T20 Worldcup 2024 Super 8: ಟಿ20 ವಿಶ್ವಕಪ್‌ 2024ರ ಸೂಪರ್‌ 8ರ(T20 World Cup 2024 Super 8) ಮೊದಲ ಪಂದ್ಯ ಬುಧವಾರ, ಜೂನ್‌ 19 ರಂದು ನಡೆಯಿತು. ವೆಸ್ಟ್‌ ಇಂಡೀಸ್‌ನ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸೌತ್‌ ಆಫ್ರಿಕಾ(South Africa) ತಂಡದ ವಿರುದ್ಧ ಯುಎಸ್‌ಎ(USA) ಮಂಡಿಯೂರಿತು.


COMMERCIAL BREAK
SCROLL TO CONTINUE READING

ಟಾಸ್‌ ಸೋತ ದಕ್ಷಿಣ ಆಫ್ರಿಕಾ ತಂಡವನ್ನು ಯುಎಸ್‌ಎ ತಂಡ ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಕ್ವಿಂಟನ್‌ ಡಿ ಕಾಕ್‌(Quinton de kock) ಆರಂಭಿಕ ಆಟಗಾರರಾಗಿ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದರು. ಇವರಿಗೆ ಜೋಡಿ ಆಟಗಾರರಾಗಿ ರೀಜಾ ಹೆಂಡ್ರಿಕ್ಸ್‌(Reeza hendricks) ಸಾತ್‌ ಕೊಟ್ಟಿದ್ದರು. ಅದರೂ ಕೂಡ ಈ ಇಬ್ಬರು ಆಟಗಾರರು ಉತ್ತಮ ಆ ಪ್ರದರಶಿಸಲಿಲ್ಲ. ನಂತರ ಬಂದ ಏಡನ್‌ ಮಾರ್ಕ್ರಾಮ್‌(Aiden markram) ಹಾಗೂ ಕ್ವಿಂಟನ್‌ ಡಿ ಕಾಕ್‌(Quinton de kock) ಅದ್ಭುತ ಆಟ ಆಡಿದರು. ಈ ಜೋಡಿ ಜೊತೆಯಟವಾಡಿ 116 ಕಲೆಹಾಕಿತು. 


ಇದನ್ನೂ ಓದಿ: ICC ODI Ranking: ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ ಸ್ಮೃತಿ ಮಂಧಾನ..!


ಮೂರನೇ ಕ್ರಮಾಂಕದಲ್ಲಿ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದ ಕ್ವಿಂಟನ್‌ ಡಿ ಕಾಕ್‌(Quinton de kock) 40 ಎಸತಗಳನ್ನು ಆಡಿ 7 ಬೌಂಡರಿ 5 ಸಿಕ್ಸರ್‌ ಸಿಡಿಸಿ ಅರ್ಧ ಶತಕ ಭಾರಸಿದರು. 74 ರನ್‌ ಗಳಿಸುವ ಮೂಲಕ ಕ್ವಿಂಟನ್‌ ಡಿ ಕಾಕ್‌(Quinton de kock) ಎದುರಾಳಿ ತಂಡಕ್ಕೆ ತಮ್ಮ ವಿಕೆಟ್‌ ಒಪ್ಪಿಸಿದರು. ಇನ್ನೂ ತಂಡದ ನಾಯಕ ಏಡನ್‌ ಮಾರ್ಕ್ರಾಮ್‌(Aiden markram) 32 ಎಸೆತಗಳ ಆಟವಾಡಿ 46 ರನ್‌ ಸಿಡಿಸಿ ಫೀಲ್ಡ್‌ ನಿಂದ ಹೊರ ನಡೆದರು. 


ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಎದುರಾಳಿ ತಂಡಕ್ಕೆ 194 ರನ್‌ಗಳ ಟಾರ್ಗೆಟ್‌ ನೀಡಿತ್ತು. 
ನಂತರ ಟಾರ್ಗೆಟ್‌ ಬೆನ್ನತ್ತಿದ ಯುಎಸ್‌ಎ ತಂಡದ ಪರ ಆಂಡ್ರೀಸ್‌ ಗೌಸ್‌(Andries Gous) ಫೀಲ್ಡ್‌ಗೆ ಇಳಿದಿದ್ದರು. 47 ಎತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿ 80 ರನ್‌ ಕಲೆಹಾಕುವ ಮೂಲಕ ಯುಎಸ್‌ಎ ತಂಡಕ್ಕೆ ತೋಳ್‌ಬಲವಾಗಿ ನಿಂತಿದ್ದರು. ಆದರೂ ಕೂಡ ಯುಎಸ್‌ಎ ತಂಡ ಹರಿಣಗಳ ಎದುರು 18 ರನ್‌ ಗಳ ಸೋಲು ಕಾಣಬೇಕಾಗಿ ಬಂತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.