Surya Kumar Yadav: ಯುವಿ ದಾಖಲೆ ಮುರಿದ ಸೂರ್ಯ ಕುಮಾರ್: ’ಇಂಡಿಯಾದ ಮಿಸ್ಟರ್ 360’ಯಿಂದ ಹೊಸ ವಿಶ್ವ ದಾಖಲೆ
ಕಳೆದ ಮೂರು ಮ್ಯಾಚ್ ಗಳಲ್ಲಿ ಅಬ್ಬರದ ಪ್ರದರ್ಶನ ತೋರಿದ್ದ ಯಾದವ್, ಇಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ದಿಗ್ಗಜ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಮೂಲಕ ಹೊಸ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಇಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಬಿರುಸಿನ ಅರ್ಧಶತಕ ಬಾರಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಕೇವಲ 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಹಾಯದಿಂದ 69 ರನ್ ಬಾರಿಸಿದ್ದಾರೆ. ಈ ಸಮಯದಲ್ಲಿ ಅವರ ಸ್ಟ್ರೈಕ್ ರೇಟ್ 191.66 ಆಗಿತ್ತು.
ಇದನ್ನೂ ಓದಿ: India vs Australia 3rd T20I: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ: ಕೊಹ್ಲಿ, ಯಾದವ್ ಅಬ್ಬರಕ್ಕೆ ಆಸೀಸ್ ತತ್ತರ
ಕಳೆದ ಮೂರು ಮ್ಯಾಚ್ ಗಳಲ್ಲಿ ಅಬ್ಬರದ ಪ್ರದರ್ಶನ ತೋರಿದ್ದ ಯಾದವ್, ಇಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾದ ದಿಗ್ಗಜ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಮೂಲಕ ಹೊಸ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಈ ಇನ್ನಿಂಗ್ಸ್‌ನಲ್ಲಿ ಐದು ಸಿಕ್ಸರ್‌ಗಳೊಂದಿಗೆ, ಟಿ20 ಇಂಟರ್‌ನ್ಯಾಶನಲ್‌ಗಳಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ಹಿಟ್‌ಗಳನ್ನು ಸಿಡಿಸಿದ ಪರಾಕ್ರಮಿಗಳ ಪಟ್ಟಿಯಲ್ಲಿ ಸೂರ್ಯಕುಮಾರ್ ಮೊದಲ ಸ್ಥಾನವನ್ನು ತಲುಪಿದ್ದಾರೆ. ಈ ವರ್ಷದಲ್ಲಿ ಸೂರ್ಯಕುಮಾರ್ ಯಾದವ್ 42 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಅಷ್ಟೇ ಅಲ್ಲದೆ, ಯಾದವ್ 2021 ರಲ್ಲಿ ಟಿ 20 ಅಂತರರಾಷ್ಟ್ರೀಯ ಪಂದ್ಯದಲ್ಲಿ 42 ಸಿಕ್ಸರ್‌ಗಳನ್ನು ಬಾರಿಸಿದ್ದ ಪಾಕಿಸ್ತಾನದ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಅವರ ದಾಖಲೆಯನ್ನೂ ಸಹ ಮುರಿದಿದ್ದಾರೆ.
ಸೂರ್ಯಕುಮಾರ್ ಅವರು ಈ ವರ್ಷ ನಾಲ್ಕನೇ ಬಾರಿಗೆ ಐವತ್ತಕ್ಕೂ ಹೆಚ್ಚು ಪ್ಲಸ್ ರನ್ ಬಾರಿಸಿದ್ದಾರೆ. ಈ ಮೂಲಕ 2009ರಲ್ಲಿ ಮೂರು 50 ಪ್ಲಸ್ ಸ್ಕೋರ್ ಗಳಿಸಿದ್ದ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸೂರ್ಯಕುಮಾರ್ ಮುರಿದಿದ್ದಾರೆ.
ಇದನ್ನೂ ಓದಿ: IND-W vs ENG-W 3rd ODI: ಜೂಲನ್ ಗೋಸ್ವಾಮಿಗೆ ಪರಿಪೂರ್ಣ ವಿದಾಯ: ಇಂಗ್ಲೆಂಡ್ ವಿರುದ್ಧ ಗೆದ್ದ ಟೀಂ ಇಂಡಿಯಾ
ಇನ್ನು ಕಳೆದ ಕೆಲ ಪ್ರಮುಖ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಸಿಡಿಸಿದ್ದ 50+ ಸ್ಕೋರ್ ಗಳ ಸ್ಟ್ರೈಕ್ ರೇಟ್ ಹೀಗಿದೆ. 1) 183.87, 2) 147.05, 3) 155.00, 4) 209.67, 5) 212.72, 6) 172.72, 7) 261.53, 8) 191.66
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.