IPL 2023 Auction: IPL 2023 ಹರಾಜು ಡಿಸೆಂಬರ್ 23 ರಂದು ಆಯೋಜಿಸಲಾಗಿದೆ. ಮಿಸ್ಟರ್ ಐಪಿಎಲ್ ಎಂದು ಕರೆಯಲ್ಪಡುವ ಸುರೇಶ್ ರೈನಾ ಅವರು ಸದ್ಯ ಐಪಿಎಲ್‌ನಿಂದ ನಿವೃತ್ತರಾಗಿದ್ದಾರೆ. ಆದರೆ 2023 ರ ಐಪಿಎಲ್ ಹರಾಜಿನ ಸಮಯದಲ್ಲಿ ಅವರು ಜಿಯೋ ಸಿನಿಮಾ ತಜ್ಞರ ಸಮಿತಿಯ ಭಾಗವಾಗಿರುತ್ತಾರೆ. ಇದೀಗ ಮಿನಿ ಹರಾಜಿಗೂ ಮುನ್ನವೇ 5 ಆಟಗಾರರ ಹೆಸರನ್ನು ಹೇಳಿದ್ದು, ಅವರ ಮೇಲೆ ಸಾಕಷ್ಟು ಹಣದ ಸುರಿಮಳೆಯಾಗಬಹುದು ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Virat Kohli: “ಫಾರ್ಮ್ಗೆ ಬರಲು ವಿರಾಟ್ ಈ ಒಂದು ಕೆಲಸ ಮಾಡ್ತಾರೆ”: ಬ್ಯಾಟಿಂಗ್ ಕೋಚ್ ನಿಂದ ರಹಸ್ಯ ಬಹಿರಂಗ


ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಜಿಯೋ ಸಿನಿಮಾದಲ್ಲಿ ಮಾತನಾಡಿದ್ದು, “ಎನ್ ಜಗದೀಶನ್ ಅವರು ಉತ್ತಮ ಕ್ರಿಕೆಟ್ ಮೆದುಳನ್ನು ಹೊಂದಿದ್ದಾರೆ. ಅವರು ತುಂಬಾ ಆಳವಾಗಿ ಬ್ಯಾಟ್ ಮಾಡುತ್ತಾರೆ. ಅವರು ತುಂಬಾ ಸ್ಮಾರ್ಟ್, ಅತ್ಯುತ್ತಮ ಬ್ಯಾಟ್ಸ್‌ಮನ್. ಅವರು ತಮಿಳುನಾಡಿಗೆ ನಿಜವಾಗಿಯೂ ಒಳ್ಳೆಯದನ್ನು ಮಾಡಿದ್ದಾರೆ. ಅವರ ಬಗ್ಗೆ ಜಾಗರೂಕರಾಗಿರಿ. ಇನ್ನು ಜಯದೇವ್ ಉನದ್ಕತ್ ಅವರು ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದಿದ್ದಾರೆ ಮತ್ತು ಐಪಿಎಲ್‌ನಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ” ಎಂದಿದ್ದಾರೆ.


ವಿಜಯ್ ಹಜಾರೆ ಟ್ರೋಫಿಯಲ್ಲಿ ವೇಗಿ ಉನದ್ಕತ್ 10 ಪಂದ್ಯಗಳಲ್ಲಿ 3.33 ಎಕಾನಮಿ ದರದಲ್ಲಿ 19 ವಿಕೆಟ್ ಪಡೆದಿದ್ದಾರೆ. ಇನ್ನೊಂದೆಡೆ ಜಗದೀಶನ್ ತಮಿಳುನಾಡು ಪರ ಐದು ಸತತ ಶತಕಗಳನ್ನು ಬಾರಿಸಿದ್ದಾರೆ. ಕೊನೆಯದು ಅರುಣಾಚಲ ಪ್ರದೇಶ ವಿರುದ್ಧ ದಾಖಲೆಯ 277 ರನ್‌ಗಳನ್ನು ಒಳಗೊಂಡಿತ್ತು.


“ಇವರ ಜೊತೆಗೆ ಇಂಗ್ಲೆಂಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಸ್ಯಾಮ್ ಕರ್ರನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಬೆನ್ ಸ್ಟೋಕ್ಸ್ ತಮ್ಮ ಪ್ರದರ್ಶನದಿಂದ ಇಂಗ್ಲೆಂಡ್ ತಂಡದ ನಾಯಕತ್ವವನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆ. ಅಂತಹ ಆಲ್‌ರೌಂಡರ್ ಯಾವಾಗ ಬೇಕಾದರೂ ಆಟವನ್ನು ಬದಲಾಯಿಸಬಹುದು. ಇಂಗ್ಲೆಂಡ್ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲುವಲ್ಲಿ ಸ್ಯಾಮ್ ಕರ್ರನ್ ಪ್ರಮುಖ ಪಾತ್ರ ವಹಿಸಿದ್ದರು. 13 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು” ಎಂದು ಹೇಳಿದ್ದಾರೆ.


ಐರ್ಲೆಂಡ್‌ನ ಜೋಶುವಾ ಲಿಟಲ್ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇಡೀ ಟೂರ್ನಿಯಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರ ಬಗ್ಗೆ ಕೂಡ ಮಾತನಾಡಿದ ಸುರೇಶ್ ರೈನಾ, 'ಐರ್ಲೆಂಡ್‌ನ ಜೋಶುವಾ ಲಿಟಲ್ ಅವರನ್ನು ನೋಡಿ, ಅವರು ಈಗಷ್ಟೇ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಾನು ಅವನೊಂದಿಗೆ ಆಡಿದ್ದೇನೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: IND vs BAN : ಟೀಂ ಇಂಡಿಯಾಗೆ ಬಿಗ್ ಶಾಕ್ : ಎರಡನೇ ಟೆಸ್ಟ್ ಆಡೋದಿಲ್ಲ ಕೆಎಲ್ ರಾಹುಲ್!


ಆಟಗಾರರು ಐಪಿಎಲ್ 2023ರ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಆಗಬಹುದು ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.