Steve Smith 35 Test Century: ಆಸ್ಟ್ರೇಲಿಯಾ ತಂಡವು ಎರಡು ಟೆಸ್ಟ್ ಪಂದ್ಯಗಳು ಮತ್ತು ಅಷ್ಟೇ ಸಂಖ್ಯೆಯ ಏಕದಿನ ಪಂದ್ಯಗಳನ್ನು ಆಡಲು ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ಆಸ್ಟ್ರೇಲಿಯಾ ತಂಡವು ಗ್ಯಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕರೀನಾ ಕಪೂರ್‌ - ಸೈಫ್‌ ಅಲಿ ಖಾನ್‌ ಬದುಕಿನಲ್ಲಿ ಬಿರುಗಾಳಿ.. ದಾಳಿಯ ಬೆನ್ನಲ್ಲೇ ಬಹುದೊಡ್ಡ ಡಿಸಿಷನ್‌ ತೆಗೆದುಕೊಂಡ ಸೈಫೀನಾ, ಮಕ್ಕಳಿಗಾಗಿ ಈ ಕಠಿಣ ನಿರ್ಧಾರ ಎಂದ ಬೆಬೋ !!


ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅಷ್ಟೇ ಅಲ್ಲದೆ, ಶತಕದಾಟ ಆಡುವ ಮೂಲಕ ವೃತ್ತಿಜೀವನದ 35 ನೇ ಟೆಸ್ಟ್ ಶತಕ ತಮ್ಮ ಬತ್ತಳಿಕೆಗೆ ಸೇರಿಸಿದ್ದಾರೆ. ಇದರೊಂದಿಗೆ ಅವರು ಸುನಿಲ್ ಗವಾಸ್ಕರ್ ಮತ್ತು ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿ ಶ್ರೇಷ್ಠರಾಗುವತ್ತ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.


ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಶತಕ ಗಳಿಸಿ 35 ಟೆಸ್ಟ್ ಶತಕಗಳ ಗಡಿಯನ್ನು ತಲುಪಿದರು. ಇದರೊಂದಿಗೆ, ಸ್ಮಿತ್ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಮತ್ತು ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ. ಸ್ಮಿತ್ ತಮ್ಮ 35 ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದ ತಕ್ಷಣ, ಈ ಸ್ವರೂಪದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್, ಬ್ರಿಯಾನ್ ಲಾರಾ ಮತ್ತು ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿದ್ದಾರೆ. ಈ ಮೂವರು ಬ್ಯಾಟ್ಸ್‌ಮನ್‌ಗಳು ತಲಾ 34 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ.


ನಾಯಕನಾಗಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳು
25 - ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ)
20. ವಿರಾಟ್ ಕೊಹ್ಲಿ (ಭಾರತ)
19 - ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
16 - ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)
15 - ಅಲನ್ ಬಾರ್ಡರ್ (ಆಸ್ಟ್ರೇಲಿಯಾ)
15 - ಸ್ಟೀವ್ ವಾ (ಆಸ್ಟ್ರೇಲಿಯಾ)


ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಆಗಲು ಸ್ಮಿತ್ ಕೇವಲ ಏಳು ಶತಕಗಳ ದೂರದಲ್ಲಿದ್ದಾರೆ. ಆಸ್ಟ್ರೇಲಿಯಾ ಪರ ರಿಕಿ ಪಾಂಟಿಂಗ್ ಅತಿ ಹೆಚ್ಚು 41 ಶತಕಗಳನ್ನು ಗಳಿಸಿದ್ದಾರೆ. ಅವರ ನಂತರ 35 ನೇ ಟೆಸ್ಟ್ ಶತಕವನ್ನು ಪೂರೈಸಿದ ಸ್ಮಿತ್ ಹೆಸರು ಬರುತ್ತದೆ. ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಮತ್ತು ಇಂಗ್ಲೆಂಡ್‌ನ ಹಾಲಿ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಅವರನ್ನು ಹಿಂದಿಕ್ಕುವುದು ಸ್ಮಿತ್ ಅವರ ಮುಂದಿನ ಗುರಿಯಾಗಿದೆ. ಇಬ್ಬರೂ ತಲಾ 36 ಶತಕಗಳನ್ನು ಗಳಿಸಿದ್ದಾರೆ.


ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳು
ಸಚಿನ್ ತೆಂಡೂಲ್ಕರ್ - 51
ಜಾಕ್ವೆಸ್ ಕಾಲಿಸ್ - 45
ರಿಕಿ ಪಾಂಟಿಂಗ್ - 41
ಕುಮಾರ್ ಸಂಗಕ್ಕಾರ - 38
ಜೋ ರೂಟ್ - 36
ರಾಹುಲ್ ದ್ರಾವಿಡ್ - 36
ಸ್ಟೀವ್ ಸ್ಮಿತ್ - 35


ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಬಾಲಕ ಯುವನ್ ಗೆ ಕಿಚ್ಚ ಸುದೀಪ ಉಡುಗೊರೆಯಾಗಿ ಕೊಟ್ಟ ಬ್ರೆಸ್ಲೈಟ್ ಬೆಲೆ ಎಷ್ಟು ಗೊತ್ತಾ ? ಬಿಗ್ ಬಾಸ್ ಸ್ಪರ್ಧಿಗಳೂ ಗೆದ್ದಿಲ್ಲ ಅಷ್ಟು ಹಣ !


ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಶತಕಗಳು
ರಿಕಿ ಪಾಂಟಿಂಗ್ - 41
ಸ್ಟೀವ್ ಸ್ಮಿತ್ - 35
ಸ್ಟೀವ್ ವಾ - 32
ಮ್ಯಾಥ್ಯೂ ಹೇಡನ್ - 30
ಡಾನ್ ಬ್ರಾಡ್ಮನ್ - 29


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ