T20 World Cup 2024: ಅಫ್ಘಾನಿಸ್ತಾನದ ವಿರುದ್ಧ ಐತಿಹಾಸಿಕ ಜಯ..! ಮೊದಲನೇ ಭಾರಿಗೆ ಫೈನಲ್ಸ್ಗೆ ಎಂಟ್ರಿ ಕೊಟ್ಟ ದಕ್ಷಿಣ ಆಫ್ರಿಕಾ
T20 World Cup 2024:ದಕ್ಷಿಣ ಆಫ್ರಿಕಾ T20 ವಿಶ್ವಕಪ್ 2024 ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಅಫ್ಘಾನಿಸ್ತಾನ ವಿರುದ್ಧದ ಏಕಪಕ್ಷೀಯ ಸೆಮಿಫೈನಲ್ ಪಂದ್ಯದಲ್ಲಿಸೌತ್ ಆಫ್ರಿಕಾ ತಂಡ ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ದಕ್ಷಿಣ ಆಫ್ರಿಕಾ ಫೈನಲ್ ತಲುಪಿದೆ.
T20 World Cup 2024: ದಕ್ಷಿಣ ಆಫ್ರಿಕಾ T20 ವಿಶ್ವಕಪ್ 2024 ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಅಫ್ಘಾನಿಸ್ತಾನ ವಿರುದ್ಧದ ಏಕಪಕ್ಷೀಯ ಸೆಮಿಫೈನಲ್ ಪಂದ್ಯದಲ್ಲಿಸೌತ್ ಆಫ್ರಿಕಾ ತಂಡ ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ದಕ್ಷಿಣ ಆಫ್ರಿಕಾ ಫೈನಲ್ ತಲುಪಿದೆ.
ಮಂಡಕೋಡಿ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ ಕೇವಲ 56 ರನ್ ಗಳಿಸಿ 11.5 ಓವರಗಳಿಗೆ ಸರ್ವ ಪತನ ಕಂಡಿತು. ಅಫ್ಘಾನಿಸ್ತಾನದ ಬ್ಯಾಟ್ಸ್ ಮನ್ ಗಳು ದಕ್ಷಿಣ ಆಫ್ರಿಕಾ ಬೌಲರ್ ಗಳ ದಾಳಿಗೆ ತತ್ತರಿಸಿದರು. ವಿಶ್ವಕಪ್ ಸೆಮಿಫೈನಲ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಗಳಿಸಿದ ತಂಡ ಎಂಬ ಕುಖ್ಯಾತಿಗೆ ಅಫ್ಘಾನಿಸ್ತಾನ ಪಾತ್ರವಾಗಿದೆ.
ಇದನ್ನೂ ಓದಿ: ENG vs USA : ಸೆಮಿಸ್‌ಗೆ ಎಂಟ್ರಿ ಕೊಟ್ಟ ಇಂಗ್ಲೆಂಡ್, ಟೂರ್ನಿಯಿಂದ ಹೊರಬಿದ್ದ ಯುಎಸ್‌ಎ
ಓಪರ್ ಆಗಿ ಕ್ರೀಸ್‌ಗೆ ಎಂಟ್ರಿ ಕೊಟ್ಟಿದ್ದ ಅಜ್ಮತುಲ್ಲಾ ಒಮರ್ಜಾಯ್ 12 ಎಸೆತಗಳಲ್ಲಿ 2 ಬೌಂಡರಿ ಭಾರಿಸಿ ಕೇವಲ 10 ರನ್ ಕಲೆ ಹಾಕಿ ಔಟ್ ಆದರೂ. ಇನ್ನೂ ನಂತರ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಅಫ್ಘಾನ್ ತಂಡದ ನಾಯಕ ರಶೀದ್ ಖಾನ್ 8 ಎಸೆತಗಳಲ್ಲಿ 8 ರನ್ ಕಲೆಹಾಕಿ ಎದುರಾಳಿ ತಂಡಕ್ಕೆ ವಿಕೆಟ್ ಒಪ್ಫಿಸಿ ಫೀಲ್ಡ್‌ನಿಂದ ಹೊರ ನಡೆದರು. ಬಿರುಸಿನ ಬೌಲಿಂಗ್ ಪ್ರದರ್ಶಿಸಿದ್ದ ಸೌಂತ್ ಆಫ್ರಿಕಾ ತಂಡದ ಬೌಲರ್‌ಗಳು ಅಫ್ಘಾನಿಸ್ತಾನ ತಂಡದ ಬ್ಯಾಟರ್‌ಗಳ ಬೆವರಿಳಿಸಿದ್ರು.
ಬಳಿಕ ಕೇವಲ 57ರನ್‌ಗಳ ಟರ್ಗೆಟ್ ಎದುರಿಸಲು ದಕ್ಷಿಣ ಆಫ್ರಿಕಾದ ಡಿ ಕಾಕ್ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದರು. 8 ಎಸೆತಗಳನ್ನಾಡಿ 1 ಬೌಂಡರಿ ಹಾರಿಸಿ, ಕೇವಲ 5 ರನ್ ಕಲೆಹಾಕಿ ಡಿ ಕಾಕ್ ಫೀಲ್ಡ್‌ನಿಂದ ಹೊರ ನಡೆದರು. ನಂತರ ಬಂದ ರೀಜಾ ಹೆಂಡ್ರಿಕ್ಸ್ 21 ಎಸೆತಗಳನ್ನಾಡಿ 23 ರನ್ ಗಳಿಸಿದರು. 8.5 ಓವರ್‌ಗಳಲ್ಲಿ ಎದುರಾಳಿಯ ತಂಡವನ್ನು ಮಣಿಸಿ ಸೌತ್ ಆಫ್ರಿಕಾ ತಂಡ ಗೆದ್ದು ಬೀಗಿತ್ತು. ಈ ಮೂಲಕ ಮೊದಲನೇ ಭಾರಿಗೆ ಐತಿಹಾಸಿ ಗೆಲುವು ಸಧಿಸಿದ ದಕ್ಷಿಣ ಆಫ್ರಿಕಾ, ಫೈನಲ್‌ಗೆ ಎಂಟ್ರಿ ಕೊಟ್ಟಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ