ICC Mens T20I Rankings: ವೆಸ್ಟ್ ಇಂಡೀಸ್ ವಿರುದ್ಧದ ಇತ್ತೀಚಿನ ಟಿ20 ಸರಣಿಯಲ್ಲಿ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಒಂದು ಪಂದ್ಯವನ್ನು ಹೊರತುಪಡಿಸಿ ಬೇರಾವುದೇ ಪಂದ್ಯದಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಿರಲಿಲ್ಲ. ಗಿಲ್ 4 ಪಂದ್ಯಗಳಲ್ಲಿ ಒಟ್ಟು 25 ರನ್ ಗಳಿಸಿದರೆ, ಒಂದು ಪಂದ್ಯದಲ್ಲಿ 77 ರನ್ ಗಳಿಸಿದ್ದರು. ಇದರ ಹೊರತಾಗಿಯೂ ಅವರಿಗೆ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯಿಂದ ದೊಡ್ಡ ಉಡುಗೊರೆ ಸಿಕ್ಕಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಒಬ್ಬ ಕೀಪರ್, ಮತ್ತೊಬ್ಬ ಓಪನರ್, ಇಬ್ಬರು ಬೌಲರ್… ನಿವೃತ್ತಿಯತ್ತ ಮುಖ ಮಾಡಿದ್ರು ಭಾರತದ ಈ 4 ಸ್ಟಾರ್ ಕ್ರಿಕೆಟರ್ಸ್!


ಬುಧವಾರ ಬಿಡುಗಡೆಯಾದ ಐಸಿಸಿ ಟಿ20 ಅಂತಾರಾಷ್ಟ್ರೀಯ ಶ್ರೇಯಾಂಕದಲ್ಲಿ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರು ಬ್ಯಾಟ್ಸ್‌’ಮನ್‌’ಗಳ ಪಟ್ಟಿಯಲ್ಲಿ ವೃತ್ತಿಜೀವನದ ಅತ್ಯುತ್ತಮ 25 ನೇ ಸ್ಥಾನಕ್ಕೆ ಏರಿದ್ದಾರೆ. ಅವರ ಸಹ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಶ್ರೇಯಾಂಕದಲ್ಲಿ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ 77 ಮತ್ತು 9 ರನ್‌’ಗಳ ಇನ್ನಿಂಗ್ಸ್‌ ಆಡಿದ ಗಿಲ್ ಇದೀಗ ವೈಫಲ್ಯದ ಹೊರತಾಗಿಯೂ 25ನೇ ಸ್ಥಾನಕ್ಕೇರಿದ್ದಾರೆ.


ಯಶಸ್ವಿ ಜೈಸ್ವಾಲ್ 88ನೇ ಸ್ಥಾನ:


ಈ ವರ್ಷದ ಆರಂಭದಲ್ಲಿ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 126 ರನ್ ಗಳಿಸಿದ ನಂತರ ಈ ಏರಿಕೆ ಕಂಡುಬಂದಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ನಾಲ್ಕನೇ ಪಂದ್ಯದಲ್ಲಿ, ಗಿಲ್ ಮತ್ತು ಜೈಸ್ವಾಲ್ ಮೊದಲ ವಿಕೆಟ್‌’ಗೆ 165 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು, ಇದು ಭಾರತದ ಜಂಟಿ ಅತ್ಯುತ್ತಮ ಮೊದಲ ವಿಕೆಟ್ ಜೊತೆಯಾಟವಾಗಿದೆ. ಈ ಬಳಿಕ ಯಶಸ್ವಿ ಜೈಸ್ವಾಲ್ 88ನೇ ಸ್ಥಾನದಲ್ಲಿದ್ದಾರೆ.


ಕುಲದೀಪ್ ಯಾದವ್ 28ನೇ ಸ್ಥಾನ:


ಸ್ಪಿನ್ನರ್ ಕುಲದೀಪ್ ಯಾದವ್ ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ 23 ಸ್ಥಾನ ಮೇಲೇರಿ 28ನೇ ಸ್ಥಾನಕ್ಕೆ ತಲುಪಿದ್ದಾರೆ. ಭಾರತ ವಿರುದ್ಧದ ಸರಣಿಯನ್ನು 3-2ರಲ್ಲಿ ಗೆದ್ದಿರುವ ವೆಸ್ಟ್ ಇಂಡೀಸ್ ಆಟಗಾರರ ರ್ಯಾಂಕಿಂಗ್ ಕೂಡ ಸುಧಾರಿಸಿದೆ. ಕಳೆದ ಪಂದ್ಯದಲ್ಲಿ 55 ಎಸೆತಗಳಲ್ಲಿ ಅಜೇಯ 85 ರನ್ ಗಳಿಸಿದ್ದ ಬ್ರಾಂಡನ್ ಕಿಂಗ್ ಐದು ಸ್ಥಾನ ಮೇಲೇರಿ 13ನೇ ಸ್ಥಾನಕ್ಕೆ ತಲುಪಿದ್ದಾರೆ. ಕೈಲ್ ಮೇಯರ್ಸ್ ಎರಡು ಸ್ಥಾನ ಮೇಲೇರಿ 45ನೇ ಸ್ಥಾನಕ್ಕೆ ತಲುಪಿದ್ದು, ಶಿಮ್ರಾನ್ ಹೆಟ್ಮೆಯರ್ 16 ಸ್ಥಾನ ಮೇಲೇರಿ 85ನೇ ಸ್ಥಾನದಲ್ಲಿದ್ದಾರೆ.


ವಿಂಡೀಸ್ ಆಟಗಾರರು ತಮ್ಮ ಉತ್ತಮ ಪ್ರದರ್ಶನಕ್ಕಾಗಿ ಬಹುಮಾನ ಪಡೆದಿದ್ದಾರೆ. ಬೌಲರ್‌ಗಳ ಪೈಕಿ ಅಕಿಲ್ ಹುಸೇನ್ 11ನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: ಟಿ20 ವಿಶ್ವಕಪ್ 2024ರಲ್ಲಿ ವಿರಾಟ್ ಕೊಹ್ಲಿಗೆ ಸಿಗುತ್ತಾ ಸ್ಥಾನ? ಮಾಜಿ ಕೋಚ್ ಸಂಜಯ್ ಬಂಗಾರ್ ಹೇಳಿದ್ದೇನು?


ಸೂರ್ಯಕುಮಾರ್‌ ಯಾದವ್‌’ಗೆ ಅಗ್ರ ಸ್ಥಾನ:


ಟೀಂ ಇಂಡಿಯಾದ ಮಿಸ್ಟರ್‌ 360 ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ ಟಿ20 ಬ್ಯಾಟಿಂಗ್‌ ಶ್ರೇಯಾಂಕಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ವೆಸ್ಟ್ ಇಂಡೀಸ್‌ ವಿರುದ್ದದ ಟಿ20 ಸರಣಿಯಲ್ಲಿ ಸೂರ್ಯಕುಮಾರ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ಮಾಡಿದ್ದರು. ಆ ಮೂಲಕ 907 ಅಂಕಗಳನ್ನು ಕಲೆ ಹಾಕಿದ್ದರು. ಹೀಗಾಗಿ ಅಗ್ರ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ