Sunrisers Hyderabad: ಐಪಿಎಲ್‌ 2025 ಮೆಗಾ ಹರಾಜಿನ ಮೊದಲು, ಅನೇಕ ಸ್ಟಾರ್ ಆಟಗಾರರ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಸಮಯದಲ್ಲಿ, ಐಪಿಎಲ್ 2024 ರ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸ್ ತಮ್ಮ ಸ್ಟಾರ್ ಬೌಲರ್ ಉಮ್ರಾನ್ ಮಲಿಕ್ ಅನ್ನು ಮುಂದಿನ ಋತುವಿನ ಮೊದಲು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ವರದಿಗಳು ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಅನುಶ್ರೀಗೆ ನಂಬರ್ ಕೊಟ್ಟು ನೈಟ್ ಮೆಸೇಜ್ ಮಾಡಿ ಅಂದಿದ್ರಂತೆ ಅಚ್ಯುತ್ ಕುಮಾರ್!? ನಿರೂಪಕಿ ಕೈಗೆ ತಗ್ಲಾಕೊಂಡ ಕನ್ನಡದ ಪ್ರಖ್ಯಾತ ನಟ!


ಉಮ್ರಾನ್ 2021 ರಲ್ಲಿ ಸನ್‌ ರೈಸರ್ಸ್‌ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ವೇಗದ ಮೂಲಕವೇ ಎಲ್ಲರನ್ನೂ ಆಕರ್ಷಿಸಿದ್ದರು. ಆದರೆ ಕ್ರಮೇಣ ಉಮ್ರಾನ್ ಮಲಿಕ್ ಅವರ ಪ್ರದರ್ಶನ ಕಡಿಮೆಯಾಯಿತು. ಇದರೊಂದಿಗೆ, ಈ 'ಜಮ್ಮು ಎಕ್ಸ್‌ಪ್ರೆಸ್' ವೇಗದ ಬೌಲರ್ ಐಪಿಎಲ್ 2024 ರಲ್ಲಿ ಕೇವಲ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಈ ಕಾರಣದಿಂದ ಅವರನ್ನು ತಂಡದಿಂದ ರಿಲೀಸ್‌ ಮಾಡಲು ಯೋಜನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. 


ಮತ್ತೊಂದು ಮಾಹಿತಿ ಪ್ರಕಾರ, ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಉಮ್ರಾನ್ ಮಲಿಕ್ ಅವರನ್ನು ಖರೀದಿಸಲು ಹಲವು ತಂಡಗಳು ಆಸಕ್ತಿ ತೋರುತ್ತಿವೆ ಎಂದು ರಾಷ್ಟ್ರೀಯ ಕ್ರಿಕೆಟ್ ಮಾಧ್ಯಮಗಳು ವರದಿ ಮಾಡಿವೆ. 


ಇದನ್ನೂ ಓದಿ:  ಬೊಜ್ಜು ತುಂಬಿದ ಸೊಂಟ ಸ್ಲಿಮ್‌ ಆಗಬೇಕೆ? ಒಂದು ಚಮಚ ತುಪ್ಪವನ್ನು ಇದರಲ್ಲಿ ಬೆರೆಸಿ ಸೇವಿಸಿ... 5 ದಿನದಲ್ಲಿ ಬಳುಕುವ ಬಳ್ಳಿಯಂತಾಗೋದು ಗ್ಯಾರಂಟಿ


ಉಮ್ರಾನ್ ಮಲಿಕ್ ಅವರ ಐಪಿಎಲ್ ವೃತ್ತಿಜೀವನವನ್ನು ನೋಡುವುದಾದರೆ, 2021 ರಲ್ಲಿ ಎಸ್‌ಆರ್‌ಹೆಚ್‌ಗೆ ಪಾದಾರ್ಪಣೆ ಮಾಡಿದ ಈ ಬಲಗೈ ಸೀಮರ್ ಆ ಸೀಸನ್‌ನಲ್ಲಿ ಮೂರು ಪಂದ್ಯಗಳನ್ನು ಆಡಿ ಎರಡು ವಿಕೆಟ್ ಪಡೆದರು. ಉಮ್ರಾನ್ ಮಲಿಕ್‌ʼಗೆ 2022 ಅತ್ಯುತ್ತಮ IPL ಋತುವಾಗಿದೆ. 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದರು. ಅದರ ನಂತರ, 2023 ರ ಐಪಿಎಲ್ ಸೀಸನ್‌ನಿಂದ ಮಲಿಕ್ ಕೊಂಚ ಕುಗ್ಗಿದರು. ಕಳೆದ ಎರಡು ಸೀಸನ್‌ಗಳಲ್ಲಿ ಕೇವಲ 9 ಪಂದ್ಯಗಳನ್ನು ಆಡಿರುವ ಅವರನ್ನು ಇದೀಗ ರಿಲೀಸ್‌ ಮಾಡುವ ಸಾಧ್ಯತೆ ಇದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ