ನವದೆಹಲಿ: ರಾಹುಲ್ ದ್ರಾವಿಡ್ ಈಗ ತಂಡದ ಕೋಚ್ ಆಗಿ ನೇಮಕಗೊಂಡಿರುವ ಬೆನ್ನಲ್ಲೇ ಅವರ ಮೇಲಿನ ನಿರೀಕ್ಷೆಯ ಭಾರ ಅಧಿಕಗೊಂಡಿದೆ.ಇದರ ಬೆನ್ನಲ್ಲೇ ಈಗ ಭಾರತದ ಮಾಜಿ ದಂತಕಥೆ ಸುನಿಲ್ ಗವಾಸ್ಕರ್ ಅವರು ರಾಹುಲ್ ದ್ರಾವಿಡ್ ಗೆ ಬ್ಯಾಟ್ಸ್ಮನ್ ಆಗಿ ಯಶಸ್ವಿ ಕಂಡಂತೆ ಇಲ್ಲಿಯೂ ಅದೇ ರೀತಿ ಕಾರ್ಯನಿರ್ವಹಿಸಿ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Smart Driving Licence: ಹಳೆಯ ಪರವಾನಗಿಯನ್ನು ಸ್ಮಾರ್ಟ್ ಡ್ರೈವಿಂಗ್ ಲೈಸೆನ್ಸ್ ಆಗಿ ಪರಿವರ್ತಿಸಲು ಇಲ್ಲಿದೆ 5 ಸುಲಭ ಹಂತಗಳು


ದ್ರಾವಿಡ್ ಅವರ ಅಧಿಕಾರಾವಧಿಯಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜೊತೆಗೆ ಟಿ20ಐ ಮತ್ತು ಏಕದಿನ ವಿಶ್ವಕಪ್ ಸೇರಿದಂತೆ ಮೂರು ಐಸಿಸಿ ಟೂರ್ನಿಗಳಿವೆ.ದ್ರಾವಿಡ್ ಅವರು ಭಾರತದ ಕ್ರಿಕೆಟಿಗರಾಗಿ ಉತ್ತಮ ಸಾಧನೆಯನ್ನು ಹೊಂದಿದ್ದಾರೆ,ಅವರು ದೇಶದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ.


164  ಟೆಸ್ಟ್ ಪಂದ್ಯಗಳಲ್ಲಿ 13,288 ರನ್‌ಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿರುವುದಲ್ಲದೆ ಮತ್ತು 2003 ರ ICC ವಿಶ್ವಕಪ್‌ನ ಫೈನಲ್ ತಂಡದ ಭಾಗವಾಗಿದ್ದರು.


ಇದನ್ನೂ ಓದಿ : Smart Driving Licence: ಹಳೆಯ ಪರವಾನಗಿಯನ್ನು ಸ್ಮಾರ್ಟ್ ಡ್ರೈವಿಂಗ್ ಲೈಸೆನ್ಸ್ ಆಗಿ ಪರಿವರ್ತಿಸಲು ಇಲ್ಲಿದೆ 5 ಸುಲಭ ಹಂತಗಳು


ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕವಾಗುವುದಕ್ಕೂ ಮುಂಚೆ ಅಂಡರ್-19 ಹಾಗೂ ಭಾರತ-ಎ ತಂಡಗಳಿಗೆ ಕೋಚ್ ನೀಡುತ್ತಿದ್ದರು,ಆ ಸಂದರ್ಭದಲ್ಲಿ ಹಲವು ಹೊಸ ಪೀಳಿಗೆಯ ಆಟಗಾರರನ್ನು ಹುಟ್ಟು ಹಾಕಿದ ಕೀರ್ತಿ ರಾಹುಲ್ ದ್ರಾವಿಡ್ ಅವರಿಗಿದೆ.ಹೀಗಾಗಿ ಈಗ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.ಈ ಹಿನ್ನಲೆಯಲ್ಲಿ ಈಗ ಮಾತನಾಡಿರುವ ಗವಾಸ್ಕರ್ 'ರಾಹುಲ್ ದ್ರಾವಿಡ್ ಭಾರತ ತಂಡದ ಕ್ರಿಸ್ ನಲ್ಲಿ ಇದ್ದಾಗ ತಂಡವು ಸುರಕ್ಷಿತ ಎಂದು ಭಾವಿಸಲಾಗುತ್ತಿತ್ತು, ಈಗ ಅವರು ಅದೇ ರೀತಿ ಕೋಚ್ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂದು ದಿ ಸ್ಟಾರ್ ಸ್ಪೋರ್ಟ್ಸ್ ಶೋ 'ಫಾಲೋ ದಿ ಬ್ಲೂಸ್' ನಲ್ಲಿ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.