ಮುಂಬೈ: ಭಾರತ ತಂಡವು ಇಲ್ಲಿನ ವಾಂಖೇಡ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರನೆಯ ಟ್ವೆಂಟಿ ಪಂದ್ಯದಲ್ಲಿ ಐದು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. 


COMMERCIAL BREAK
SCROLL TO CONTINUE READING

ಮೊದಲು ಬ್ಯಾಟಿಂಗ್ ಗೆ ಇಳಿದ ಲಂಕಾ ತಂಡವು ಮೊದಲ ಮೂರು ಓವರ್ಗಳಲ್ಲಿ ನಿರೋಶನ್ ದಿಕ್ವೆಲಾ, ಕುಸಲ್ ಪೆರೆರಾ, ಉಪುಲ್ ತರಂಗಾರವರ ವಿಕೆಟ್ಗಳನ್ನು ಕೇವಲ 18ರನ್ ಗಳಾಗುವಷ್ಟರಲ್ಲಿ ಕಳೆದುಕೊಂಡು ಆಲೌಟ್ ಆಗುವ ಭೀತಿಗೆ ಒಳಗಾಗಿತ್ತು, ಆದರೆ ಅಸೆಲಾ ಗುನರತ್ನೆ (36) ದಾಸುನ್ ಶನಕಾ(29) ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 135 ರನ್ ಗಳ ಸಮಾಧಾನಕರ ಮೊತ್ತವನ್ನು ದಾಖಲಿಸಿತು. ಭಾರತದ ಪರ ಹಾರ್ದಿಕ್ ಪಾಂಡ್ಯ ಮತ್ತು ಜಯದೇವ್ ಉನಾದ್ಕತ್ ತಲಾ ಎರಡೆರಡು ವಿಕೆಟ್ ಪಡೆದರು.


ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತ ತಂಡವು ಪ್ರಾರಂಭದಲ್ಲಿ ರಾಹುಲ್ ರವರ ವಿಕೆಟ್ ಗಳನ್ನು ಬೇಗನೆ ಕಳೆದು ಕೊಂಡಿತು ಆದರೆ ಮುಂದೆ ರೋಹಿತ್ ಶರ್ಮಾ(27) ಶ್ರೇಯಸ್ ಅಯ್ಯರ್ (30) ಮನೀಶ್ ಪಾಂಡೆ(32) ತಂಡದ ಗೆಲುವಿಗೆ ನೆರವಾದರು,ಕೊನೆಯ ಹಂತದಲ್ಲಿ  ದಿನೇಶ್ ಕಾರ್ತಿಕ್(18) ಹಾಗೂ ಧೋನಿ ಯವರ ಅಜೇಯ 16 ರನ್ ಗಳ ಮೂಲಕ 19.2 ಓವರ್ ಗಳಲ್ಲಿ  ಭಾರತ ತಂಡ 139 ರನ್ ಗಳಿಸಿ ಗೆಲುವಿನ ದಡ ಸೇರಿತು.


ಆ ಮೂಲಕ ಲಂಕಾ ವಿರುದ್ದ ಮೂರು ಟ್ವೆಂಟಿ ಪಂದ್ಯಗಳಲ್ಲಿ 3-0 ಅಂತರದ  ಜಯ ಸಾಧಿಸುವುದರ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.