Shreyas Iyer : ಭಾರತ ಮತ್ತು ದಕ್ಷಿನ ಆಫ್ರಿಕಾ ನಡುವಿನ ಟೆಸ್ಟ್‌ ಸರಣಿಯು ಸಮಬಲದೊಂದಿಗೆ ಅಂತ್ಯಗೊಂಡಿದೆ. ಆದರೆ ಭಾರತದ ಪರ ಬ್ಯಾಟಿಂಗ್‌ನಲ್ಲಿ ಅನೇಕ ಧೋಷಗಳು ಎದ್ದು ಕಾಣಿಸಿದವು. ಬ್ಯಾಟಿಂಗ್‌ ವಿಭಾಗದಲ್ಲಿ ವಿರಾಟ್‌ ಅತ್ಯತ್ತಮ ಪ್ರದರ್ಶನ ನೀಡಿದರೆ, ಕೆಎಲ್‌ ರಾಹುಲ್‌ ಮೊದಲ ಪಂದ್ಯದಲ್ಲಿ ಶತಕ ಭಾರಿಸಿ ಮಿಂಚಿದರು.


COMMERCIAL BREAK
SCROLL TO CONTINUE READING

ಭಾರತಕ್ಕೆ ಬ್ಯಾಟಿಂಗ್‌ನಲ್ಲಿ ಬಲ ತುಂಬಲು ಐದನೇ ಶ್ರೇಯಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಅವರಿಗೆ ಅವಕಾಶ ನೀಡಲಾಗಿತ್ತು. ಬಿಸಿಸಿಐ ಅಯ್ಯರ್‌ ಮೇಲೆ ಇಟ್ಟಿದ್ದ ಭಾರಿ ನಿರಿಕ್ಷೆಯನ್ನು ಅವರು ಹುಸಿ ಮಾಡಿದರು. ಶ್ರೇಯಸ್‌ ಅಯ್ಯರ್‌ ಆಡಿದ ಎರಡು ಪಂದ್ಯಗಳಲ್ಲು ವೈಫಲ್ಯ ಕಂಡರು. 


ಇದನ್ನು ಓದಿ-ಇಂಡಿಯಾ ಮತ್ತು ಆಸಿಸ್‌ ನಡುವಿನ ಮಹಿಳೆಯರ 2ನೇ ಟಿ20 ಕ್ಷಣಗಣನೆ ಆರಂಭ! ಆಸಿಸ್‌ ಗೆ ಮಾಡು ಇಲ್ಲವೇ ಮಡಿ ಪಂದ್ಯ


ಅಯ್ಯರ್‌ ಆಡಿದ 2 ಪಂದ್ಯಗಳಿಂದ ಗಳಿಸಿದ್ದು ಕೇವಲ 41 ರನ್‌ಗಳಷ್ಟೆ. ಇದು ಭಾರತ ತಂಡದ ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಅಷ್ಟೇ ಅಲ್ಲದೇ ಶ್ರೇಯಸ್‌ ಅಯ್ಯರ್‌ ವಿರುದ್ದ ಅನೇಕ ಚರ್ಚೆಗಳು ಉಧ್ಬವಿಸಲು ಕಾರಣವಾಯಿತು. ಶ್ರೇಯಸ್‌ ಪ್ರದರರ್ಶನವನ್ನು ಎಲ್ಲರು ಟೀಕಿಸಿದರು.
 
ಭಾರತ ತಂಡದ ದಿಗ್ಗಜ ಮತ್ತು ಮಾಜಿ ಆಟಗಾರ ಸುನಿಲ್‌ ಗವಾಸ್ಕರ್‌ ಮಾತ್ರ ಶ್ರೆಯಸ್‌ ಅಯ್ಯರ್‌ ಪರವಾಗಿ ಮಾತನಾಡಿದ್ದಾರೆ. ಆಯ್ಕೆದಾರರು ಶ್ರೇಯಸ್‌ ಅಯ್ಯರ್‌ ಪರ ಬೆರಳು ತೋರಿಸಿ ಮಾತನಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಟೀಂ ಇಂಡಿಯಾ ಪರ ಶ್ರೇಯಸ್‌ ಗೆ ಇನ್ನೂ ಅವಕಾಶ ಕೊಡಬೇಕು ಎಂಬುವುದು ಸುನಿಲ್‌ ಗವಾಸ್ಕರ್‌ ಅವರ ಮನದಾಸೆಯಾಗಿದೆ.


ಇದನ್ನು ಓದಿ-ಗ್ಲೆನ್‌ ಮೆಕ್‌ ಗ್ರಾತ್‌ ಕುಟುಂಬದ ಮಹಿಳೆಯ ಹಸ್ತಲಾಘ ನಿರಾಕರಿಸಿದ "ಮೊಹಮ್ಮದ್‌ ರಿಜ್ವಾನ್‌"!


ಸುನಿಲ್ ಗವಾಸ್ಕರ್ ಮಾತನಾಡಿ "ಶ್ರೇಯಸ್ ಅಯ್ಯರ್ ಅವರು ಟೆಸ್ಟ್‌ನಲ್ಲಿ ಹೆಚ್ಚಿನ ಅವಕಾಶಗಳಿಗೆ ಅರ್ಹರು ಎಂದು ಹೇಳಿದರು, ದಕ್ಷಿಣ ಆಫ್ರಿಕಾದಲ್ಲಿ 2-ಟೆಸ್ಟ್ ಸರಣಿಯಲ್ಲಿನ ಅವರ ಪ್ರದರ್ಶನದ ಬಗ್ಗೆ  ಆಯ್ಕೆದಾರರು ಹೆಚ್ಚು ಗಮನ ಕೊಡಬಾರದು" ಎಂದು ಹೇಳಿದರು.


ದಕ್ಷಿಣ ಆಫ್ರಿಕಾ ನೆಲದಲ್ಲಿ ನಡೆದ ಟೆಸ್ಟ್‌ ಸರರಣಿಯಲ್ಲಿ ಭಾರತದ ಅನೇಕ ಬ್ಯಾಟರ್ಸ್‌ಗಳು ಪರದಾಡಿದರು, ಶುಬ್ಮನ್‌ ಗಿಲ್‌, ಜೈಸ್ವಾಲ್‌, ನಾಯಕ ರೋಹಿತ್‌ ಕೂಡ ವೈಫಲ್ಯತೆ ಅನುಭವಿಸಿದರು. ಆದರೆ ಶ್ರೇಯಸ್‌ ಪ್ರದರ್ಶನ ತೀರ ಕಳಪೆ ಮಟ್ಟದಲ್ಲಿ ಗುರುತಿಸಿಕೊಂಡಿದೆ.


ಶ್ರೇಯಸ್‌ ಆಡಿದ 2 ಪಂದ್ಯಗಳಿಂದ ಕೇವಲ 41 ರನ್‌ಗಳಿಸದರು. 13.67 ರ ಅತ್ಯಂತ ಕೆಳ ಮಟ್ಟದ ಸರಾಸರಿಯಲ್ಲಿ ಬ್ಯಾಟ್‌ ಮಾಡಿದ್ಧಾರೆ. ಮೊದಲನೇ ಪಂದ್ಯದಲ್ಲಿ 31 & 6 ರನ್‌ ಹಾಗೂ 2ನೇ ಪಂದ್ಯದಲ್ಲಿ 0 & 4 ರನ್‌ಗಳನಷ್ಟೇ ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ