ಬೆಂಗಳೂರು : IPL 2022 : ಯಾವ ತಂಡ  ಐಪಿಎಲ್ 2022 ಟ್ರೋಫಿಯನ್ನು  ಗೆಲ್ಲಬೇಕು ಎಂದು  ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ, ತಮ್ಮ ಮನದಾಸೆಯನ್ನು ಎಲ್ಲರ ಮುಂದಿಟ್ಟಿದ್ದಾರೆ. ಸುರೇಶ್ ರೈನಾಗೆ ಈ ಬಾರಿ ಐಪಿಎಲ್ 2022 ರಲ್ಲಿ ಆಡುವ ಅವಕಾಶ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಈ ಸೀಸನ್ ನಲ್ಲಿ  ಅವರು ಕಾಮೆಂಟರಿ ಮಾಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಐಪಿಎಲ್‌ನಲ್ಲಿ ಸುರೇಶ್ ರೈನಾ ಅವರ ಅತ್ಯುತ್ತಮ ದಾಖಲೆ  :
ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸುರೇಶ್ ರೈನಾ ಐದನೇ ಸ್ಥಾನದಲ್ಲಿದ್ದಾರೆ. ಸುರೇಶ್ ರೈನಾ ಐಪಿಎಲ್‌ನಲ್ಲಿ 5,528 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಸುರೇಶ್ ರೈನಾ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 39 ಅರ್ಧಶತಕ ಮತ್ತು 1 ಶತಕ ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸುರೇಶ್ ರೈನಾ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ.


ಇದನ್ನೂ ಓದಿ : ಐಪಿಎಲ್ 2022: ಕ್ರಿಕೆಟ್ ನಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಾರೆಯೇ ಕೊಹ್ಲಿ?


ಸುರೇಶ್ ರೈನಾ ಅವರನ್ನು ಮಿಸ್ಟರ್ ಐಪಿಎಲ್ ಎಂದೂ ಕರೆಯುತ್ತಾರೆ. ಇಷ್ಟಿದ್ದರೂ ಈ ಬಾರಿ ಅವರನ್ನು ಯಾವುದೇ ತಂಡ ಖರೀದಿಸಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಕೂಡ  ಸುರೇಶ್ ರೈನಾ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲಿಲ್ಲ. ಈ ಹಿಂದೆ ಸುರೇಶ್ ರೈನಾ  ಚೆನ್ನೈ ಸೂಪರ್ ಕಿಂಗ್ಸ್  ಪರ ಆಡಿದ್ದರು. 


ಈ ತಂಡವೇ ಆಗಲಿ  ಐಪಿಎಲ್ 2022 ರ ಚಾಂಪಿಯನ್ : 
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಇ ಕಾರಣದಿಂದಾಗಿ ಪ್ಲೇಆಫ್‌ ರೇಸ್‌ನಿಂದ ತಂಡ ಹೊರಗುಳಿದಿದೆ.  ಇದೀಗ ಸುರೇಶ್ ರೈನಾ ಆರ್‌ಸಿಬಿ ಈ ವರ್ಷದ ಐಪಿಎಲ್ ಟ್ರೋಫಿ ಗೆಲ್ಲಬೇಕೆಂದು  ತಮ್ಮ ಮನದಾಸೆ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ : IPL 2022: ಮುಂಬೈ ಗೆದ್ದರೆ ಆರ್‌ಸಿಬಿಗೆ ಲಾಭ: ಈ ಲೆಕ್ಕಾಚಾರ ಹೇಗೆ ಗೊತ್ತಾ? ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌


ಇತಿಹಾಸವನ್ನು ಬದಲಾಯಿಸುವ ಅವಕಾಶ :
ಈ ವರ್ಷ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲಬೇಕು ಎಂದು ನಾನು ಬಯಸುತ್ತೇನೆ ಎಂದು ಸುರೇಶ್ ರೈನಾ ಹೇಳಿದ್ದಾರೆ.  ಐಪಿಎಲ್ 2022 ಪ್ರಶಸ್ತಿಯನ್ನು ಆರ್‌ಸಿಬಿ  ವಿರಾಟ್ ಕೊಹ್ಲಿಗಾಗಿ ಗೆಲ್ಲಬೇಕು ಎಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಲ್ಲಿಯವರೆಗೆ ಐಪಿಎಲ್ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ   ಟ್ರೋಫಿ ಗೆಲ್ಲುವ ಮೂಲಕ ಇತಿಹಾಸ ರಚಿಸುವ ಅವಕಾಶ ಕೂಡಾ ತಂಡಕ್ಕಿದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.