Sunil Gavaskar : ಟೀಂ ಇಂಡಿಯಾ ಜೂನ್ 9 ರಿಂದ 5 ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಸರಣಿಯಲ್ಲಿ ಹಲವು ಆಟಗಾರರ ಪ್ರದರ್ಶನಕ್ಕೆ ವಿಶೇಷ ಗಮನ ನೀಡಲಾಗುವುದು. ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ಕೂಡ ನಡೆಯಲಿದ್ದು, ಕೆಲ ಆಟಗಾರರಿಗೆ ಅವಕಾಶ ಸಿಗಲಿದೆ ಎಂಬುದು ಇದರ ಹಿಂದಿನ ಕಾರಣ. ಈ ನಡುವೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಇಬ್ಬರು ಆಟಗಾರರನ್ನು ಹಾಡಿ ಹೊಗಳಿದ್ದಾರೆ. ಆ ತಗಾರರು ಯಾರು? ಯಾಕೆ ಹೊಗಳಿದ್ದಾರೆ? ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಈ ಇಬ್ಬರು ಆಟಗಾರರನ್ನು ಹಾಡಿ ಹೊಗಳಿದ ಗವಾಸ್ಕರ್


ಈ ಕುರಿತು ಮಾತನಾಡಿದ ಗವಾಸ್ಕರ್, ಟೀಂ ಇಂಡಿಯಾದ ಆಟಗಾರರು ಭವಿಷ್ಯದಲ್ಲಿ  ಬ್ಯಾಟ್ಸ್‌ಮನ್‌ಗಳಾದ  ಹಾರ್ದಿಕ್ ಪಾಂಡ್ಯ ಮತ್ತು ರಿಷಬ್ ಪಂತ್ ಕೇವಲ 5-6 ಓವರ್‌ಗಳಲ್ಲಿ 100 ಕ್ಕಿಂತ ಹೆಚ್ಚು ರನ್ ಗಳಿಸಬಹುದು. ಹಾರ್ದಿಕ್ 5-6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಒಟ್ಟಿಗೆ ಬ್ಯಾಟ್ ಮಾಡಿದರೆ 15-20 ಓವರ್‌ಗಳಲ್ಲಿ 120 ಕ್ಕಿಂತ ಹೆಚ್ಚು ರನ್ ಗಳಿಸಬಹುದು ಎಂದು ಊಹಿಸಿದ್ದಾರೆ. 


ಇದನ್ನೂ ಓದಿ : ನಾಳೆ ಟಿ20 ವಿಶ್ವಕಪ್ ನಡೆದರೆ, ಈ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ ಎಂದ ಆಕಾಶ್ ಚೋಪ್ರಾ..!


'ಈ ಇಬ್ಬರ ಪ್ರದರ್ಶನದಿಂದ ತುಂಬಾ ಖುಷಿಯಾಗಿದೆ'


ಇನ್ನು ಮುಂದುವರೆದು ಮಾತನಾಡಿದ ಗವಾಸ್ಕರ್, 'ಇಬ್ಬರೂ ಬ್ಯಾಟ್ಸ್‌ಮನ್‌ಗಳು ಈ ಅದ್ಭುತಗಳನ್ನು ಮಾಡಬಹುದು. ಇದನ್ನು ನೋಡಲು ತುಂಬಾ ರೋಮಾಂಚನವಾಗುತ್ತದೆ. ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಐದು ಮತ್ತು ಆರನೇ ಕ್ರಮಾಂಕದಲ್ಲಿ ಒಟ್ಟಿಗೆ ಬ್ಯಾಟಿಂಗ್ ಮಾಡುವುದನ್ನ ನಾನು ಕಾಯುತ್ತಿದ್ದೇನೆ. ಐಪಿಎಲ್‌ನಲ್ಲಿ ಹಾರ್ದಿಕ್ ಪ್ರದರ್ಶನದಿಂದ ಗವಾಸ್ಕರ್ ತುಂಬಾ ಸಂತೋಷಪಟ್ಟಿದ್ದಾರೆ. ಅವರ ನಾಯಕತ್ವದಲ್ಲಿ, ಹಾರ್ದಿಕ್ ಮೊದಲ ಬಾರಿಗೆ ಗುಜರಾತ್ ಟೈಟಾನ್ಸ್‌ಗಾಗಿ ಐಪಿಎಲ್ 2022 ರ ಪ್ರಶಸ್ತಿಯನ್ನು ಗೆದ್ದಿದೆ. ಅದಕ್ಕಾಗಿ ಗವಾಸ್ಕರ್ ಈ ಆಟಗಾರರಿಗೆ ಹೆಚ್ಚು ರೇಟಿಂಗ್ ನೀಡಿದ್ದಾರೆ.


ಫಿಟ್ ಆಗಿದ್ದಾರೆ ಹಾರ್ದಿಕ್
 
ಟಿ20 ವಿಶ್ವಕಪ್ 2021 ರ ನಂತರ, ಹಾರ್ದಿಕ್ ಪಾಂಡ್ಯ ತಮ್ಮ ಕಳಪೆ ಫಿಟ್‌ನೆಸ್‌ನಿಂದ ತಂಡದಿಂದ ಹೊರಗುಳಿದಿದ್ದರು. ಹಾರ್ದಿಕ್ ಬೌಲಿಂಗ್ ಮಾಡಲು ಸಹ ಸಾಧ್ಯವಾಗಲಿಲ್ಲ, ಆದರೆ ಬ್ಯಾಟಿಂಗ್‌ನಲ್ಲಿ ಅವರ ಶಕ್ತಿಯೂ ಪ್ರದರ್ಶನ ಕೂಡ ನೀಡಲಿಲ್ಲ. ಆದರೆ ಈಗ ಈ ಆಟಗಾರ ಐಪಿಎಲ್ 2022ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹಾರ್ದಿಕ್ ಬ್ಯಾಟ್‌ನಿಂದ ಅದ್ಭುತ ಪ್ರದರ್ಶನ ನೀಡಿದ್ದಲ್ಲದೆ, ಬೌಲಿಂಗ್ ನಲ್ಲಿ ದೇಶದ ನಂಬರ್ ಒನ್ ಆಲ್‌ರೌಂಡರ್ ಆಗಿ ಹೊರಹೊಮ್ಮಿದ್ದಾರೆ.


ಇದನ್ನೂ ಓದಿ : Ind vs SA : ರೋಹಿತ್ ಚಾನ್ಸ್ ನೀಡದ ಈ ಸ್ಟಾರ್ ಬೌಲರ್ ಗೆ ಅವಕಾಶ ನೀಡಿದ ರಾಹುಲ್!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ