Suryakumar Yadav: ಕೇವಲ 39 ರನ್ ಗಳಿಸಿದ್ರೆ ʼಈʼ ದಾಖಲೆ ಮುರಿಯಲಿರುವ ಮಿಸ್ಟರ್ 360 ʼಸೂರ್ಯʼ!
Suryakumar Yadav: ವಿಶ್ವದ ನಂ.2 ಟಿ-20 ಬ್ಯಾಟರ್ ಎಂದು ಗುರುತಿಸಿಕೊಂಡಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಯಲ್ಲೇ ಅವರ ಬ್ಯಾಟ್ನಿಂದ ದಾಖಲೆ ನಿರ್ಮಾಣವಾಗುವ ಸಾಧ್ಯತೆ ಇದೆ.
Suryakumar Yadav: ವಿಶ್ವದ ನಂ.2 ಟಿ-20 ಬ್ಯಾಟರ್ ಎಂದು ಗುರುತಿಸಿಕೊಂಡಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತೊಂದು ದಾಖಲೆ ಬರೆಯುವ ತವಕದಲ್ಲಿದ್ದಾರೆ. ʻಮಿಸ್ಟರ್ 360ʼ ಖ್ಯಾತಿಯ ಸೂರ್ಯಕುಮಾರ್ ಇದುವರೆಗೆ ಆಡಿರುವ 72 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 2,461 ರನ್ ಸಿಡಿಸಿದ್ದಾರೆ. ಅ.9ರಂದು ಬಾಂಗ್ಲಾದೇಶ ವಿರುದ್ಧ ನಡೆಯಲಿರುವ 2ನೇ ಟಿ-20 ಪಂದ್ಯದಲ್ಲಿ ಕೇವಲ 39 ರನ್ ಸಿಡಿಸಿದ್ರೆ, 2,500 ಪೂರೈಸಲಿದ್ದಾರೆ.
ಇದರೊಂದಿಗೆ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2,500 ರನ್ ಪೂರೈಸಿದ ವಿಶ್ವದ 2ನೇ ಆಟಗಾರನೆಂಬ ವಿಶೇಷ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 67 ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಜಂ ಅಗ್ರಸ್ಥಾನದಲ್ಲಿದ್ದಾರೆ. ಇದಲ್ಲದೇ ವಿರಾಟ್ ಕೊಹ್ಲಿ, ಮೊಹಮ್ಮದ್ ರಿಜ್ವಾನ್, ಆರನ್ ಫಿಂಚ್ ಮತ್ತು ಮಾರ್ಟಿನ್ ಗಪ್ಟಿಲ್ ಸಹ ಈ ಸಾಧಕರ ಪಟ್ಟಿಯಲ್ಲಿದ್ದಾರೆ.
ಅತಿ ವೇಗವಾಗಿ 2,500 ರನ್ ಪೂರೈಸಿದ ಬ್ಯಾಟ್ಸ್‌ಮನ್‌ಗಳು
ಬಾಬರ್ ಆಜಂ | ಪಾಕಿಸ್ತಾನ | 67 ಪಂದ್ಯ |
ವಿರಾಟ್ ಕೊಹ್ಲಿ | ಭಾರತ | 73 ಪಂದ್ಯ |
ಮೊಹಮ್ಮದ್ ರಿಜ್ವಾನ್ | ಪಾಕಿಸ್ತಾನ | 76 ಪಂದ್ಯ |
ಆರನ್ ಫಿಂಚ್ | ಆಸ್ಟ್ರೇಲಿಯಾ | 78 ಪಂದ್ಯ |
ಮಾರ್ಟಿನ್ ಗಪ್ಟಿಲ್ | ನ್ಯೂಜಿಲೆಂಡ್ | 86 ಪಂದ್ಯ |
ಇದೇ ಅಕ್ಟೋಬರ್ 6ರಂದು ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ-20 ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ನಾಯಕನಾಗಿ ಸೂರ್ಯಕುಮಾರ್ ಯಾದವ್ 14 ಎಸೆತಗಳಲ್ಲಿ 29 ರನ್ ಬಾರಿಸಿದ್ದರು. ಇದೀಗ ಅವರು ಮತ್ತೊಂದು ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ.
ಇದನ್ನೂ ಓದಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು? ಬುಮ್ರಾ, ಶಮಿ, ಪಾಂಡ್ಯ ಖಂಡಿತ ಅಲ್ಲ...
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.