India vs South Africa 2nd T20: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ (IND vs SA 2nd T20) ಭಾರತ ತಂಡದ ನಾಯಕ, ಅದ್ಭುತ ಬ್ಯಾಟ್ಸ್‌’ಮನ್ ಸೂರ್ಯಕುಮಾರ್ ಯಾದವ್ ಸಂಚಲನ ಮೂಡಿಸಿದ್ದಾರೆ. T20 ಸ್ವರೂಪದಲ್ಲಿ ಭಾರತ ಪರ ವೇಗವಾಗಿ 2000 ರನ್ ಗಳಿಸಿದ ಜಂಟಿ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಪ್ಪಿತಪ್ಪಿಯೂ ಈ 2 ದಿನ ಮನೆಯಲ್ಲಿ ಅಗರಬತ್ತಿ ಹಚ್ಚಬೇಡಿ… ತೀರಾ ಬಡತನ ಕಾಡುತ್ತೆ!


ಸರಣಿಯ ಈ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಏಡೆನ್ ಮರ್ಕರಮ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಟೀಂ ಇಂಡಿಯಾದ 2 ವಿಕೆಟ್‌’ಗಳು ಕೇವಲ 6 ರನ್‌’ಗಳಿಗೆ ಪತನಗೊಂಡವು. 3ನೇ ಕ್ರಮಾಂಕಕ್ಕೆ ಇಳಿದ ಸೂರ್ಯಕುಮಾರ್, ನಂತರ ತಿಲಕ್ ವರ್ಮಾ (29) ಅವರೊಂದಿಗೆ ಇನಿಂಗ್ಸ್ ಮುನ್ನಡೆಸಿದರು. ಇವರಿಬ್ಬರು ಮೂರನೇ ವಿಕೆಟ್‌’ಗೆ 49 ರನ್ ಸೇರಿಸಿದರು. ಇದಾದ ನಂತರ ಸೂರ್ಯ ರಿಂಕು ಸಿಂಗ್ ಜೊತೆ 70 ರನ್ ಜೊತೆಯಾಟ ನಡೆಸಿದರು. ಸೂರ್ಯಕುಮಾರ್ ವೈಯಕ್ತಿಕ ಸ್ಕೋರ್ 56. ಇನ್ನು 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಸಿದರು.


ಕಡಿಮೆ ಇನ್ನಿಂಗ್ಸ್‌’ನಲ್ಲಿ 2000 ಟಿ20 ರನ್:


ಪವರ್ ಫುಲ್ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ ವಿಶೇಷ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌’ಗಳಲ್ಲಿ 2000 ರನ್ ಗಳಿಸಿದ ಭಾರತದ ಎರಡನೇ ಆಟಗಾರ ಮತ್ತು ಒಟ್ಟಾರೆ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ತಲಾ 52 ಇನ್ನಿಂಗ್ಸ್‌’ಗಳಲ್ಲಿ 2000 T20 ಅಂತರರಾಷ್ಟ್ರೀಯ ರನ್‌’ಗಳನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ತಲಾ 56 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಇವರ ನಂತರ 58 ಇನ್ನಿಂಗ್ಸ್‌’ಗಳಲ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ 2000 ರನ್ ಪೂರೈಸಿದ ಭಾರತೀಯ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಹೆಸರಿದೆ.


ಇದನ್ನೂ ಓದಿ: 13 ರನ್, 7 ವಿಕೆಟ್ ಉಡೀಸ್: 18ರ ಹರೆಯದ ಭಾರತದ ಯುವವೇಗಿ ಮೋಡಿಗೆ ವಿಶ್ವದಾಖಲೆ ಸೃಷ್ಟಿ


ಟಿ20ಯಲ್ಲಿ ಭಾರತ ಪರ ಅತಿ ಹೆಚ್ಚು ರನ್:


ಇದರೊಂದಿಗೆ ಟಿ20ಯಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 4008 ರನ್ ಗಳಿಸಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ (3853 ರನ್) 2ನೇ ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ 2256 ರನ್ ಗಳಿಸಿ 3ನೇ ಸ್ಥಾನದಲ್ಲಿದ್ದಾರೆ. ಇವರ ನಂತರ ಸೂರ್ಯಕುಮಾರ್ ಯಾದವ್ 4ನೇ ಸ್ಥಾನದಲ್ಲಿದ್ದಾರೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ