Steve Smith and David Warner Retirement: ಕ್ರಿಕೆಟ್ ಲೋಕದಿಂದ ಆಘಾತಕಾರಿ ಸುದ್ದಿಯೊಂದು ಹೊರಬೀಳುತ್ತಿದೆ. ಅಸಲಿಗೆ ಟೀಂ ಇಂಡಿಯಾದ ಇಬ್ಬರು ದೊಡ್ಡ ಶತ್ರು ಆಟಗಾರರ ನಿವೃತ್ತಿ ಸುದ್ದಿ ಹೊರಬೀಳುತ್ತಿದೆ. ಈ ಇಬ್ಬರೂ ಕ್ರಿಕೆಟಿಗರು ಭಾರತದ ಅನುಭವಿ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಕ್ರಿಕೆಟ್ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದರು. ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ನಿವೃತ್ತಿಯ ಸುದ್ದಿ ವಿಶ್ವ ಕ್ರಿಕೆಟ್‌ ನಲ್ಲಿ ದಿಢೀರ್ ತಲ್ಲಣ ಮೂಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 10ನೇ ಸ್ಥಾನಕ್ಕಿಳಿದ ರಶ್ಮಿಕಾ! ಭಾರತದ ನಂ.1 ಪಾಪ್ಯುಲರ್ ನಟಿ ಯಾರು ಗೊತ್ತಾ?


ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮತ್ತು ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರು ಓವಲ್‌ ನಲ್ಲಿ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ನಂತರ ಟೆಸ್ಟ್ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಲಿದ್ದಾರೆ. ಇಂಗ್ಲೆಂಡ್‌ ನ ಮಾಜಿ ನಾಯಕ ಮೈಕಲ್ ವಾನ್ ಫಾಕ್ಸ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಾ, “ಡೇವಿಡ್ ವಾರ್ನರ್ ಓವಲ್ ಟೆಸ್ಟ್‌’ನಲ್ಲಿ ಆಡಿದರೆ, ಅದು ಅವರ ಕೊನೆಯ ಪಂದ್ಯವಾಗಿರಲಿದೆ” ಎಂದು ಹೇಳಿದ್ದಾರೆ.


ಸ್ಟೀವ್ ಸ್ಮಿತ್ ಬಗ್ಗೆಯೂ ಅದೇ ವಿಷಯ ಹೇಳಿದ್ದು, “ಓವಲ್‌ ನಲ್ಲಿ ಆಸ್ಟ್ರೇಲಿಯಾ ಪರ ಅವರ ಕೊನೆಯ ಪಂದ್ಯ ಇರಬಹುದು” ಎಂದಿದ್ದಾರೆ.


ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್‌ ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇನ್ನು ಭಾರತ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿಯೂ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರ ದಾಖಲೆ ಅದ್ಭುತವಾಗಿದೆ. ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಸ್ಟೀವ್ ಸ್ಮಿತ್ ಜೊತೆ ಹಲವು ಬಾರಿ ಜಗಳವಾಡಿದ್ದುಂಟು. ಇದಲ್ಲದೇ ಡೇವಿಡ್ ವಾರ್ನರ್ ಅವರು ರೋಹಿತ್ ಶರ್ಮಾ ಜೊತೆಗೂ ಜಗಳವಾಡಿದ್ದಾರೆ. 36 ವರ್ಷದ ಡೇವಿಡ್ ವಾರ್ನರ್ ಅವರು 108 ಟೆಸ್ಟ್ ಪಂದ್ಯಗಳಲ್ಲಿ 44.46 ಸರಾಸರಿಯಲ್ಲಿ 25 ಶತಕಗಳು ಮತ್ತು 35 ಅರ್ಧ ಶತಕಗಳನ್ನು ಒಳಗೊಂಡಂತೆ 8403 ರನ್ ಗಳಿಸಿದ್ದಾರೆ.


ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪರ 142 ODIಗಳಲ್ಲಿ 44.67 ಸರಾಸರಿಯಲ್ಲಿ 6030 ರನ್ ಗಳಿಸಿದ್ದಾರೆ, ಇದರಲ್ಲಿ 19 ಶತಕಗಳು ಮತ್ತು 27 ಅರ್ಧ ಶತಕಗಳು ಸೇರಿವೆ. 99 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 32.89 ಸರಾಸರಿಯಲ್ಲಿ 1 ಶತಕ ಮತ್ತು 24 ಅರ್ಧ ಶತಕ ಸೇರಿದಂತೆ 2894 ರನ್ ಗಳಿಸಿದ್ದಾರೆ.


ಇದನ್ನೂ ಓದಿ: ಆಗಸ್ಟ್ ಒಂದರಿಂದ ಈ ಸ್ಮಾರ್ಟ್ ಫೋನ್ ಗಳು ಕಾರ್ಯ ನಿರ್ವಹಿಸುವುದಿಲ್ಲ ! ನಿಮ್ಮ ಕೈಯ್ಯಲಿರುವ ಫೋನ್ ಯಾವುದು ? 


34 ವರ್ಷದ ಸ್ಟೀವ್ ಸ್ಮಿತ್ 101 ಟೆಸ್ಟ್ ಪಂದ್ಯಗಳಲ್ಲಿ 58.57 ಸರಾಸರಿಯಲ್ಲಿ 32 ಶತಕಗಳು ಮತ್ತು 37 ಅರ್ಧ ಶತಕಗಳನ್ನು ಒಳಗೊಂಡಂತೆ 9195 ರನ್ ಗಳಿಸಿದ್ದಾರೆ. 142 ODIಗಳಲ್ಲಿ 44.50 ಸರಾಸರಿಯಲ್ಲಿ 12 ಶತಕಗಳು ಮತ್ತು 29 ಅರ್ಧ ಶತಕಗಳನ್ನು ಒಳಗೊಂಡಂತೆ 4939 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ಪರ 63 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 25.20ರ ಸರಾಸರಿಯಲ್ಲಿ 4 ಅರ್ಧಶತಕ ಸೇರಿದಂತೆ 1008 ರನ್ ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ