T20 World Cup 2022 : ಟಿ20 ವಿಶ್ವಕಪ್ ಆಸ್ಟ್ರೇಲಿಯಾ ನೆಲದಲ್ಲಿ ಅಕ್ಟೋಬರ್ 16 ರಂದು ಆರಂಭವಾಗಲಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ಭಾರತ-ಪಾಕಿಸ್ತಾನ ನಡುವಿನ ಈ ಅಮೋಘ ಪಂದ್ಯಕ್ಕೂ ಮುನ್ನ ಬಿಗ್ ನ್ಯೂಸ್ ಒಂದು ಹೊರಬೀಳುತ್ತಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.


COMMERCIAL BREAK
SCROLL TO CONTINUE READING

ಭಾರತ-ಪಾಕ್ ಪಂದ್ಯದ ಈ ಬಗ್ಗೆ ಬಿಗ್ ನ್ಯೂಸ್


ಆಸ್ಟ್ರೇಲಿಯಾದಲ್ಲಿ ಟೂರ್ನಿ ಆರಂಭವಾಗಲು ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಟಿ20 ವಿಶ್ವಕಪ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗುರುವಾರ ಈ ಮಾಹಿತಿಯನ್ನು ನೀಡಿದೆ.


ಇದನ್ನೂ ಓದಿ : ಟೀಂ ಇಂಡಿಯಾಗೆ ಬಿಗ್ ರಿಲೀಫ್ : ಪಾಕ್ ಟೀಂನಿಂದ ಈ ಡೆಂಜರ್ ಬ್ಯಾಟ್ಸ್‌ಮನ್ ಔಟ್


ಅಭಿಮಾನಿಗಳಿಗೆ ನಿರಾಸೆ


ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ 12 ಪಂದ್ಯದ ಎಲ್ಲಾ ಟಿಕೆಟ್‌ಗಳು ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದ್ದರೆ, ಹೆಚ್ಚುವರಿ ಸ್ಟ್ಯಾಂಡಿಂಗ್ ರೂಮ್ ಟಿಕೆಟ್‌ಗಳು ಮಾರಾಟಕ್ಕೆ ಇಟ್ಟ ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.


ಐಸಿಸಿ ಈವೆಂಟ್ ಹೌಸ್ ಫುಲ್


82 ವಿವಿಧ ದೇಶಗಳ ಅಭಿಮಾನಿಗಳು 16 ಅಂತಾರಾಷ್ಟ್ರೀಯ ತಂಡಗಳ ವಿಶ್ವದ ಅತ್ಯುತ್ತಮ ಆಟಗಾರರನ್ನು ವೀಕ್ಷಿಸಲು ಟಿಕೆಟ್ ಖರೀದಿಸಿದ್ದಾರೆ. ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೆಗಾ ಈವೆಂಟ್‌ನ 500,000 ಟಿಕೆಟ್‌ಗಳು ಮಾರಾಟವಾಗಿವೆ ಎಂದು ಜಾಗತಿಕ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನ ತಮ್ಮ ಆರಂಭಿಕ ಸೂಪರ್ 12 ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ.


ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ಪ್ರಾರಂಭ


ಐಸಿಸಿ ಪ್ರಕಾರ, ಟಿಕೆಟ್ ಖರೀದಿಸಲು ಈ ಉತ್ಸಾಹಕ್ಕೆ ಕಾರಣ ಅದರ ಸಾಮಾನ್ಯ ಬೆಲೆಗಳು. ಮೊದಲ ಸುತ್ತಿಗೆ $5 ಮತ್ತು ಮಕ್ಕಳಿಗೆ ಸೂಪರ್ 12 ಪಂದ್ಯಗಳಿಗೆ ಮತ್ತು ವಯಸ್ಕರಿಗೆ $20 ಗೆ ಟಿಕೆಟ್ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಈ ಟೂರ್ನಿಯ ಇತರ ಹಲವು ಪಂದ್ಯಗಳ ಟಿಕೆಟ್‌ಗಳೂ ಮಾರಾಟವಾಗಿವೆ ಎಂದು ಐಸಿಸಿ ತಿಳಿಸಿದೆ. ಅಕ್ಟೋಬರ್ 16 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಹೆಚ್ಚಿನ ಪಂದ್ಯಗಳಿಗೆ ಟಿಕೆಟ್‌ಗಳು ಇನ್ನೂ ಲಭ್ಯವಿವೆ ಮತ್ತು ಅಭಿಮಾನಿಗಳು T20 World Cup.com ನಲ್ಲಿ ತಮ್ಮ ಸ್ಥಾನಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಐಸಿಸಿ ತಿಳಿಸಿದೆ.


ಟಿ20 ವಿಶ್ವಕಪ್‌ಗೆ ಭಾರತ ತಂಡ


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ವೈ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಬಿ. ಕುಮಾರ್ ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.


ಸ್ಟ್ಯಾಂಡ್‌ಬೈ ಆಟಗಾರರು - ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.


ಇದನ್ನೂ ಓದಿ : T20 World Cup : ಟಿ20 ವಿಶ್ವಕಪ್‌ನ Playing 11 ನಿಂದ ರಿಷಬ್ ಪಂತ್ ಔಟ್ : ಹಾಗಿದ್ರೆ, ಯಾರಿಗೆ ಸ್ಥಾನ?


2022ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪಂದ್ಯಗಳು


ಭಾರತ vs ಪಾಕಿಸ್ತಾನ - 1 ನೇ ಪಂದ್ಯ - 23 ಅಕ್ಟೋಬರ್ (ಮೆಲ್ಬೋರ್ನ್)
ಭಾರತ vs ಗುಂಪು A ರನ್ನರ್ ಅಪ್ - 2 ನೇ ಪಂದ್ಯ - 27 ಅಕ್ಟೋಬರ್ (ಸಿಡ್ನಿ)
ಭಾರತ vs ದಕ್ಷಿಣ ಆಫ್ರಿಕಾ - 3 ನೇ ಪಂದ್ಯ - 30 ಅಕ್ಟೋಬರ್ (ಪರ್ತ್)
ಭಾರತ vs ಬಾಂಗ್ಲಾದೇಶ - 4 ನೇ ಪಂದ್ಯ - ನವೆಂಬರ್ 2 (ಅಡಿಲೇಡ್)
ಭಾರತ vs ಗುಂಪು ಬಿ ವಿಜೇತ - ಪಂದ್ಯ 5 - 6 ನವೆಂಬರ್ (ಮೆಲ್ಬೋರ್ನ್)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.