3 ಸ್ಥಾನ, 7 ತಂಡಗಳ ಪೈಪೋಟಿ… ಸೂಪರ್ 8 ಪ್ರವೇಶಿಸಬೇಕೆಂದರೆ ಈ 2 ತಂಡಗಳಿಗೆ ಆ ದೇವರೇ ಗತಿ!!
T20 World Cup 2024 Super 8 Scenario: ಸೂಪರ್-8ರ ಪಟ್ಟಿಯಲ್ಲಿ ಎ, ಬಿ ಮತ್ತು ಡಿ ಗುಂಪಿನ ತಲಾ ಒಂದು ತಂಡ ಅರ್ಹತೆ ಪಡೆದಿದ್ದು, ಸಿ ಗುಂಪಿನಿಂದ ಸೂಪರ್-8 ತಲುಪಿದ ಎರಡೂ ತಂಡಗಳ ಹೆಸರನ್ನು ತೆರವುಗೊಳಿಸಲಾಗಿದೆ.
T20 World Cup 2024 Super 8 Scenario: ಟಿ20 ವಿಶ್ವಕಪ್ 2024 ಲೀಗ್ ಸುತ್ತಿನ ಅಂತಿಮ ಹಂತದಲ್ಲಿದೆ. ಇನ್ನೆರಡು ದಿನಗಳಲ್ಲಿ ಸೂಪರ್-8ಕ್ಕೆ ಪ್ರವೇಶಿಸಿದ ತಂಡ ಯಾವುದೆಂದು ತಿಳಿಯುತ್ತದೆ. 5 ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದು, 8 ತಂಡಗಳು ಸಂಪೂರ್ಣವಾಗಿ ಹೊರಬಿದ್ದಿವೆ. ಇದೇ ವೇಳೆ ಉಳಿದ 3 ಸ್ಥಾನಗಳಿಗಾಗಿ 7 ತಂಡಗಳ ನಡುವೆ ಹೋರಾಟ ನಡೆಯುತ್ತಿದೆ. ಇವುಗಳಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್’ನಂತಹ ದೊಡ್ಡ ತಂಡಗಳ ಹೆಸರುಗಳೂ ಸೇರಿವೆ.
ಇದನ್ನೂ ಓದಿ: ಕ್ರಿಕೆಟ್ ಮುಗಿಸಿ ಆಫೀಸ್ ಕೆಲಸಕ್ಕೆ ಹೋಗ್ತಾರಂತೆ ಭಾರತದ ಈ ಕ್ರಿಕೆಟಿಗ!!
ಸೂಪರ್-8ರ ಪಟ್ಟಿಯಲ್ಲಿ ಎ, ಬಿ ಮತ್ತು ಡಿ ಗುಂಪಿನ ತಲಾ ಒಂದು ತಂಡ ಅರ್ಹತೆ ಪಡೆದಿದ್ದು, ಸಿ ಗುಂಪಿನಿಂದ ಸೂಪರ್-8 ತಲುಪಿದ ಎರಡೂ ತಂಡಗಳ ಹೆಸರನ್ನು ತೆರವುಗೊಳಿಸಲಾಗಿದೆ. ಗ್ರೂಪ್-ಎಯಿಂದ ಭಾರತ, ಗ್ರೂಪ್-ಬಿಯಿಂದ ಆಸ್ಟ್ರೇಲಿಯಾ, ಗ್ರೂಪ್-ಸಿಯಿಂದ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ಹಾಗೂ ಗ್ರೂಪ್-ಡಿಯಿಂದ ದಕ್ಷಿಣ ಆಫ್ರಿಕಾ ತಂಡ ಸೂಪರ್-8 ಟಿಕೆಟ್ ಪಡೆದುಕೊಂಡಿದೆ. ಅದೇ ಸಮಯದಲ್ಲಿ, ಸೂಪರ್-8 ರೇಸ್’ನಿಂದ ಹೊರಗುಳಿದ ತಂಡಗಳಲ್ಲಿ ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ನೇಪಾಳ, ಓಮನ್, ನಮೀಬಿಯಾ ಮತ್ತು ಪಪುವಾ ನ್ಯೂಗಿನಿಯಾ, ಉಗಾಂಡಾ ಸೇರಿವೆ.
ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಸಮೀಕರಣ ಹೇಗಿದೆ?
ಸೂಪರ್-8 ರಲ್ಲಿ ಎರಡು ಗುಂಪುಗಳನ್ನು ರಚಿಸಲಾಗುತ್ತದೆ. ಇದರಲ್ಲಿ ಪ್ರತಿ ಗುಂಪು 4-4 ತಂಡಗಳನ್ನು ಹೊಂದಿರುತ್ತದೆ. ಈಗ ಉಳಿದ 3 ಸ್ಥಾನಗಳಿಗಾಗಿ 7 ತಂಡಗಳು ಸೆಣಸಾಡುತ್ತಿವೆ. ಒಂದೆಡೆ ಅಮೆರಿಕದ ಮತ್ತೊಂದು ಸೋಲಿಗೆ ಪಾಕಿಸ್ತಾನ ಕಾತರುತ್ತಿದ್ದರೆ, ಜೂನ್ 16ರಂದು ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯಕ್ಕಾಗಿ ಇಂಗ್ಲೆಂಡ್ ಕಾಯುತ್ತಿದೆ. ಅಮೇರಿಕಾ ತಂಡ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಅಮೇರಿಕಾ ಗೆದ್ದರೆ ಪಾಕಿಸ್ತಾನ ಬಹುತೇಕ ಔಟ್ ಆಗಲಿದೆ.
ಇದನ್ನೂ ಓದಿ: ಭಾರತ ಆಲೌಟ್ ಆಯ್ತೆಂದು ಕುಣಿದಾಡಿದ ಪಾಕ್ ಫ್ಯಾನ್ಸ್… ತನ್ನ ತಂಡ ಸೋಲ್ತಿದ್ದಂತೆ ಹೀಗ್ ಮಾಡೋದಾ!
ಅಮೆರಿಕ, ಪಾಕಿಸ್ತಾನ, ಸ್ಕಾಟ್ಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ಕೆನಡಾ ಸೇರಿದಂತೆ 7 ತಂಡಗಳು 3 ಸ್ಥಾನಗಳಿಗಾಗಿ ಹೋರಾಡುತ್ತಿವೆ. ಈ ಹೆಚ್ಚಿನ ತಂಡಗಳ ನಡುವೆ ರನ್ ರೇಟ್ ಸಮರವಿದೆ. ಅತ್ಯಂತ ರೋಚಕ ಯುದ್ಧ ಪಾಕಿಸ್ತಾನ ಮತ್ತು ಅಮೆರಿಕ ನಡುವೆ... ಪಾಕಿಸ್ತಾನವನ್ನು ಸೋಲಿಸುವ ಮೂಲಕ ಅಮೆರಿಕ ಸಂಚಲನವನ್ನೇ ಸೃಷ್ಟಿ ಮಾಡಿತ್ತು, ಇದೀಗ ಪಾಕಿಸ್ತಾನವು ಯುಎಸ್ಎ ಸೋಲಿಗಾಗಿ ಪ್ರಾರ್ಥಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ