T20 Team Announcement: ಪ್ರಸ್ತುತ IPL 2024 ಅನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ಇದರ ಬೆನ್ನಲ್ಲೇ 2024ರ ಟಿ20 ವಿಶ್ವಕಪ್ ಕೂಡ ಆಯೋಜನೆಗೊಳ್ಳಲಿದೆ. ಈ ಟೂರ್ನಿಗೆ ಟಿ20 ತಂಡವನ್ನು ಆಯ್ಕೆ ಮಾಡಲು ಎಲ್ಲಾ ತಂಡಗಳು ಸಿದ್ಧತೆ ನಡೆಸಿವೆ.


COMMERCIAL BREAK
SCROLL TO CONTINUE READING

ಈ ಮಧ್ಯೆ ನ್ಯೂಜಿಲೆಂಡ್‌’ನ ಹಲವು ಸ್ಟಾರ್ ಆಟಗಾರರು ಕೂಡ ಪ್ರಸ್ತುತ ಐಪಿಎಲ್‌’ನಲ್ಲಿ ಆಡುತ್ತಿದ್ದಾರೆ. ಆದರೆ ಅವರು ಏಪ್ರಿಲ್ 18 ರಿಂದ 27 ರವರೆಗೆ ಪಾಕಿಸ್ತಾನದಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಾಗಿದೆ. ಇದರ ಬೆನ್ನಲ್ಲೇ ಆ ಸರಣಿಗಾಗಿ ತಂಡವನ್ನೂ ಪ್ರಕಟಗೊಳಿಸಲಾಗಿದೆ.


ಇದನ್ನೂ ಓದಿ: ಈ ನೀರನ್ನು ಕೂದಲಿಗೆ ಸ್ಪ್ರೇ ಮಾಡಿದ್ರೆ ಸಾಕು: ಬಿಳಿಕೂದಲು ಮರಳಿ ಗಾಢ ಕಪ್ಪಾಗುವುದಲ್ಲದೆ ಮಾರುದ್ದ ಬೆಳೆಯುತ್ತೆ!


ಈ ನ್ಯೂಜಿಲೆಂಡ್ ತಂಡವು ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ ಮತ್ತು ಟ್ರೆಂಟ್ ಬೌಲ್ಟ್ ಅವರಂತಹ ಸ್ಟಾರ್ ಆಟಗಾರರನ್ನು ಒಳಗೊಂಡಿಲ್ಲ. ಏಕೆಂದರೆ ಈ ಆಟಗಾರರು ಸದ್ಯ ಐಪಿಎಲ್’ನಲ್ಲಿ ಆಡುತ್ತಿದ್ದಾರೆ. ಈ ತಂಡದ ಕಮಾಂಡ್ ಅನ್ನು ಮಾಜಿ ಆರ್‌ಸಿಬಿ ಆಟಗಾರನಿಗೆ ಹಸ್ತಾಂತರಿಸಲಾಗಿದೆ. ವಿಶೇಷವೆಂದರೆ ಈ ಆಟಗಾರ ಒಂದು ವರ್ಷದ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ಪುನರಾಗಮನ ಮಾಡುತ್ತಿದ್ದಾರೆ.


ಕಳೆದ ವರ್ಷ ಟಿ20 ವಿಶ್ವಕಪ್‌’ನಲ್ಲಿ ಆಡಿದ ಏಳು ಆಟಗಾರರನ್ನು ನ್ಯೂಜಿಲೆಂಡ್ ತಂಡ ಒಳಗೊಂಡಿದೆ. ಇವರಲ್ಲದೆ, ಬ್ಯಾಟ್ಸ್‌ಮನ್ ಟಿಮ್ ರಾಬಿನ್ಸನ್ ಮತ್ತು ವೇಗದ ಬೌಲರ್ ವಿಲ್ ಓ'ರೂರ್ಕ್ ರೂಪದಲ್ಲಿ ಇಬ್ಬರು ಹೊಸ ಮುಖಗಳನ್ನು ತಂಡದಲ್ಲಿ ಸೇರಿಸಲಾಗಿದೆ.


ಏಪ್ರಿಲ್ 18 ರಂದು ರಾವಲ್ಪಿಂಡಿಯಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದೊಂದಿಗೆ ನ್ಯೂಜಿಲೆಂಡ್ ತಂಡವು ಪಾಕಿಸ್ತಾನ ಪ್ರವಾಸದಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.


ಇದನ್ನೂ ಓದಿ:  106 ಮೀ ಉದ್ದದ ಸಿಕ್ಸ ಬಾರಿಸಿದ ನಿಕೋಲಸ್ : ಈ ಸೀಸನ್ ಅತಿ ಉದ್ದದ ಸಿಕ್ಸ್ ಬಾರಿಸಿದ ಹೆಗ್ಗಳಿಗೆ ಪೂರನ್


ಪಾಕಿಸ್ತಾನ ಪ್ರವಾಸಕ್ಕಾಗಿ ನ್ಯೂಜಿಲೆಂಡ್‌ T20I ತಂಡ:


ಮೈಕೆಲ್ ಬ್ರೇಸ್‌ವೆಲ್ (ನಾಯಕ), ಫಿನ್ ಅಲೆನ್, ಮಾರ್ಕ್ ಚಾಪ್‌ಮನ್, ಜೋಶ್ ಕ್ಲಾರ್ಕ್‌ಸನ್, ಜಾಕೋಬ್ ಡಫಿ, ಡೀನ್ ಫಾಕ್ಸ್‌ಕ್ರಾಫ್ಟ್, ಬೆನ್ ಲಿಸ್ಟರ್, ಕೋಲ್ ಮೆಕ್‌ಕಾಂಚಿ, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ವಿಲ್ ಒ'ರೂರ್ಕ್, ಟಿಮ್ ರಾಬಿನ್ಸನ್, ಬೆನ್ ಸಿಯರ್ಸ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಇಶ್ ಸೋಧಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.