T20 World Cup 2024: ಭಾರತ ಚಾಂಪಿಯನ್ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಧೋನಿ..? ಇದು ನನಗೆ ಬಹು ದೊಡ್ಡ ಉಡುಗೊರೆ ಎಂದ ಮಿಸ್ಟರ್ ಕೂಲ್
MS Dhoni: ಟಿ20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿದೆ. 13 ವರ್ಷಗಳ ಕಾಯುವಿಕೆಗೆ ತಕ್ಕ ಪ್ರತಿಪಲ ಸಿಕ್ಕಿದೆ. ಬಾರ್ಬಡೋಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ಭಾರತ ಏಳು ರನ್‌ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
MS Dhoni: ಟಿ20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿದೆ. 13 ವರ್ಷಗಳ ಕಾಯುವಿಕೆಗೆ ತಕ್ಕ ಪ್ರತಿಪಲ ಸಿಕ್ಕಿದೆ. ಬಾರ್ಬಡೋಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ಭಾರತ ಏಳು ರನ್‌ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗ ನಷ್ಟಕ್ಕೆ 176 ರನ್ ಗಳಿಸಿತು. 177 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಎದುರಾಳಿ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಭಾರತದ ಮುಂದೆ ಮಂಡಿಯೂರಿತು.
ಬುಮ್ರಾ, ಹಾರ್ದಿಕ್ ಮತ್ತು ಅರ್ಷದೀಪ್ ಅದ್ಭುತ ಬೌಲಿಂಗ್ ಮಾಡಿದ್ದು ಭಾರತ ತಂಡ ಪಂದ್ಯ ಗೆಲ್ಲವಲ್ಲಿ ಈ ಮೂವರು ಬೌಲರ್‌ಗಳು ಮುಖ್ಯ ಪಾತ್ರ ವಹಿಸಿದ್ದರು. ಎದುರಾಳಿಯನ್ನು ಸೋಲಿಸಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು. 2007ರ ನಂತರ ಭಾರತ ಮತ್ತೊಮ್ಮೆ ಟಿ20 ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು. ಈ ಹಿನ್ನೆಲೆಯಲ್ಲಿ ದೇಶಕ್ಕೆ ಮೊದಲ ಟಿ20 ಕಪ್ ನೀಡಿದ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರೋಚಕ ಹೋರಾಟದಲ್ಲಿ ಶಾಂತವಾಗಿದ್ದ ಟೀಂ ಇಂಡಿಯಾವನ್ನು ಧೋನಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: T20 World Cup 2024: ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ..!
ಪಂದ್ಯ ನೊಡುತ್ತಿದ್ದಂತೆ ನನ್ನ ಹೃದಯ ಬಡಿತ ಹೆಚ್ಚಾಯಿತು, ಶಾಂತವಾಗಿದ್ದು ಏನು ಮಾಡಲು ಬಯಸುತ್ತೀರೋ ಅದನ್ನು ಆತ್ಮವಿಶ್ವಾಸದಿಂದ ಮಾಡಿ. ವಿಶ್ವಕಪ್ ಆಯೋಜಿಸಿದ್ದಕ್ಕಾಗಿ ಎಲ್ಲಾ ಭಾರತೀಯರ ಪರವಾಗಿ ಧನ್ಯವಾದಗಳು. ಅಭಿನಂದನೆಗಳು. ಹೇ.. ನನಗೆ ಬೆಲೆಕಟ್ಟಲಾಗದ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಕ್ಕೆ ಧನ್ಯವಾದಗಳು'' ಎಂದು ಧೋನಿ ಹೇಳಿದ್ದಾರೆ. ಜುಲೈ 7 ಧೋನಿ ಹುಟ್ಟುಹಬ್ಬ. ತಮ್ಮ ಸ್ಪೆಷಲ್ ದಿನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಕಾರಣ ಹುಟ್ಟುಹಬ್ಬದ ಉಡುಗೊರೆ ನೀಡಿದ ಟೀಂ ಇಂಡಿಯಾಗೆ ಧೋನಿ ಧನ್ಯವಾದ ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.