IND vs SA Final Pitch Report: T20 ವಿಶ್ವಕಪ್ 2024ರ ಅಂತಿಮ ಪಂದ್ಯವು ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ನಡೆಯಲಿದೆ. ಈ ಪಂದ್ಯವು ಜೂನ್ 29 ರಂದು ಬ್ರಿಡ್ಜ್‌ ಟೌನ್ ಬಾರ್ಬಡೋಸ್‌’ನ ಕೆನ್ಸಿಂಗ್ಟನ್ ಓವಲ್‌’ನಲ್ಲಿ ನಡೆಯಲಿದೆ. ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಆಫ್ರಿಕಾ ಫೈನಲ್‌’ಗೆ ಟಿಕೆಟ್ ಕಾಯ್ದಿರಿಸಿದ್ದರೆ, ಭಾರತ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಸೋಲಿಸಿ ಫೈನಲ್ ಪ್ರವೇಶಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಲಕ್ಷಣಗಳು ಕಂಡು ಬಂದಲ್ಲಿ ಎಚ್ಚೆತ್ತುಕೊಳ್ಳಿ...ಇದು ಡೆಂಗ್ಯೂ ಜ್ವರದ ರೋಗ ಲಕ್ಷಣಗಳು ಇರಬಹುದು..!


ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಪಂದ್ಯಗಳನ್ನು ಗೆದ್ದಿರುವ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು. ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಇದುವರೆಗೆ ಸತತ 8 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಸತತ ಏಳು ಪಂದ್ಯಗಳನ್ನು ಗೆದ್ದಿದೆ. ಭಾರತದ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಬಾರ್ಬಡೋಸ್‌’ನ ಪಿಚ್‌’ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುವ ಮೂಲಕ ರೋಚಕ ಪಂದ್ಯವನ್ನು ಎದುರು ನೋಡಬಹುದು.


ಬಾರ್ಬಡೋಸ್‌’ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನ ಪಿಚ್‌’ನಲ್ಲಿ ಚೆಂಡು ಮತ್ತು ಬ್ಯಾಟ್ ನಡುವೆ ಸಮಾನ ಪೈಪೋಟಿ ಕಂಡುಬರುತ್ತದೆ. ಈ ಮೈದಾನದಲ್ಲಿ ವೇಗದ ಬೌಲರ್‌’ಗಳಿಗೂ ಬೌನ್ಸ್‌’ನೊಂದಿಗೆ ಚೆಂಡನ್ನು ಸ್ವಿಂಗ್ ಮಾಡುವ ಅವಕಾಶ ಸಿಗುತ್ತದೆ. ಮಧ್ಯಮ ಓವರ್‌’ಗಳಲ್ಲಿ ಈ ಪಿಚ್‌ನಿಂದ ಸ್ಪಿನ್ನರ್‌ಗಳು ಸಹ ಸಹಾಯ ಪಡೆಯುತ್ತಾರೆ. ಈ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 153 ರನ್ ಆಗಿದೆ. ಪಂದ್ಯದ ವೇಳೆ ಟಾಸ್ ಪ್ರಮುಖ ಪಾತ್ರ ವಹಿಸಲಿದೆ.


ಇದನ್ನೂ ಓದಿ: ಆ ನಟಿಯರೆಲ್ಲ ದುರಹಂಕಾರಿಗಳು.. ಆದರೆ ಸೌಂದರ್ಯ ಮತ್ತು ತ್ರಿಷಾ ಹಾಗಲ್ಲ..! ರಂಬಾ ಶಾಕಿಂಗ್‌ ಹೇಳಿಕೆ


ಓವಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಇಲ್ಲಿ ಒಟ್ಟು 32 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ. ಈ ಪೈಕಿ ಮೊದಲು ಬ್ಯಾಟ್ ಮಾಡಿದ ತಂಡ 19ರಲ್ಲಿ ಗೆದ್ದಿದೆ. 11 ಬಾರಿ ಗುರಿ ಬೆನ್ನತ್ತಿದ ತಂಡಕ್ಕೆ ಜಯ ಸಾಧಿಸಿದೆ. ಎರಡು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. ಇಲ್ಲಿ 172 ರನ್‌’ಗಳು ಅತ್ಯಧಿಕ ರನ್ ಚೇಸ್ ಆಗಿದೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.