ಏಕದಿನದಲ್ಲಿ 4 ರನ್’ಗೆ 6 ವಿಕೆಟ್ ಕಬಳಿಸಿದ್ದ ಈತನೇ ಭಾರತದ ಬೆಸ್ಟ್ ಬೌಲರ್! ಯಾರು ಗೊತ್ತಾ?
Team India’s Best Bowler: 50-ಓವರ್’ಗಳ ಸ್ವರೂಪದಲ್ಲಿ ಭಾರತೀಯ ಬೌಲರ್ ಸಿರಾಜ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಒಂದು ಓವರ್’ನಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Team India’s Best Bowler: ಭಾನುವಾರ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಫೈನಲ್’ನಲ್ಲಿ ಭಾರತ ಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿ, 8ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇನ್ನೊಂದೆಡೆ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದ ಭಾರತದ ಸೀಮರ್ ಮೊಹಮ್ಮದ್ ಸಿರಾಜ್ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: ಏಷ್ಯಾಕಪ್ ಗೆದ್ದ ಭಾರತಕ್ಕೆ, ಸೋಲುಂಡ ಶ್ರೀಲಂಕಾಗೆ ಸಿಕ್ಕ ಮೊತ್ತ ಎಷ್ಟು? ಯಾರ ಪಾಲಿಗೆ ಯಾವ ಅವಾರ್ಡ್
50-ಓವರ್’ಗಳ ಸ್ವರೂಪದಲ್ಲಿ ಭಾರತೀಯ ಬೌಲರ್ ಸಿರಾಜ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಒಂದು ಓವರ್’ನಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇನ್ನು ಭಾರತದ ಪರ ಆಡಿದ 10 ವಿಭಿನ್ನ ಬೌಲರ್’ಗಳು ಕಡಿಮೆ ರನ್ ನೀಡಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಆಶಿಶ್ ನೆಹ್ರಾ ಎರಡು ಬಾರಿ ಈ ಸಾಧನೆ ಮಾಡಿದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ
ಕಡಿಮೆ ಸ್ಕೋರ್ ನೀಡಿ 6 ವಿಕೆಟ್ ಕಬಳಿಸಿದ ಭಾರತೀಯ ಬೌಲರ್’ಗಳ ಪಟ್ಟಿ ಇಲ್ಲಿದೆ:
ಸ್ಟುವರ್ಟ್ ಬಿನ್ನಿ - 2014 ರಲ್ಲಿ ಬಾಂಗ್ಲಾದೇಶ ವಿರುದ್ಧ 4 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು
ಅನಿಲ್ ಕುಂಬ್ಳೆ - 1993 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 12 ರನ್’ಗೆ 6 ವಿಕೆಟ್
ಜಸ್ಪ್ರೀತ್ ಬುಮ್ರಾ - 2022 ರಲ್ಲಿ ಇಂಗ್ಲೆಂಡ್ ವಿರುದ್ಧ 19 ರನ್’ಗೆ 6 ವಿಕೆಟ್
ಮೊಹಮ್ಮದ್ ಸಿರಾಜ್ - ಶ್ರೀಲಂಕಾ 2023 ರಲ್ಲಿ 21 ರನ್’ಗೆ 6 ವಿಕೆಟ್
ಆಶಿಶ್ ನೆಹ್ರಾ - 2003 ರಲ್ಲಿ ಇಂಗ್ಲೆಂಡ್ ವಿರುದ್ಧ 23 ರನ್’ಗೆ 6 ವಿಕೆಟ್
ಕುಲದೀಪ್ ಯಾದವ್ - 2018 ರಲ್ಲಿ ಇಂಗ್ಲೆಂಡ್ ವಿರುದ್ಧ 25 ರನ್’ಗೆ 6 ವಿಕೆಟ್
ಮುರಳಿ ಕಾರ್ತಿಕ್ - 2007 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 27 ರನ್’ಗೆ 6 ವಿಕೆಟ್
ಅಜಿತ್ ಅಗರ್ಕರ್ - 2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 42 ರನ್’ಗೆ 6 ವಿಕೆಟ್
ಯುಜ್ವೇಂದ್ರ ಚಹಾಲ್ - 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 42 ರನ್’ಗೆ 6 ವಿಕೆಟ್
ಅಮಿತ್ ಮಿಶ್ರಾ - 2013 ರಲ್ಲಿ ಜಿಂಬಾಬ್ವೆ ವಿರುದ್ಧ 48 ರನ್’ಗೆ 6 ವಿಕೆಟ್
ಎಸ್ ಶ್ರೀಶಾಂತ್ - 2006 ರಲ್ಲಿ ಇಂಗ್ಲೆಂಡ್ ವಿರುದ್ಧ 55 ರನ್’ಗೆ 6 ವಿಕೆಟ್
ಆಶಿಶ್ ನೆಹ್ರಾ - 2005 ರಲ್ಲಿ ಶ್ರೀಲಂಕಾ ವಿರುದ್ಧ 59 ರನ್’ಗೆ 6 ವಿಕೆಟ್
ಇದನ್ನೂ ಓದಿ: ಕುಲ್ದೀಪ್ ಯಾದವ್ ಸರ್ವಶೇಷ್ಠ ಬೌಲರ್ ಎನಿಸಿಕೊಳ್ಳಲು ಕಾರಣವಾಗಿದ್ದು ಈ ಬಾಬಾ ಮಾಡಿದ ಆಶೀರ್ವಾದ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.