T20 World Cup 2021: ಭಾರತದ ವಿರುದ್ಧದ ಪಂದ್ಯಕ್ಕಾಗಿ ತನ್ನ ತಂಡ ಘೋಷಿಸಿದ ಪಾಕಿಸ್ತಾನ
Pakistan Team Squad Against India in T20 World Cup 2021:ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಇಂದು ಮುಂಜಾನೆ ಪಾಕಿಸ್ತಾನ ಭಾರತದ ವಿರುದ್ಧ ತನ್ನ ತಂಡವನ್ನು ಘೋಷಿಸಿದೆ.
Pakistan Squad Against India: ಐಸಿಸಿ ಟಿ20 ವಿಶ್ವಕಪ್‌ನಲ್ಲಿ (ICC T20 World Cup 2021,)ಅಮೋಘ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ನಾಳೆಯಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಟೀಂ ಇಂಡಿಯಾ ತನ್ನ ಅಭಿಯಾನ ಆರಂಭಿಸಲಿದೆ. ಇಂದು ಮುಂಜಾನೆ ಪಾಕಿಸ್ತಾನ ಭಾರತದ ವಿರುದ್ಧ ತನ್ನ ತಂಡವನ್ನು ಘೋಷಿಸಿದೆ. 12 ಆಟಗಾರರ ಈ ತಂಡದ ನಾಯಕ ಬಾಬರ್ ಅಜಂ ಇರಲಿದ್ದಾರೆ. ಅವರಲ್ಲದೆ ಇತರ ಯಾವ ಆಟಗಾರರು ಪಾಕ್ ತಂಡದಲ್ಲಿ ಇರಲಿದ್ದಾರೆ ತಿಳಿದುಕೊಳ್ಳೋಣ ಬನ್ನಿ.
ಭಾರತದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡ ಹೇಗಿದೆ?
>> ಬಾಬರ್ ಆಜಂ (ನಾಯಕ)
>> ಆಸಿಫ್ ಅಲಿ
>> ನಕಲಿ ಜಮಾನ್
>> ಹೈದರ್ ಅಲಿ
>> ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್)
>> ಇಮಾದ್ ವಾಸಿಮ್
>> ಮೊಹಮ್ಮದ್ ಹಫೀಜ್
>> ಶಾದಬ್ ಖಾನ್
>> ಶೋಯೆಬ್ ಮಲಿಕ್
>> ಹರೀಶ್ ರೌಫ್
>> ಹಸನ್ ಅಲಿ
>> ಶಾಹೀನ್ ಶಾ ಅಫ್ರಿದಿ
ಇದನ್ನೂ ಓದಿ- Sourav Ganguly : ಕ್ಯಾಪ್ಟನ್ಸಿ ತೊರೆಯುವಂತೆ ಬಿಸಿಸಿಐ ಕೊಹ್ಲಿ ಮೇಲೆ ಒತ್ತಡ? ಇದಕ್ಕೆ ಸೌರವ್ ಗಂಗೂಲಿ ಹೇಳಿದ್ದೇನು?
ನಾಳೆ ಭಾರತ-ಪಾಕಿಸ್ತಾನದ ನಡುವೆ ಮಹಾ ಕದನ
ಅಕ್ಟೋಬರ್ 24ರ ಭಾನುವಾರದಂದು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ ಪಂದ್ಯ ಭಾರಿ ರೋಚಕತೆಯಿಂದ ಕೂಡಿರಲಿದೆ. ಟೀಂ ಇಂಡಿಯಾದ ಅಭಿಮಾನಿಗಳು ಈ ಪಂದ್ಯಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಇದಲ್ಲದೆ ವಿಶ್ವಾದ್ಯಂತದ ಜನರೂ ಕೂಡ ಈ ಪಂದ್ಯವನ್ನು ವೀಕ್ಷಿಸಲಿದ್ದಾರೆ. ದುಬೈ ಮತ್ತು ಇತರೆಡೆಗಳಲ್ಲಿ ಅನೇಕ ಜನರಿಗೆ, ಭಾನುವಾರದ ಪಂದ್ಯ ವಿಕ್ಷೀಸುವುದು ಹಬ್ಬಕ್ಕೇನು ಕಡಿಮೆ ಇಲ್ಲ. ಏಕೆಂದರೆ, ಸಾಂಪ್ರದಾಯಿಕ ಎದುರಾಳಿ ಜೊತೆಗಿನ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಹಳೆಯ ಗೆಲುವಿನ ದಾಖಲೆಯನ್ನು ಉಳಿಸಿಕೊಳ್ಳಲು ತನ್ನ ಅತ್ಯುತ್ತಮ ಪ್ರಯತ್ನವನ್ನು ನಡೆಸಲಿದೆ.
ಇದನ್ನೂ ಓದಿ-T20 World Cup 2021: ಕನ್ನಡಿಗ ಕೆ.ಎಲ್.ರಾಹುಲ್ ಬ್ಯಾಟಿಂಗ್ ಬಗ್ಗೆ ಕೊಹ್ಲಿ ಹೇಳಿದ್ದೇನು?
ಇನ್ನೊಂದೆಡೆ ಭಾನುವಾರದ ಪಂದ್ಯಕ್ಕಾಗಿ ಟಿಕೆಟ್ ವಿನಂತಿಗಳನ್ನು ಪೂರೈಸಲು ಅದು ಹೆಣಗಾಡುತ್ತಿದೆ ಎಂಬ ವದಂತಿಗಳನ್ನು ದುಬೈ ಸ್ಪೋರ್ಟ್ಸ್ ಸಿಟಿ (DSC) ಅಧಿಕಾರಿಯೊಬ್ಬರು ತಳ್ಳಿ ಹಾಕಿದ್ದಾರೆ. ಇತ್ತೀಚೆಗೆ ದುಬೈ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಿಶ್ವ ಕ್ರೀಡೆಗಳ ಕೇಂದ್ರವಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಟಿ 20 ವಿಶ್ವಕಪ್ ಬದಲಾಯಿಸಬೇಕಾದಾಗ, ಯುಎಇ ಬದಲಿ ಆಯ್ಕೆಯಾಗಿದೆ. ಈ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಸ್ವಿಚ್ ಮಾಡಲಾಗಿದೆ. ಈ ವರ್ಷ ಯುಎಇ ರಚನೆಯಾಗಿ 50 ವರ್ಷಗಳ ಪೂರ್ಣಗೊಂಡಿವೆ ಮತ್ತು ಈ ಸಂದರ್ಭ ದಲ್ಲಿ ಅಲ್ಲಿ ಆಯೋಜನೆಗೊಳ್ಳುತ್ತಿರುವುದು ವಾತಾವರಣವನ್ನು ಮತ್ತಷ್ಟೇ ರೋಮಾಂಚನಗೊಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.