ಪಂದ್ಯಗಳನ್ನಾಡಿ 81 ವಿಕೆಟ್‌ ಕಲೆ ಹಾಕಿದ್ದಾರೆ. ಇನ್ನೂ 220 ಟಿ20 ಪಂದ್ಯಗಳನ್ನಾಡಿರುವ ಬೌಲ್ಟ್‌ 216 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. 


ಇದನ್ನೂ ಓದಿ: T 20 Worldcup 2024: ಮಳೆಯಿಂದ ಮಾಸಿಹೋಯ್ತು ಪಾಕಿಸ್ತಾನದ ವಿಶ್ವಕಪ್‌ ಕನಸು..!


ಸದ್ಯಕ್ಕೆ ನೋಡಿದರೆ ನ್ಯೂಜಿಲೆಂಡ್‌ ತಂಡದಲ್ಲಿ ಅಥೀ ಕಡಿಮೆ ಪ್ರಯಾಣದಲ್ಲಿ ಮೂವತ್ತು ವರ್ಷಕ್ಕೂ ಕಡಿಮೆ ಇರುವ ಆಟಗಾರರು ಸ್ಥಾನ ಪಡೆದಿದ್ದಾರೆ. ಇದೀಗ ಟ್ರೆಂಟ್‌ ಬೌಲ್ಟ್‌ರಂತೆ ಸ್ವಯಂ ಪ್ರೇರಿತವಾಗಿ ಹಿಂದೆ ಸರಿದರೆ ಯುವ ಆಟಗಾರರಿಗೆ ಅವಕಾಶ ಮಾಡಿಕೊಟ್ಟಂತಿರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ