World Record: ವಿಶ್ವಕ್ರಿಕೆಟ್’ನಲ್ಲಿ ಇಲ್ಲಿವರೆಗೆ ಮಾಡಿಲ್ಲ ಇಂಥಾ ದಾಖಲೆ! ಟಿ20ನಲ್ಲಿ ಗಳಿಸಿದ ಈ ಸ್ಕೋರ್ ನೋಡಿದ್ರೆ ತಲೆ ಗಿರ್ರ್…ಅನ್ನುತ್ತೆ
World Record, South Africa vs West Indies 1st T20I: ಸೆಂಚುರಿಯನ್’ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ವಿಂಡೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 258 ರನ್ ಗಳಿಸಿತು. ಅಂತಹ ದೊಡ್ಡ ಗುರಿಯನ್ನು ಬೆನ್ನಟ್ಟುವುದು ತುಂಬಾ ಕಷ್ಟಕರವಾದ ಕೆಲಸವಾಗಿತ್ತು.
World Record, South Africa vs West Indies 1st T20I: ಇಂದು ವಿಶ್ವ ಕ್ರಿಕೆಟ್‌ನಲ್ಲಿ ಮಹತ್ವ ದಾಖಲೆಯೊಂದು ರಚನೆಯಾಗಿದೆ. ಈ ದಾಖಲೆ ಮುರಿಯೋದು ಯಾವುದೇ ತಂಡಕ್ಕಾದರೂ ತುಂಬಾ ಕಷ್ಟಕರವಾದ ಕೆಲಸ. ಈ ದಾಖಲೆಯನ್ನು ದಕ್ಷಿಣ ಆಫ್ರಿಕಾ ತಂಡ ಮಾಡಿದೆ. ಏಡೆನ್ ಮಾರ್ಕ್ರಾಮ್ ನಾಯಕತ್ವದಲ್ಲಿ ಆಡಿದ ದ. ಆಫ್ರಿಕಾ ತಂಡ ಸರಣಿಯ ಎರಡನೇ T20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು 6 ವಿಕೆಟ್‌ಗಳಿಂದ ಸೋಲಿಸಿದೆ.
ಇದನ್ನೂ ಓದಿ: Asia Cup 2023ಕ್ಕೆ ಪಾಕ್ ಆತಿಥ್ಯ! ಅರ್ಹತಾ ಪಂದ್ಯ ನಡೆಯೋದು ಈ ಸ್ಥಳದಲ್ಲಿ; ಆದ್ರೆ ಭಾರತ ಪ್ರವಾಸ..!!
ಸೆಂಚುರಿಯನ್’ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ವಿಂಡೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 258 ರನ್ ಗಳಿಸಿತು. ಅಂತಹ ದೊಡ್ಡ ಗುರಿಯನ್ನು ಬೆನ್ನಟ್ಟುವುದು ತುಂಬಾ ಕಷ್ಟಕರವಾದ ಕೆಲಸವಾಗಿತ್ತು. ಆದರೆ ಕ್ವಿಂಟನ್ ಡಿ ಕಾಕ್ (100) ಬಿರುಗಾಳಿಯ ಇನ್ನಿಂಗ್ಸ್ ಮತ್ತು ನಾಯಕ ಏಡನ್ ಮಾರ್ಕ್ರಾಮ್ ಅವರ ಅಬ್ಬರದ ಬ್ಯಾಟಿಂಗ್ ಆಧಾರದ ಮೇಲೆ, ದಕ್ಷಿಣ ಆಫ್ರಿಕಾ ಅಸಾಧ್ಯವಾದ ಕೆಲಸವನ್ನು ಮಾಡಿದೆ.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಅಮೋಘ ಬ್ಯಾಟಿಂಗ್ ಮಾಡಿದರು. 44 ಎಸೆತಗಳಲ್ಲಿ 9 ಬೌಂಡರಿ ಹಾಗೂ 8 ಸಿಕ್ಸರ್‌ಗಳನ್ನು ಸಿಡಿಸಿದರು. ಕ್ವಿಂಟನ್ ರೀಜಾ ಹೆಂಡ್ರಿಕ್ಸ್ (68) ಅವರೊಂದಿಗೆ 152 ರನ್‌ಗಳ ಆರಂಭಿಕ ಜೊತೆಯಾಟವನ್ನು ಹಂಚಿಕೊಂಡರು. ಹೆಂಡ್ರಿಕ್ಸ್ ಕೂಡ ಬಿರುಸಿನ ಬ್ಯಾಟಿಂಗ್ ಮಾಡಿದರು. ಹೆಡ್ರಿಂಕ್ಸ್ 28 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಇದಾದ ಬಳಿಕ ಮಾರ್ಕ್ರಾಮ್ 21 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ ಅಜೇಯ 38 ರನ್ ಗಳಿಸಿ ಗೆಲುವಿಗೆ ಕಾರಣರಾದರು. ಹೆನ್ರಿಕ್ ಕ್ಲಾಸೆನ್ 7 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 16 ರನ್ ಗಳಿಸಿ ಅಜೇಯರಾಗಿ ಮರಳಿದರು.
ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸೂಪರ್ ದಾಖಲೆ:
ಈ ಮೂಲಕ ದಕ್ಷಿಣ ಆಫ್ರಿಕಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ದಾಖಲೆ ಮಾಡಿದೆ. ಈ ಮಾದರಿಯಲ್ಲಿ ಇದುವರೆಗೆ ಯಾವುದೇ ತಂಡವು ಸಾಧಿಸಿದ ದೊಡ್ಡ ಯಶಸ್ವಿ ಗುರಿಯಾಗಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯು ಸದ್ಯಕ್ಕೆ 1-1 ಸಮಬಲಗೊಂಡಿದೆ. ಇದಕ್ಕೂ ಮೊದಲು ಆಕ್ಲೆಂಡ್‌ನಲ್ಲಿ, 2018 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 244 ರನ್‌ಗಳ ಯಶಸ್ವಿ ಗುರಿಯನ್ನು ಸಾಧಿಸಿತ್ತು. ಅದೇ ದಾಖಲೆಯನ್ನು ದಕ್ಷಿಣ ಆಫ್ರಿಕಾ ಮುರಿದಿದೆ.
ಇದನ್ನೂ ಓದಿ: ಪತ್ನಿ ಆಯೇಷಾ ಮುಖರ್ಜೀ ಜೊತೆಗಿನ ವಿಚ್ಚೇದನದ ಬಗ್ಗೆ ಕ್ರಿಕೆಟರ್ ಶಿಖರ್ ಧವನ್ ಹೇಳಿದ್ದೇನು?
ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಪರ 3ನೇ ಕ್ರಮಾಂಕದಲ್ಲಿ ಇಳಿದಿದ್ದ ಜಾನ್ಸನ್ ಚಾರ್ಲ್ಸ್ (118) ಶತಕ ಸಿಡಿಸಿದ್ದರು. 46 ಎಸೆತಗಳಲ್ಲಿ 10 ಬೌಂಡರಿ ಹಾಗೂ 11 ಸಿಕ್ಸರ್’ಗಳನ್ನು ಸಿಡಿಸಿದರು. ಆರಂಭಿಕ ಆಟಗಾರ ಕೈಲ್ ಮೇಯರ್ಸ್ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 51 ರನ್ ಗಳಿಸಿದರು. ಇಬ್ಬರೂ ಎರಡನೇ ವಿಕೆಟ್‌ಗೆ 135 ರನ್ ಸೇರಿಸಿದರು. ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ ಗರಿಷ್ಠ 3 ವಿಕೆಟ್ ಪಡೆದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.