ಕಾಮನ್ ವೆಲ್ತ್ ಕ್ರೀಡಾಕೂಟ: ಕುಸ್ತಿಯಲ್ಲಿ ಸತತ ಮೂರನೇ ಚಿನ್ನದ ಪದಕ ಗೆದ್ದ ಸುಶೀಲ್ ಕುಮಾರ್
ನವದೆಹಲಿ: ಕಾಮನ್ವೆಲ್ತ್ ಗೇಮ್ಸ್ ನ ಪುರುಷರ ಕುಸ್ತಿ ಫ್ರೀಸ್ಟೈಲ್ 74 ಕೆಜಿ ವಿಭಾಗದಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರು 14 ನೇ ಚಿನ್ನದ ಪದಕವನ್ನು ಭಾರತಕ್ಕೆ ತಂದರು.
ಸತತ ಮೂರನೆಯ ಕಾಮನ್ವೆಲ್ತ್ ಗೇಮ್ಸ್ ಫೈನಲ್ನಲ್ಲಿ ಆಡಿದ ಸುಶೀಲ್ ಕುಮಾರ್ ದಕ್ಷಿಣ ಆಫ್ರಿಕಾದ ಎದುರಾಳಿ ಜೊಹಾನ್ಸ್ ಬೋಥಾ ಅವರನ್ನು ಪುರುಷರ ಫ್ರೀಸ್ಟೈಲ್ 74 ಕೆಜಿ ವಿಭಾಗದಲ್ಲಿ ಸೋಲಿಸಿದರು.
2010 ರ ನವದೆಹಲಿ ಆವೃತ್ತಿಯಲ್ಲಿ 66 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು,ಅದೇ ರೀತಿಯಾಗಿ ಗ್ಲ್ಯಾಸ್ಗೋದಲ್ಲಿ 2014 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿಯೂ ಕೂಡ ಚಿನ್ನದ ಪದಕವನ್ನು ಗೆದ್ದಿದ್ದರು.ಆ ಮೂಲಕ ಸತತ ಮೂರನೇ ಬಾರಿಗೆ ಚಿನ್ನದ ಪದಕ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.ಅಲ್ಲದೆ ಒಲಂಪಿಕ್ ನಲ್ಲಿ ಎರಡು ಪದಕ ಪಡೆದ ಏಕೈಕ ಆಟಗಾರ ಎನ್ನುವ ಹಿರಿಮೆಯನ್ನು ಸುಶೀಲ್ ಕುಮಾರ್ ಹೊಂದಿದ್ದಾರೆ.
ಈಗ ಕಾಮನ್ ವೆಲ್ತ್ ನಲ್ಲಿ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಭಾರತದ ಪದಕಗಳ ಸಂಖ್ಯೆಯು 14ಕ್ಕೆ ತಲುಪಿದೆ.