T20 WORLD CUP 2021: India-Pakistan ಪಂದ್ಯಕ್ಕೂ ಮುನ್ನವೇ ಸೋಲೊಪ್ಪಿಕೊಂಡ Shahid Afridi, ಹೇಳಿದ್ದೇನು?
India Vs Pakistan: ಐಸಿಸಿ ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ ಟೀಂ ಇಂಡಿಯಾ ಕುರಿತು ಹೇಳಿಕೆಯೊಂದನ್ನು ನೀಡಿ ಸಂಚಲನ ಮೂಡಿಸಿದ್ದಾರೆ. T20 ವಿಶ್ವಕಪ್ ಕುರಿತು ಮಾತನಾಡಿರುವ ಆಫ್ರಿದಿ, ಪಾಕಿಸ್ತಾನದ ವಿರುದ್ಧ ಭಾರತೆದ ದಾಖಲೆ ತುಂಬಾ ಚೆನ್ನಾಗಿದೆ. ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಒಟ್ಟು ಐದು ಪಂದ್ಯಗಳು ಅನ್ದೆದಿದ್ದು, ಅವುಗಳಲ್ಲಿ ಎಲ್ಲಾ ಪಂದ್ಯಗಳನ್ನು ಭಾರತ ಗೆದ್ದಿದೆ ಎಂದು ಆಫ್ರಿದಿ ಹೇಳಿದ್ದಾರೆ.
ನವದೆಹಲಿ: T20 WORLD CUP 2021 - ಇಂದು ಸಂಜೆ 7:30 ರಿಂದ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ (Team India) ಮತ್ತು ಪಾಕಿಸ್ತಾನ (Team Pakistan) ನಡುವೆ ಟಿ 20 ವಿಶ್ವಕಪ್ ನ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಈ ದೊಡ್ಡ ಪಂದ್ಯಕ್ಕೂ ಮುನ್ನ, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಅವರು ಸೋಲನ್ನು ಒಪ್ಪಿಕೊಂಡರು ಮತ್ತು ಟೀಂ ಇಂಡಿಯಾ ಕುರಿತು ಕಾಮೆಂಟ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂದು ಪಾಕಿಸ್ತಾನದ ಟಿವಿ ಚಾನೆಲ್ ಸಮಾ ಟಿವಿಯಲ್ಲಿ ಶಾಹಿದ್ ಅಫ್ರಿದಿ ಅವರನ್ನು ಕೇಳಿದಾಗ, ಅವರು ಭಾರತವನ್ನು ಗೆಲುವಿಗೆ ಪ್ರಬಲ ಸ್ಪರ್ಧಿ ಎಂದು ಹೇಳಿದ್ದಾರೆ.
ಸೋಲೊಪ್ಪಿಕೊಂಡ ಶಾಹಿದ್ ಆಫ್ರಿದಿ
ಟೀಮ್ ಇಂಡಿಯಾದ ಕುರಿತು ಹೇಳಿಕೆ ನೀಡಿರುವ ಶಾಹೀದ್ ಆಫ್ರಿದಿ, 'ಈ ಪಂದ್ಯದಲ್ಲಿ ಭಾರತ ಭಾರೀ ಮುನ್ನಡೆ ಸಾಧಿಸಲಿದೆ, ಟೀಮ್ ಇಂಡಿಯಾ ಭಾರಿ ಸಾಮರ್ಥ್ಯ ಹೊಂದಿದೆ. ಒತ್ತಡವನ್ನು ನಿಭಾಯಿಸುವಲ್ಲಿ ಭಾರತ ತಂಡ ನಿಪುಣವಾಗಿದೆ. ಕಳೆದ 10-15 ವರ್ಷಗಳಿಂದ ಟೀಂ ಇಂಡಿಯಾ ಉತ್ತಮವಾಗಿ ಆಡುತ್ತಿದೆ. ಈ ಪಂದ್ಯದಲ್ಲಿ ಯಾವ ತಂಡವು ಉತ್ತಮ ಮನಸ್ಥಿತಿ ಮತ್ತು ಬಾಡಿ ಲಾಂಗ್ವೇಜ್ ಹೊಂದಿದೆಯೋ ಅದು ಗೆಲ್ಲುತ್ತದೆ. ಟೀಂ ಇಂಡಿಯಾವನ್ನು ಸೋಲಿಸಲು ಪಾಕಿಸ್ತಾನವು ತನ್ನ 100% ಅನ್ನು ನೀಡಬೇಕಾಗಿದೆ ಎಂದು ಆಫ್ರಿದಿ ಹೇಳಿದ್ದಾರೆ. ಒತ್ತಡವನ್ನು ಮೀರಿದ ನಂತರವಷ್ಟೇ ಪಾಕಿಸ್ತಾನವು ಭಾರತದ ಮೇಲೆ ಗೆಲುವು ದಾಖಲಿಸಬಹುದು. ಪಾಕಿಸ್ತಾನವು ಫಲಿತಾಂಶಗಳನ್ನು ಲೆಕ್ಕಿಸದೆ ಕ್ರಿಕೆಟ್ ಅನ್ನು ಪೂರ್ಣವಾಗಿ ಆನಂದಿಸಬೇಕು ಮತ್ತು ತಂಡದ ಆಟಗಾರರು ತಮ್ಮ 100% ನೀಡಬೇಕು ಎಂದು ಆಫ್ರಿದಿ ಹೇಳಿದ್ದಾರೆ.
ಒಟ್ಟಾರೆ ವರ್ಲ್ಡ್ ಕಪ್ ನಲ್ಲಿ ಭಾರತದ ರೆಕಾರ್ಡ್ 12-0
ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ (World Cup T20) ಯಾವಾಗಲೂ ಮೇಲುಗೈ ಸಾಧಿಸಿದೆ ಎಂಬುದು ಇಲ್ಲಿ ಗಮನಾರ್ಹ. 1992ರ ಏಕದಿನ ವಿಶ್ವಕಪ್‌ನಿಂದ ಆರಂಭವಾದ ಗೆಲುವಿನ ಓಟ ಇಂದಿಗೂ ನಿಲ್ಲದೆ ಮುಂದುವರಿದಿದೆ. ಟೀಂ ಇಂಡಿಯಾ ಇದುವರೆಗೆ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು 7 ಬಾರಿ ಸೋಲಿಸಿದೆ. ಟಿ 20 ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನವನ್ನು 5 ಬಾರಿ ಸೋಲಿಸಿದೆ. ಅಂದರೆ, ಒಟ್ಟಾರೆಯಾಗಿ, ಭಾರತವು ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ 12 ಬಾರಿ ಗೆಲುವು ದಾಖಲಿಸಿದೆ.
ಇದನ್ನೂ ಓದಿ-T20 World Cup 2021: ಭಾರತದ ವಿರುದ್ಧದ ಪಂದ್ಯಕ್ಕಾಗಿ ತನ್ನ ತಂಡ ಘೋಷಿಸಿದ ಪಾಕಿಸ್ತಾನ
ಟಿ20 ವರ್ಲ್ಡ್ ಕಪ್ ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಎಂದಿಗೂ ಸೋಲುಂಡಿಲ್ಲ
ಟಿ 20 ವಿಶ್ವಕಪ್ ಬಗ್ಗೆ ಹೇಳುವುದಾದರೆ, ಪಾಕಿಸ್ತಾನದ ವಿರುದ್ಧ ಭಾರತದ ದಾಖಲೆ ತುಂಬಾ ಚೆನ್ನಾಗಿದೆ. ಟಿ 20 ವಿಶ್ವಕಪ್‌ನಲ್ಲಿ ಇದುವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಒಟ್ಟು 5 ಪಂದ್ಯಗಳು ನಡೆದಿದ್ದು, ಅದರಲ್ಲಿ ಐದೂ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. 2016 ರ ವಿಶ್ವಕಪ್ ನಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪಾಕಿಸ್ತಾನವನ್ನು 6 ವಿಕೆಟ್ ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 5 ವಿಕೆಟ್ ಗೆ 118 ರನ್ ಗಳಿಸಿತ್ತು. ಅದಕ್ಕೆ ಉತ್ತರವಾಗಿ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು.
ಇದನ್ನೂ ಓದಿ-Sourav Ganguly : ಕ್ಯಾಪ್ಟನ್ಸಿ ತೊರೆಯುವಂತೆ ಬಿಸಿಸಿಐ ಕೊಹ್ಲಿ ಮೇಲೆ ಒತ್ತಡ? ಇದಕ್ಕೆ ಸೌರವ್ ಗಂಗೂಲಿ ಹೇಳಿದ್ದೇನು?
ಪಾಕ್ ವಿರುದ್ಧ ಗೆಲುವಿನ ದಾಖಲೆ 5-0
ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿನ ದಾಖಲೆ 5-0 ಇದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಇರುವುದರಿಂದ ಮತ್ತೊಮ್ಮೆ ಉಭಯ ದೇಶಗಳ ನಡುವೆ ರೋಚಕ ಪಂದ್ಯ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು (IND VS PAK) 2 ವರ್ಷಗಳ ನಂತರ ಮುಖಾಮುಖಿಯಾಗುತ್ತಿವೆ. 2019 ರ ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ 89 ರನ್‌ಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿದಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ 140 ರನ್ ಗಳಿಸಿದರು. ಟೀಂ ಇಂಡಿಯಾ 5 ವಿಕೆಟ್ ಗೆ 336 ರನ್ ಗಳಿಸಿತ್ತು. ಉತ್ತರವಾಗಿ ಪಾಕಿಸ್ತಾನ ತಂಡ 6 ವಿಕೆಟ್‌ಗೆ 212 ರನ್ ಮಾತ್ರ ಗಳಿಸಿತ್ತು.
ಇದನ್ನೂ ಓದಿ-T20 World Cup 2021: Ind vs Pak ಮ್ಯಾಚ್ ಮೊದಲೆ ಟೀಂ ಇಂಡಿಯಾಗೆ ಮೆಂಟರ್ ಆಗಿ ಬಂದ ಎಂಎಸ್ ಧೋನಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.