IND vs ENG T20 World Cup: T20 ವಿಶ್ವಕಪ್ 2022 ರಲ್ಲಿ ಭಾರತದ ಯಶಸ್ಸಿಗೆ ಮುಖ್ಯ ಕಾರಣ ಯಾರು ಎಂದರೆ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಎನ್ನಬಹುದು. ಕೊಹ್ಲಿ ಇನ್ನಿಂಗ್ಸ್ ಹಿಡಿದಿದ್ದರೂ, ಸೂರ್ಯ ಕುಮಾರ್ ಅಬ್ಬರದಿಂದ ಭಾರತ ಕೊನೆಯ ಓವರ್‌ಗಳಲ್ಲಿ ಭಾರಿ ಸ್ಕೋರ್ ಮಾಡುತ್ತಿದೆ. ಎಂತಹ ಚೆಂಡಿದ್ದರೂ ಬೌಲರ್‌ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಸೂರ್ಯ ಅವರ ವಿಚಿತ್ರ ಹೊಡೆತಗಳಿಗೆ ಅಭಿಮಾನಿಗಳು ಮಾತ್ರವಲ್ಲದೆ ಆಟಗಾರರು, ಮಾಜಿ ಆಟಗಾರರು ಕೂಡ ಬೆಚ್ಚಿ ಬೀಳುತ್ತಿದ್ದಾರೆ. ಕ್ರೀಸ್ ನಾದ್ಯಂತ ಶಾಟ್ ಹೊಡೆಯುವ ಮೂಲಕ ಸೂರ್ಯಕುಮಾರ್ 'ಮಿಸ್ಟರ್ 360' ಎಂಬ ಬಿರುದು ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ‘ICC Men's Player of the Month’ ಎನಿಸಿಕೊಂಡ ಕಿಂಗ್ ಕೊಹ್ಲಿ: ಮೊದಲ ಬಾರಿಗೆ ಈ ಪ್ರಶಸ್ತಿ ಪಡೆದ ವಿರಾಟ್


ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಆಡಿದ ಇನ್ನಿಂಗ್ಸ್ 2022 ರ T20 ವಿಶ್ವಕಪ್‌ನ ಪ್ರಮುಖ ಅಂಶವಾಯಿತು. ಸೂರ್ಯ ಆಡಿದ ಕೆಲವು ಶಾಟ್‌ಗಳು ಕ್ರಿಕೆಟ್‌ನಲ್ಲೂ ಹೊಚ್ಚಹೊಸ ಎನಿಸಿದವು. ಜಿಂಬಾಬ್ವೆ ವಿರುದ್ಧದ ಇನ್ನಿಂಗ್ಸ್ ಅನ್ನು ಎಲ್ಲರೂ ಹೊಗಳುತ್ತಿದ್ದಾರೆ. ಸೂಪರ್ 12 ರಲ್ಲಿ ಸೂರ್ಯ ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ 225 ರನ್ ಗಳಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲು ಭಾರತ ಸಜ್ಜಾಗಿದೆ. ಸೆಮಿಫೈನಲ್‌ನಲ್ಲೂ ಸೂರ್ಯ ಮಿಂಚಬೇಕು ಎಂದು ಭಾರತೀಯ ಆಡಳಿತ ಮಂಡಳಿ ಬಯಸಿದೆ. 


ಟೀಂ ಇಂಡಿಯಾ ವಿರುದ್ಧದ ಸೆಮಿಸ್ ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಇಂಗ್ಲೆಂಡ್ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್, “ಟಿ20 ವಿಶ್ವಕಪ್ 2022ರ ಪ್ರಶಸ್ತಿ ಗೆಲ್ಲಬೇಕಾದರೆ ಇನ್ನೆರಡು ಪಂದ್ಯಗಳನ್ನು ಗೆಲ್ಲಬೇಕು. ಕಪ್ ಗೆಲ್ಲುವ ವಿಶ್ವಾಸವಿದೆ. ಗುರುವಾರ ಬಲಿಷ್ಠ ಭಾರತ ತಂಡದ ವಿರುದ್ಧ ಸೆಮಿಫೈನಲ್ ಪಂದ್ಯ ನಡೆಯಲಿದೆ. ನಮ್ಮ ಆಟಗಾರರು ಈ ಪಂದ್ಯವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಭಾರತ ತಂಡದಲ್ಲಿರುವ ಆಟಗಾರರ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಅದೇ ಸಮಯದಲ್ಲಿ ನಮ್ಮ ಆಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳಬೇಕು” ಎಂದರು. 


ಇದನ್ನೂ ಓದಿ: ಅತ್ಯಾಚಾರ ಆರೋಪ: ಖ್ಯಾತ ಕ್ರಿಕೆಟರ್ ಅಮಾನತು ಮಾಡಿದ‌ ಕ್ರಿಕೆಟ್ ಮಂಡಳಿ..!


ಸೂರ್ಯಕುಮಾರ್ ಯಾದವ್ ಅದ್ಭುತ. ಅವರು ಇದೀಗ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಸೂರ್ಯ ಅವರ ಕೆಲವು ಶಾಟ್‌ಗಳನ್ನು ನೋಡಿದರೆ ಭಯವಾಗುತ್ತದೆ. ಆದರೆ ಸೆಮಿಸ್ ಪಂದ್ಯದಲ್ಲಿ ಅವರನ್ನು ನಿಲ್ಲಿಸಬೇಕಿದೆ. ಅದಕ್ಕಾಗಿ ವಿಶೇಷ ತಂತ್ರಗಳನ್ನು ರೂಪಿಸಬೇಕು. ರೋಹಿತ್ ಶರ್ಮಾ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಆತ ವಿಶ್ವ ದರ್ಜೆಯ ಆಟಗಾರ. ಅವರನ್ನು ತುಂಬಾ ಹಗುರವಾಗಿ ಪರಿಗಣಿಸಬೇಡಿ” ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.