2018ರ ನಿಷೇಧದ ಬಗ್ಗೆ MS Dhoni ಮೇಲೆ ಇಂತಹ ಹೇಳಿಕೆ ನೀಡಿದ ಗವಾಸ್ಕರ್! ಕ್ರೀಡಾ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ!
Sunil Gavaskar statement on MS Dhoni: ಇಂಡಿಯನ್ ಪ್ರೀಮಿಯರ್ ಲೀಗ್’ಗೆ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತ ಮರಳುವಿಕೆ ಮತ್ತು 2 ವರ್ಷಗಳ ನಿಷೇಧದ ನಂತರ ಪ್ರಶಸ್ತಿ ಜಯಿಸಿರುವುದನ್ನು ಗವಾಸ್ಕರ್ ನೆನಪಿಸಿಕೊಂಡಿದ್ದಾರೆ. ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್.
Sunil Gavaskar Statement on MS Dhoni: ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಅವರು ತಮ್ಮ ಬಹಿರಂಗ ಹೇಳಿಕೆಗಳಿಗೆ ಪ್ರಸಿದ್ಧರಾಗಿದ್ದಾರೆ. ಅನೇಕ ಬಾರಿ ಅವರು ಬಹಿರಂಗವಾಗಿ ಕೆಲವೊಂದು ವಿಷಯಗಳನ್ನು ಹೇಳುತ್ತಾರೆ. ಅದು ತಂಡ ಅಥವಾ ನಿರ್ದಿಷ್ಟ ಆಟಗಾರನಿಗೆ ಕೆಟ್ಟ ಭಾವನೆ ಮೂಡಿಸುತ್ತದೆ. ಆದರೂ ಗವಾಸ್ಕರ್ ಅವರ ವರ್ತನೆ ಎಂದಿಗೂ ಬದಲಾಗುವುದಿಲ್ಲ. ಅವರು ತಮ್ಮ ಕಾಮೆಂಟರಿ ಶೈಲಿಯಿಂದಲೇ ಅಭಿಮಾನಿಗಳಲ್ಲಿಯೂ ಪ್ರಸಿದ್ಧರಾಗಿದ್ದಾರೆ. ಇದೀಗ ಅನುಭವಿ ವಿಕೆಟ್ ಕೀಪರ್ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: IPL 2023 : ಗುಜರಾತ್ ಟೈಟಾನ್ಸ್‌ಗೆ ಶತ್ರುವಾಗಿ ಕಾಡಲಿದ್ದಾನೆ ಸಿಎಸ್ಕೆ ತಂಡದ ಈ ಆಟಗಾರ!
73 ವರ್ಷದ ಗವಾಸ್ಕರ್ ಧೋನಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್’ಗೆ (ಐಪಿಎಲ್) ಚೆನ್ನೈ ಸೂಪರ್ ಕಿಂಗ್ಸ್ (ಸಿ ಎಸ್ ಕೆ) ಅದ್ಭುತ ಮರಳುವಿಕೆ ಮತ್ತು 2 ವರ್ಷಗಳ ನಿಷೇಧದ ನಂತರ ಪ್ರಶಸ್ತಿ ಜಯಿಸಿರುವುದನ್ನು ಗವಾಸ್ಕರ್ ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಆಟಗಾರರಿಂದ ಉತ್ತಮ ಪ್ರದರ್ಶನವನ್ನು ಹೊರತರುವ ಧೋನಿ ಅವರ ಸಾಮರ್ಥ್ಯವೇ ಅವರನ್ನು ವಿಭಿನ್ನವಾಗಿರಿಸುತ್ತದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಐಪಿಎಲ್’ನ ಮುಂಬರುವ ಹಂತವು ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಮಧ್ಯೆ, ಶುಕ್ರವಾರ 'ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್' ಜೊತೆ ಮಾತನಾಡುವಾಗ ಗವಾಸ್ಕರ್ 'ಕ್ಯಾಪ್ಟನ್ ಕೂಲ್' ಧೋನಿ ಅವರ ಐಪಿಎಲ್ ವೃತ್ತಿಜೀವನವನ್ನು ನೆನಪಿಸಿಕೊಂಡರು.
“ತಂಡವು ಎರಡು ವರ್ಷಗಳ ಕಾಲ ನಿಷೇಧಿಸಲ್ಪಟ್ಟಿತ್ತು. ಆದರೆ ಮರಳಿ ಬಂದು ಟ್ರೋಫಿ ಗೆದ್ದಾಗ ಅದು ದೊಡ್ಡ ವಿಷಯ ಎಂದು ನಾನು ಭಾವಿಸಿದೆ. ಧೋನಿ ಬೇರೆ ಫ್ರಾಂಚೈಸಿಯಲ್ಲಿದ್ದರು. ಇದ್ದಕ್ಕಿದ್ದಂತೆ ಅವರು ಪುನರಾಗಮನ ಮಾಡಿದರು. ಇದು ನಾಯಕತ್ವದ ಸಾಮರ್ಥ್ಯದ ಬಗ್ಗೆ ಹೇಳುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: IPL 2023 : ಈ ಬಾರಿಯೂ ʼRCBʼ ಗೆಲ್ಲೋದು ಡೌಟ್..! ಮಾಜಿ ಕ್ರಿಕೆಟಿಗನ ಶಾಕಿಂಗ್ ಭವಿಷ್ಯ
2013ರ ಋತುವಿನಲ್ಲಿ ಐಪಿಎಲ್’ನಲ್ಲಿ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪದ ನಂತರ ಎರಡು ತಂಡಗಳನ್ನು ನಿಷೇಧಿಸಲಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಲಾ ಎರಡು ವರ್ಷಗಳ ಕಾಲ ನಿಷೇಧಕ್ಕೊಳಗಾಗಿತ್ತು. ಆಗ ಧೋನಿ ಚೆನ್ನೈ ತಂಡದ ನಾಯಕತ್ವವನ್ನು ನಿಭಾಯಿಸುತ್ತಿದ್ದರು. ಇದರ ನಂತರ, ಎರಡು ಋತುಗಳಲ್ಲಿ ಧೋನಿ ಹೊಸ ತಂಡ ರೈಸಿಂಗ್ ಪುಣೆ ಸೂಪರ್’ಜೈಂಟ್ಸ್’ಗೆ ನಾಯಕರಾಗಿದ್ದರು. 2018 ರಲ್ಲಿ ಚೆನ್ನೈ ತಂಡವು ಮತ್ತೆ ಐಪಿಎಲ್’ಗೆ ಮರಳಿತು. ಬಳಿಕ ಧೋನಿ ನಾಯಕತ್ವದಲ್ಲಿ ತಂಡವು ಟ್ರೋಫಿಯನ್ನು ಎತ್ತಿಹಿಡಿಯಿತು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.